ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕಾರಣಿಗಳನ್ನು ಮಿಮಿಕ್ರಿ ಮಾಡಿದ್ದ ಆಟಿಕೆ ವ್ಯಾಪಾರಿ ಬಂಧನ

|
Google Oneindia Kannada News

ಅಹಮದಾಬಾದ್, ಜೂನ್ 1: ರೈಲಿನಲ್ಲಿ ಆಟಿಕೆಗಳನ್ನು ಮಾರಾಟ ಮಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ರಾಜಕಾರಣಿಗಳನ್ನು ಮಿಮಿಕ್ರಿ ಮಾಡಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ಗುಜರಾತ್‌ನ ಸೂರತ್ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಆಟಿಕೆ ವ್ಯಾಪಾರಿ ಅವಧೇಶ್ ದುಬೆ ಎಂಬಾತನನ್ನು ರೈಲ್ವೆ ಸುರಕ್ಷತಾ ಪಡೆ ಸಿಬ್ಬಂದಿ ಶುಕ್ರವಾರ ಬಂಧಿಸಿದ್ದಾರೆ. ಈತ ರಾಜಕಾರಣಿಗಳ ಧ್ವನಿಯನ್ನು ಅಣಕಿಸಿ ಮಾತನಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದೇ ಈತನಿಗೆ ಮುಳುವಾಗಿ ಪರಿಣಮಿಸಿದೆ.

ರೈಲ್ವೆ ಪೊಲೀಸರ ಈ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ರಾಜಕಾರಣಿಗಳನ್ನು ಅಣಕಿಸಿ ಮಾತನಾಡಿದ್ದಕ್ಕೆ ಬಡ ವ್ಯಾಪಾರಿಯೊಬ್ಬನನ್ನು ಬಂಧಿಸುವುದು ಎಷ್ಟು ಸರಿ? ಆತನ ಮಾಡಿದ ಅಪರಾಧ ಹಾನಿಕರವಲ್ಲ. ಆತ ಜನರನ್ನು ರಂಜಿಸಿದ್ದಾನಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

30 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಯೋಧ ಭಾರತೀಯ ಪ್ರಜೆಯೇ ಅಲ್ಲವಂತೆ! 30 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಯೋಧ ಭಾರತೀಯ ಪ್ರಜೆಯೇ ಅಲ್ಲವಂತೆ!

ರೈಲ್ವೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದುಬೆ ವಿರುದ್ಧ ಆರ್‌ಪಿಎಫ್ ಸಿಬ್ಬಂದಿ ಎಫ್‌ಐಆರ್ ದಾಖಲಿಸಿದ್ದರು. ಸೆಕ್ಷನ್ 44 (ಜೋರಾಗಿ ಕೂಗುತ್ತಾ ವ್ಯಾಪಾರ ಮಾಡುವುದು ಮತ್ತು ಭಿಕ್ಷಾಟನೆ ನಿಷೇಧ), 145 ಬಿ (ರೈಲ್ವೆ ಬೋಗಿಗಳಲ್ಲಿ ಪ್ರಯಾಣಿಕರಿಗೆ ಉಪದ್ರವ ಕೊಡುವುದು ಅಥವಾ ನಿಂದನಾರ್ಹ ಭಾಷೆಗಳನ್ನು ಬಳಸುವುದು) ಮತ್ತು ಸೆಕ್ಷನ್ 147 (ರೈಲಿನೊಳಗೆ ಅಕ್ರಮವಾಗಿ ಪ್ರವೇಶಿಸುವುದು) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Array

ಅಣಕವೇ ವ್ಯಾಪಾರದ ಕೌಶಲ

ರೈಲಿನಲ್ಲಿ ಪ್ರಯಾಣಿಕರಿಗೆ ಆಟಿಕೆಗಳನ್ನು ಮಾರಾಟ ಮಾಡಲು ಬರುತ್ತಿದ್ದ ದುಬೆ, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮುಖಂಡರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಅನುಕರಿಸುವ, ಅವರನ್ನು ಅಣಕಿಸುವ ಆರು ನಿಮಿಷದ ವಿಡಿಯೋ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಆತನ ವ್ಯಾಪಾರದ ಕೌಶಲವನ್ನು ಮೆಚ್ಚಿಕೊಂಡವರೊಬ್ಬರು ವಿಡಿಯೋ ಚಿತ್ರೀಕರಿಸಿದ್ದರು. ಬಳಿಕ ಅದು ಎಲ್ಲೆಡೆ ವೈರಲ್ ಆಗಿತ್ತು.

ವೆಬ್‌ಸೈಟ್‌ನಲ್ಲಿ ಅಶ್ಲೀಲ ಜಾಹೀರಾತು: ದೂರುದಾರನಿಗೆ ಭಾರತೀಯ ರೈಲ್ವೆ ಕೊಟ್ಟ ಸಲಹೆ ಇದು! ವೆಬ್‌ಸೈಟ್‌ನಲ್ಲಿ ಅಶ್ಲೀಲ ಜಾಹೀರಾತು: ದೂರುದಾರನಿಗೆ ಭಾರತೀಯ ರೈಲ್ವೆ ಕೊಟ್ಟ ಸಲಹೆ ಇದು!

ವಾರಣಾಸಿ ಮೂಲದ ವ್ಯಕ್ತಿ

ವಾರಣಾಸಿ ಮೂಲದ ವ್ಯಕ್ತಿ

ವಾರಣಾಸಿ ಮೂಲದ ದುಬೆ, ಎರಡು ವರ್ಷಗಳ ಹಿಂದೆ ವಲಸಾದ್‌ಗೆ ವಲಸೆ ಹೋಗಿದ್ದ. ಅಲ್ಲಿ ಅವರು ರೈಲುಗಳಲ್ಲಿ ಪ್ರಯಾಣಿಕರಿಗೆ ಆಟಿಕೆಗಳನ್ನು ಮಾರಾಟ ಮಾಡುತ್ತಿದ್ದ. ಅನಧಿಕೃತ ವ್ಯಾಪಾರ ನಡೆಸಿದ್ದಕ್ಕಾಗಿ ಆತನ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಆರ್‌ಪಿಎಫ್‌ನ ಇನ್‌ಸ್ಪೆಕ್ಟರ್ ಈಶ್ವರ್ ಸಿಂಗ್ ಯಾದವ್ ತಿಳಿಸಿದ್ದಾರೆ. ಆತನನ್ನು ಹತ್ತು ವರ್ಷಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇತ್ತ ನೋಡಿ ಪಿಯೂಷ್ ಗೋಯಲ್

ಪಿಯೂಷ್ ಗೋಯಲ್ ಸರ್, ರಾಜಕಾರಣಿಗಳನ್ನು ಮಿಮಿಕ್ರಿಮಾಡಿದ ಅವಧೇಶ್ ದುಬೆ ಅವರ ಶೈಲಿಯನ್ನು ಮೆಚ್ಚಿಕೊಂಡ ಉತ್ತಮ ಹಾಸ್ಯ ಪ್ರಜ್ಞೆಯುಳ್ಳ ಜನರೊಂದಿಗೆ ನೀವು ಇರುತ್ತೀರಿ ಎಂದು ನಂಬುತ್ತೇನೆ. ಈ ಪ್ರಕರಣದಲ್ಲಿ ನೀವು ಕೂಡಲೇ ಮಧ್ಯಪ್ರವೇಶಿಸುತ್ತೀರೆಂಬ ವಿಶ್ವಾಸವಿದೆ ಎಂದು ದಿಲೀಪ್ ಥೋಸರ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಗ್ರೆನೇಡ್ ಪತ್ತೆ, ತೀವ್ರ ಆತಂಕ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಗ್ರೆನೇಡ್ ಪತ್ತೆ, ತೀವ್ರ ಆತಂಕ

ಏಕೆ ಉದ್ಯಮಿಗಳಾಗುವುದಿಲ್ಲ ನೋಡಿ

ಭಯೋತ್ಪಾದನೆ ಆರೋಪಿ ಸಂಸತ್‌ಗೆ ಹೋಗಬಹುದು. ಆದರೆ ತಮಾಷೆಯಾಗಿ ಮಾತನಾಡುವ ಆಟಿಕೆ ವ್ಯಾಪಾರಿ ಮತ್ತು ಮೋದಿ ಬೆಂಬಲಿಗ ಪ್ರಾಮಾಣಿಕ ಬದುಕಿಗೆ ಪ್ರಯತ್ನಿಸುವ ಅವಧೇಶ್ ದುಬೆ ಅವರನ್ನು ಆರ್‌ಪಿಎಫ್ ಬಂಧಿಸಿ 10 ದಿನಗಳ ಕಾಲ ಜೈಲಿಗೆ ಕಳುಹಿಸಿದೆ. ಏಕೆಂದರೆ ಆತನ ಬಳಿ 'ಪರ್ಮಿಟ್' ಇರಲಿಲ್ಲ. ಭಾರತೀಯರು ಏಕೆ ಉದ್ಯಮಿಗಳಾಗಲು ಭಯಪಡುತ್ತಾರೆ ಎಂದು ಮುಂದಿನ ಬಾರಿ ಪ್ರಶ್ನಿಸಬೇಡಿ ಎಂದು ಆಕಾಶ್ ಬ್ಯಾನರ್ಜಿ ಎಂಬುವವರು ಕಿಡಿಕಾರಿದ್ದಾರೆ.

English summary
A train hawker who was selling toys on trains was arrested on Friday by RPF in Gujarat's Surat, after a video of him mimicking politicians including PM Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X