ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ವರ್ಷಗಳಿಂದ ಕೋಣೆಯಲ್ಲೇ ಬಂಧಿಯಾದ ಒಡಹುಟ್ಟಿದವರು

|
Google Oneindia Kannada News

ಅಹಮದಾಬಾದ್, ಡಿಸೆಂಬರ್ 29: ಸುಮಾರು ಹತ್ತು ವರ್ಷಗಳಿಂದ ಒಂದೇ ಕೋಣೆಯಲ್ಲಿ ಇಬ್ಬರು ಸಹೋದರರು, ಸಹೋದರಿ ಬಂಧಿಯಾಗಿರುವ ಹೃದಯ ವಿದ್ರಾವಕ ಸಂಗತಿ ಗುಜರಾತ್ ನ ರಾಜಾಕೋಟ್ ಎಂಬಲ್ಲಿ ಬೆಳಕಿಗೆ ಬಂದಿದೆ.

30 ರಿಂದ 42 ವಯೋಮಾನದ ಈ ಸಹೋದರಿ ಸಹೋದರರು ಸುಮಾರು ಹತ್ತು ವರ್ಷಗಳ ಕಾಲ ಹೊರ ಪ್ರಪಂಚವನ್ನೇ ಕಂಡಿಲ್ಲ. ಸೂರ್ಯನ ಬೆಳಕು ಬೀಳದ ಕೋಣೆಯಲ್ಲೇ ಬಂಧಿಯಾಗಿರುವ ಇವರನ್ನು ಡಿ.27ರಂದು ಸ್ವಯಂ ಸೇವಾ ಸಂಸ್ಥೆ ಸಾಥಿ ರಕ್ಷಣೆ ಮಾಡಿದೆ. ಈ ಎಲ್ಲರೂ ಉನ್ನತ ಶಿಕ್ಷಣ ಪಡೆದವರಾಗಿದ್ದು, ವಿಶ್ವವಿದ್ಯಾಲಯದಿಂದ ಪದವಿ ಪಡೆದುಕೊಂಡವರಾಗಿದ್ದಾರೆ.

ಆದರೆ ಏಕೆ ಹೀಗೆ ಕೋಣೆಯಲ್ಲಿ ಬಂಧಿಯಾಗಿದ್ದಾರೆ ಎಂಬ ಕುರಿತು ಸ್ಪಷ್ಟ ಮಾಹಿತಿ ದೊರೆತಿಲ್ಲ.

ಕೊರೊನಾ: ತೆಲಂಗಾಣದಲ್ಲಿ ವಿವಾಹ ಬಂಧನಕ್ಕಾಗಿ ಗೃಹ ಬಂಧನ ನಿರಾಕರಿಸಿದ ವರಕೊರೊನಾ: ತೆಲಂಗಾಣದಲ್ಲಿ ವಿವಾಹ ಬಂಧನಕ್ಕಾಗಿ ಗೃಹ ಬಂಧನ ನಿರಾಕರಿಸಿದ ವರ

42 ವರ್ಷದ ಅಮರಿಶಾ ಮೆಹ್ತಾ ಬಿಎ, ಎಲ್ ಎಲ್ ಬಿ ಪದವಿ ಪಡೆದಿದ್ದರು. 39 ವರ್ಷದ ಮೇಘನಾ ಮೆಹ್ತಾ ಮನಃಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, 30 ವರ್ಷದ ಭಾವೇಶ್ ಮೆಹ್ತಾ ಕೂಡ ಬಿಎ ಪದವಿ ಪಡೆದಿದ್ದರು. ಒಂದೇ ಕೋಣೆಯಲ್ಲಿ ಹಲವು ವರ್ಷಗಳಿಂದ ಇವರೆಲ್ಲರೂ ಬಂಧಿತರಾಗಿದ್ದು, ಅಪೌಷ್ಟಿಕತೆಯಿಂದ ಅಸ್ವಸ್ಥರಾಗಿದ್ದರು ಎಂದು ತಿಳಿದುಬಂದಿದೆ. ಇಡೀ ಕೋಣೆಯು ಕೊಳಕಾಗಿ ಗಬ್ಬು ನಾರುತ್ತಿದ್ದು, ಇಂಥ ವಾತಾವರಣದಲ್ಲಿ ಮೂವರು ಬದುಕುತ್ತಿದ್ದರು ಎಂದು ಸ್ವಯಂಸೇವಾ ಸಂಸ್ಥೆ ಸದಸ್ಯರು ತಿಳಿಸಿದ್ದಾರೆ.

Three Graduate Sibligns Locked In Room For 10 Years At Gujrat

ತಮ್ಮ ತಾಯಿ ತೀರಿಕೊಳ್ಳುತ್ತಿದ್ದಂತೆ ತಾವೇ ಪ್ರಪಂಚದೊಂದಿಗೆ ಸಂಪರ್ಕ ಕಡಿದುಕೊಂಡು ಮೂವರೂ ಸ್ವಯಂ ಬಂಧನಕ್ಕೆ ಒಳಗಾದರು ಎಂದು ತಂದೆ ನವೀನ್ ತಿಳಿಸಿದ್ದು, ದಿನ ತಾವೇ ಊಟ ಇಟ್ಟು ಹೋಗುತ್ತಿದ್ದುದಾಗಿ ತಿಳಿಸಿದ್ದಾರೆ. ಆದರೆ ಈ ಕುರಿತು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
Three well educated brothers and sister kept locked in dark room for 10 years in gujrat,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X