• search
 • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋವಿಡ್; ಟೀ ಅಂಗಡಿ ಮಾಲೀಕನಿಂದ ಉಚಿತ ಮಾಸ್ಕ್ ವಿತರಣೆ

|

ಅಹಮದಾಬಾದ್, ಡಿಸೆಂಬರ್ 03: ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಮಾಸ್ಕ್ ಧರಿಸುವುದು ಅನಿವಾರ್ಯವಾಗಿದೆ. ಮಾಸ್ಕ್ ಧರಿಸದಿದ್ದರೆ ದಂಡವನ್ನು ಸಹ ಕಟ್ಟಬೇಕಾಗುತ್ತದೆ. ಇಲ್ಲೊಬ್ಬರು ವ್ಯಾಪಾರಿ ಜನರಿಗೆ ಉಚಿತವಾಗಿ ಮಾಸ್ಕ್ ವಿತರಣೆ ಮಾಡುತ್ತಿದ್ದಾರೆ.

ಗುಜರಾತ್‌ನ ವಡೋದರಾದಲ್ಲಿ ಸಪನ್ ಮಚ್ಚಿ ಎಂಬುವವರು ಟೀ ಅಂಗಡಿ ನಡೆಸುತ್ತಿದ್ದಾರೆ. ಇಲ್ಲಿನ ವಿಶೇಷ ಎಂದರೆ ಟೀ ಕುಡಿಯಲು ಬರುವ ಜನರಿಗೆ ಉಚಿತವಾಗಿ ಮಾಸ್ಕ್ ನೀಡಲಾಗುತ್ತಿದೆ. ಕೋವಿಡ್ ಪರಿಸ್ಥಿತಿ ಆರಂಭವಾದ ದಿನದಿಂದ ಹೀಗೆ ಮಾಸ್ಕ್ ವಿತರಣೆ ಮಾಡಲಾಗುತ್ತಿದೆ.

ಮುಂಬೈನಲ್ಲಿ ಮಾಸ್ಕ್ ಧರಿಸದ ವ್ಯಕ್ತಿಗಳಿಂದ 10 ಕೋಟಿ ದಂಡ ಸಂಗ್ರಹ!

ವಿಶ್ವವನ್ನೇ ಕಾಡುತ್ತಿರುವ ಕೋವಿಡ್ ಮಹಾಮಾರಿ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಕಳೆದ 8 ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿದೆ. ಸಪನ್ ಮಚ್ಚಿ ಅವರು ಉಚಿತವಾಗಿ ಮಾಸ್ಕ್ ವಿತರಣೆ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಕೊರೊನಾವೈರಸ್ ಸೋಂಕು ನಿಯಂತ್ರಣಕ್ಕೆ 'ಮಾಸ್ಕ್ ಮದ್ದು'!

"ಇದುವರೆಗೂ 650ಕ್ಕೂ ಹೆಚ್ಚು ಮಾಸ್ಕ್‌ಗಳನ್ನು ತಮ್ಮ ಅಂಗಡಿಗೆ ಟೀ ಕುಡಿಯಲು ಬಂದ ಗ್ರಾಹಕರಿಗೆ ವಿತರಣೆ ಮಾಡಿದ್ದೇನೆ. ಕೋವಿಡ್ ನಿಯಂತ್ರಣಕ್ಕೆ ಬರುವ ತನಕ ಇದನ್ನು ಮುಂದುವರೆಸುತ್ತೇನೆ" ಎಂದು ಸಪನ್ ಮಚ್ಚಿ ಹೇಳಿದ್ದಾರೆ.

ಮಾಸ್ಕ್ ಧರಿಸದವರಿಗೆ ದಂಡದ ಮೊತ್ತ 500 ರಿಂದ 2000 ರೂಗೆ ಏರಿಕೆ

ಬುಧವಾರ ಗುಜರಾತ್‌ನಲ್ಲಿ 1,512 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 2,12,769 ಆಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 14,713 ಆಗಿದೆ.

   Ind vs Aus 1st T20 ನಾಳೆ ನಡೆಯಲಿದ್ದು , ಸೇಡು ತೀರಿಸಿಕೊಳ್ಳಲು ಭಾರತ ಸಿದ್ದ | Oneindia Kannada

   ಡಿಸೆಂಬರ್ 2ರಂದು ವಡೋದರಾದಲ್ಲಿ 176 ಹೊಸ ಪ್ರಕರಣಗಳು ಪತ್ತೆಯಾಗಿದೆ. ನಗರದ ಒಟ್ಟು ಸೋಂಕಿತರ ಸಂಖ್ಯೆ 20,456. ನಗರದಲ್ಲಿನ ಸಕ್ರಿಯ ಪ್ರಕರಣಗಳು 1856. ಇದುವರೆಗೂ 222 ಜನರು ನಗರದಲ್ಲಿ ಮೃತಪಟ್ಟಿದ್ದಾರೆ.

   English summary
   Tea seller in Gujarat Vadodara distributes free mask to his customers with a cup of tea to spread awareness on COVID-19. Till date he distributed more than 650 masks.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X