• search
 • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೂರತ್‌ನಲ್ಲಿ ವಜ್ರದ ಮಾಸ್ಕ್‌ ಮಾರಾಟ: 1.5 ಲಕ್ಷದಿಂದ 4 ಲಕ್ಷ ರುಪಾಯಿ

|

ನವದೆಹಲಿ, ಜುಲೈ 11: ಭಾರತದಲ್ಲಿ ಕೊರೊನಾವೈರಸ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಲಾಕ್‌ಡೌನ್‌ಗೆ ಹೋಲಿಸಿದರೆ ಸದ್ಯ ವ್ಯಾಪಾರ-ವಹಿವಾಟಿಗೆ ಸ್ವಲ್ಪ ಮಟ್ಟಗೆ ರಿಲೀಫ್ ಸಿಕ್ಕಿದೆ. ಇದೇ ಸಂದರ್ಭದಲ್ಲಿ ಸೂರತ್‌ನ ಆಭರಣ ಅಂಗಡಿಯೊಂದು ಸಾಂಕ್ರಾಮಿಕ ರೋಗದ ನಡುವೆ ಮದುವೆಯಾಗಲು ಹೋಗುವ ಗ್ರಾಹಕರನ್ನು ಗುರಿಯಾಗಿಸಿಕೊಂಡಿದೆ.

   India and China both wants peace says China | Oneindia Kannada

   ಸೂರತ್‌ನ ಆಭರಣದ ವ್ಯಾಪಾರಿ 1.5 ಲಕ್ಷದಿಂದ 4 ಲಕ್ಷದವರೆಗೆ ವಜ್ರದಿಂದ ಅಲಂಕಾರಗೊಂಡ ಮಾಸ್ಕ್‌ಗಳನ್ನು ಮಾರಾಟ ಮಾಡುತ್ತಿದ್ದಾನೆ..

   ವಿಶ್ವದ 2ನೇ ದೊಡ್ಡ ವಜ್ರ ಕೋಟ್ಯಾಧಿಪತಿಯ ಪಾಲು, ಯಾರದು ಗೊತ್ತೆ?

   "ಲಾಕ್‌ಡೌನ್ ಸಡಿಲಗೊಂಡ ಮೇಲೆ, ಮನೆಯಲ್ಲೇ ವಿವಾಹವನ್ನು ಆಗುವ ಗ್ರಾಹಕರು ನಮ್ಮ ಅಂಗಡಿಗೆ ಬಂದು ವಧು ಮತ್ತು ವರರಿಗೆ ವಿಶಿಷ್ಟ ಮಾಸ್ಕ್‌ಗಳನ್ನು ಕೋರಿದರು" ಎಂದು ಗುಜರಾತ್‌ನ ಅಂಗಡಿಯ ಮಾಲೀಕರು ಹೇಳುತ್ತಾರೆ.

   ''ಈ ರೀತಿಯ ಹೊಸ ಬೇಡಿಕೆಗಳು ಸೃಷ್ಟಿಯಾದ ಬಳಿಕ ಬೆಲೆಬಾಳುವ ಮಾಸ್ಕ್‌ ರಚಿಸಲು ನಾವು ನಮ್ಮ ವಿನ್ಯಾಸಕರನ್ನು ನಿಯೋಜಿಸಿದ್ದೇವೆ. ಇದರ ನಂತರ, ಮುಂಬರುವ ದಿನಗಳಲ್ಲಿ ಜನರಿಗೆ ಅಗತ್ಯವಿರುವಂತೆ ನಾವು ಈ ಮುಖವಾಡಗಳನ್ನು ವ್ಯಾಪಕವಾಗಿ ತಯಾರಿಸಿದ್ದೇವೆ. ಈ ಮುಖವಾಡಗಳನ್ನು ತಯಾರಿಸಲು ಶುದ್ಧ ವಜ್ರ ಮತ್ತು ಅಮೆರಿಕನ್ ವಜ್ರವನ್ನು ಚಿನ್ನದೊಂದಿಗೆ ಬಳಸಲಾಗಿದೆ'' ಎಂದು ಆಭರಣ ಅಂಗಡಿ ಮಾಲೀಕರು ತಿಳಿಸಿದ್ದಾರೆ.

   ಈ ತಿಂಗಳ ಆರಂಭದಲ್ಲಿ, ಪುಣೆ ಜಿಲ್ಲೆಯ ಪಿಂಪ್ರಿ-ಚಿಂಚ್‌ವಾಡ್‌ನ ನಿವಾಸಿ ಶಂಕರ್ ಕುರಾಡೆ ಅವರು ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆಯು 2.89 ಲಕ್ಷ ಮೌಲ್ಯದ ಚಿನ್ನದಿಂದ ಮಾಡಿದ ಮಾಸ್ಕ್‌ಗಳನ್ನು ಪಡೆದಿದ್ದಾರೆ.

   English summary
   The jeweller in Surat is selling diamond-studded masks ranging between 1.5 lakhs to 4 lakhs.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X