ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ಯಾಜ್ಯ ವಿಲೇವಾರಿ ಟ್ರಕ್‌ನಲ್ಲಿ ವೆಂಟಿಲೇಟರ್ ಸಾಗಿಸಿದ ಪಾಲಿಕೆ!

|
Google Oneindia Kannada News

ಅಹಮದಾಬಾದ್, ಏಪ್ರಿಲ್ 6: ದೇಶದಲ್ಲಿ ಕೋವಿಡ್ ಸೋಂಕು ಹರಡಲು ಆರಂಭವಾದಾಗ ಹೆಚ್ಚು ಚರ್ಚೆಯಾಗಿದ್ದು, ವೆಂಟಿಲೇಟರ್‌ಗಳ ಲಭ್ಯತೆ ಬಗ್ಗೆ. ಈಗ ಪ್ರಕರಣಗಳ ಸಂಖ್ಯೆ ಮತ್ತೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಅನೇಕ ಕಡೆ ವೆಂಟಿಲೇಟರ್‌ಗಳ ಕೊರತೆ ಸಮಸ್ಯೆಯೇನೂ ಬಗೆಹರಿದಿಲ್ಲ. ವೆಂಟಿಲೇಟರ್ ಅಗತ್ಯವಿರುವ ಆಸ್ಪತ್ರೆಗಳಿಗೆ ಬೇರೆ ಆಸ್ಪತ್ರೆಗಳಿಂದ ಸರಬರಾಜು ಮಾಡಲಾಗುತ್ತಿದೆ. ಆದರೆ ಪ್ರಧಾನಿ ತವರೂರು ಗುಜರಾತ್‌ನಲ್ಲಿ ಕಸ ಸಾಗಿಸುವ ಟ್ರಕ್‌ನಲ್ಲಿ ವೆಂಟಿಲೇಟರ್‌ಗಳನ್ನು ಸಾಗಿಸಲಾಗಿದೆ.

ಗುಜರಾತ್‌ನಲ್ಲಿ ದೈನಂದಿನ ಕೊರೊನಾ ವೈರಸ್ ಪ್ರಕರಣ 3,000ಕ್ಕೆ ತಲುಪಿದೆ. ಇದರ ನಡುವೆ ರಾಜ್ಯದಲ್ಲಿ ವೆಂಟಿಲೇಟರ್ ಕೊರತೆ ಉಂಟಾಗಿದೆ. ಸೂರತ್ ಜಿಲ್ಲೆಯಲ್ಲಿ ಆಸ್ಪತ್ರೆಯೊಂದಕ್ಕೆ 34 ವೆಂಟಿಲೇಟರ್‌ಗಳನ್ನು ತ್ಯಾಜ್ಯ ವಿಲೇವಾರಿ ಟ್ರಕ್‌ನಲ್ಲಿ ಪೂರೈಕೆ ಮಾಡಿರುವುದು ಟೀಕೆಗೆ ಒಳಗಾಗಿದೆ.

Surat Municipal Transported Ventilators In Garbage Truck From Valsad

ಕೊರೊನಾ ಏರಿಕೆ; ಮೂರು ರಾಜ್ಯಗಳಿಗೆ 50 ತಂಡಗಳನ್ನು ನಿಯೋಜಿಸಿದ ಕೇಂದ್ರ ಕೊರೊನಾ ಏರಿಕೆ; ಮೂರು ರಾಜ್ಯಗಳಿಗೆ 50 ತಂಡಗಳನ್ನು ನಿಯೋಜಿಸಿದ ಕೇಂದ್ರ

ವಲ್ಸದ್‌ನಿಂದ ಸೂರತ್‌ಗೆ 34 ವೆಂಟಿಲೇಟರ್‌ಗಳನ್ನು ಕಳುಹಿಸುವಂತೆ ಸರ್ಕಾರ ಆದೇಶಿಸಿತ್ತು. ವೆಂಟಿಲೇಟರ್ ಕೊರತೆ ನೀಗಿಸಲು ಈ ಸೂಚನೆ ನೀಡಲಾಗಿತ್ತು. ಈ ಆದೇಶದ ಬಳಿಕ ಸೂರತ್ ನಗರ ಪಾಲಿಕೆಯು ವಲ್ಸದ್‌ನಿಂದ ವೆಂಟಿಲೇಟರ್‌ಗಳನ್ನು ತರಲು ತ್ಯಾಜ್ಯ ವಿಲೇವಾರಿ ಟ್ರಕ್ ಅನ್ನು ಕಳುಹಿಸಿತ್ತು.

ಸೂರತ್ ನಗರ ಪಾಲಿಕೆಯು ಕಳುಹಿಸಿದ ತ್ಯಾಜ್ಯ ವಿಲೇವಾರಿ ಟ್ರಕ್‌ನಲ್ಲಿ ವೆಂಟಿಲೇಟರ್‌ಗಳನ್ನು ಕಳುಹಿಸಿರುವ ಬಗ್ಗೆ ತಮಗೆ ಮಾಹಿತಿ ಬಂದಿದ್ದು, ಈ ಕುರಿತು ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ವಲ್ಸದ್ ಡಿಸಿ ಆರ್ ಆರ್ ರಾವಲ್ ತಿಳಿಸಿದ್ದಾರೆ.

Recommended Video

Rafale ಯುದ್ಧ ವಿಮಾನದ ಮತ್ತೊಂದು ಕರ್ಮ ಕಾಂಡ ಬಯಲು | Oneindia Kannada

ಗುಜರಾತ್‌ನಲ್ಲಿ ಸೋಮವಾರ ಮೊದಲ ಬಾರಿಗೆ ದೈನಂದಿ ಕೋವಿಡ್ ಪ್ರಕರಣ 3,000ದ ಗಡಿ ದಾಟಿದೆ. 3,160 ಹೊಸ ಪ್ರಕರಣಗಳೊಂದಿಗೆ ಒಟ್ಟು ಪ್ರಕರಣಗಳು 3,21,598ಕ್ಕೆ ಏರಿಕೆಯಾಗಿದೆ.

English summary
Surat Municipal Corporation has transported 34 ventilators in a garbage truck from Valsad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X