• search
 • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಡವರಿಗಾಗಿ ಕಚೇರಿಯನ್ನು ಕೋವಿಡ್ ಆಸ್ಪತ್ರೆ ಮಾಡಿದ ಉದ್ಯಮಿ!

|

ಅಹಮದಾಬಾದ್, ಜುಲೈ 29 : ಗುಜರಾತ್ನ ಸೂರತ್ ಉದ್ಯಮಿಯೊಬ್ಬರು ತಮ್ಮ ಕಚೇರಿಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಿದ್ದಾರೆ. ಆಸ್ಪತ್ರೆಯಲ್ಲಿ 85 ಹಾಸಿಗೆಗಳು ಇದ್ದು ಬಡವರಿಗೆ ಇಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ.

   Rafael fighter jet lands in India | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಖಾದರ್ ಶೇಕ್ ಎಂಬ ಉದ್ಯಮಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಸರ್ಕಾರಿ ಆಸ್ಪತ್ರೆಗಳು ಅವರನ್ನು ದಾಖಲು ಮಾಡಿಕೊಳ್ಳಲಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಅವರು 20 ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಮುಖರಾದರು.

   ಅಪೊಲೋ ಆಸ್ಪತ್ರೆ ವಿರುದ್ಧ ಕ್ರಮ; ಕೆ. ಸುಧಾಕರ್ ಟ್ವೀಟ್

   ಆಸ್ಪತ್ರೆಯ ಬಿಲ್ ನೋಡಿದ ಅವರು ಬಡವರು ಹೇಗೆ ಕೋವಿಡ್ ಚಿಕಿತ್ಸೆ ಪಡೆಯಬೇಕು? ಎಂದು ಚಿಂತಿಸಿದರು. ಬಳಿಕ ತಮ್ಮ ಕಚೇರಿಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆ ಮಾಡಿದ್ದಾರೆ. 85 ರೋಗಿಗಳು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು.

   ಕೋವಿಡ್ ಚಿಕಿತ್ಸೆ; ಆಸ್ಪತ್ರೆಗಳ ಜವಾಬ್ದಾರಿ ಬಗ್ಗೆ ತಿಳಿಯಿರಿ

   "ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ ಹೆಚ್ಚಿನ ದರವಿದೆ. ಬಡವರು ಹೇಗೆ ಚಿಕಿತ್ಸೆ ಪಡೆಯಬೇಕು?" ಎಂದು ರಿಯಲ್ ಎಸ್ಟೇಟ್ ಉದ್ಯಮ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

   ಹೊಸಪೇಟೆ: 1000ಬೆಡ್ ತಾತ್ಕಾಲಿಕ ಕೋವಿಡ್ ಆಸ್ಪತ್ರೆ ನಿರ್ಮಿಸಿ

   ಕಚೇರಿಯನ್ನು ಆಸ್ಪತ್ರೆಯಾಗಿ ಪರಿರ್ತನೆ ಮಾಡುವ ಬಗ್ಗೆ ಸ್ಥಳೀಯ ಆಡಳಿತಕ್ಕೆ ಖಾದರ್ ಶೇಕ್ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ಬೇಕಾದ ಸಿಬ್ಬಂದಿಯನ್ನು ಸ್ಥಳೀಯ ಆಡಳಿತ ಒದಗಿಸಲಿದೆ. ಹಾಸಿಗೆಗಳನ್ನು ಅವರೇ ಖರೀದಿಸಿ ತಂದಿದ್ದಾರೆ. ಪ್ರತ್ಯೇಕ ಲೈನ್ ಮೂಲಕ ವಿದ್ಯುತ್ ವ್ಯವಸ್ಥೆಯನ್ನು ಮಾಡಿಸಿದ್ದಾರೆ.

   "ಈ ಆಸ್ಪತ್ರೆಗೆ ಜಾತಿ, ಧರ್ಮದ ಹಂಗಿಲ್ಲದೇ ಯಾರೂ ಬೇಕಾದರೂ ದಾಖಲಾಗಬಹುದು" ಎಂದು ಉದ್ಯಮಿ ಹೇಳಿದ್ದಾರೆ. ಸೂರತ್‌ನಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ 12,223, 379 ಜನರು ಇದುವರೆಗೂ ಮೃತಪಟ್ಟಿದ್ದಾರೆ.

   English summary
   Surat based businessman who recovered from Coronavirus has converted his office into hospital to provide free treatment for the poor. The cost of treatment at a private hospital was huge. How could poor people afford such treatment he asked.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X