ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡವರಿಗೆ ಅಪಾರ್ಟ್‌ಮೆಂಟ್‌ನಲ್ಲಿ ಆಶ್ರಯ ಕೊಟ್ಟ ಉದ್ಯಮಿ!

|
Google Oneindia Kannada News

ಸೂರತ್, ಸೆಪ್ಟೆಂಬರ್ 16: ಕೋವಿಡ್ ಸಂದರ್ಭದಲ್ಲಿ ಮನೆಯ ಬಾಡಿಗೆ ಕಟ್ಟಲಾಗದೆ ಬಡ, ಮಧ್ಯಮ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೂರತ್‌ನ ಉದ್ಯಮಿಯೊಬ್ಬರು ಇಂತಹ ಕುಟುಂಬಗಳಿಗೆ ಅಪಾರ್ಟ್‌ಮೆಂಟ್‌ನಲ್ಲಿ ಆಶ್ರಯ ನೀಡಿ ಮಾದರಿಯಾಗಿದ್ದಾರೆ.

ಗುಜರಾತ್‌ನ ಸೂರತ್‌ನ ನಿವಾಸಿ ಪ್ರಕಾಶ್ ಬಾಲಾನಿ ಬಡವರಿಗೆ, ಅಗತ್ಯ ಇರುವ ಜನರಿಗೆ ತಮ್ಮ 5 ಅಂತಸ್ತಿನ ಅಪಾರ್ಟ್‌ಮೆಂಟ್‌ನಲ್ಲಿ ಆಶ್ರಯ ನೀಡಿದ್ದಾರೆ. ಈಗ 20 ದಿನಗಳಿಂದ 42 ಕುಟುಂಬಗಳು ಇಲ್ಲಿ ಆಶ್ರಯ ಪಡೆದಿವೆ.

ಚಿತ್ರಗಳು; ಕಚೇರಿಯನ್ನು ಕೋವಿಡ್ ಆಸ್ಪತ್ರೆ ಮಾಡಿದ ಉದ್ಯಮಿ ಚಿತ್ರಗಳು; ಕಚೇರಿಯನ್ನು ಕೋವಿಡ್ ಆಸ್ಪತ್ರೆ ಮಾಡಿದ ಉದ್ಯಮಿ

ವಜ್ರದ ಉದ್ಯಮದಲ್ಲಿ ಕೆಲಸ ನಿರ್ವಹಿಸುವ, ನಿರ್ಮಾಣ ಕಾಮಗಾರಿಯಲ್ಲಿ ತೊಡಗಿರುವ ಬಡ ಕಾರ್ಮಿಕರನ್ನು ಗುರುತಿಸಿ ಅವರಿಗೆ ಆಶ್ರಯವನ್ನು ನೀಡಿದ್ದಾರೆ. ಒಟ್ಟು 92 ಫ್ಲ್ಯಾಟ್‌ಗಳಿದ್ದು ಎಲ್ಲವನ್ನೂ ಇತಂಹ ಬಡ ಕುಟುಂಬಗಳಿಗೆ ನೀಡಲು ಮುಂದಾಗಿದ್ದಾರೆ.

 ಗುರುವಿಗೆ ಮಿಡಿದ ಮನ; ಗುಡಿಸಲಲ್ಲಿದ್ದ ಶಿಕ್ಷಕಿಗೆ ಮನೆ ಕಟ್ಟಿಕೊಟ್ಟ ವಿದ್ಯಾರ್ಥಿಗಳು ಗುರುವಿಗೆ ಮಿಡಿದ ಮನ; ಗುಡಿಸಲಲ್ಲಿದ್ದ ಶಿಕ್ಷಕಿಗೆ ಮನೆ ಕಟ್ಟಿಕೊಟ್ಟ ವಿದ್ಯಾರ್ಥಿಗಳು

ಅಪಾರ್ಟ್‌ಮೆಂಟ್‌ನಲ್ಲಿ ಎಲ್ಲಾ ವ್ಯವಸ್ಥೆ ಇದ್ದು, ಅಗತ್ಯ ಇರುವವರಿಗೆ ಅಲ್ಲಿಯೇ ಊಟದ ವ್ಯವಸ್ಥೆಯನ್ನು ಮಾಡಿದ್ದಾರೆ. ಈ ಕುಟುಂಬಗಳು ಬಯಸಿದಷ್ಟು ದಿನಗಳ ಕಾಲ ಫ್ಲ್ಯಾಟ್‌ನಲ್ಲಿ ವಾಸ್ತವ್ಯ ಹೂಡಲು ಅವಕಾಶ ನೀಡಲಾಗಿದೆ.

100 ಕೋಟಿ ರು ವಂಚನೆ ಆರೋಪ: ಶಾಸಕರ ಮನೆ ಮೇಲೆ ದಾಳಿ 100 ಕೋಟಿ ರು ವಂಚನೆ ಆರೋಪ: ಶಾಸಕರ ಮನೆ ಮೇಲೆ ದಾಳಿ

ಪ್ರಕಾಶ್ ಬಾಲಾನಿ ಕಾರ್ಯಕ್ಕೆ ಸಲಾಂ

ಪ್ರಕಾಶ್ ಬಾಲಾನಿ ಕಾರ್ಯಕ್ಕೆ ಸಲಾಂ

ಸೂರತ್ ಮೂಲದ ಪ್ರಕಾಶ್ ಬಾಲಾನಿ ರುದ್ರಾಕ್ಷ ಡೆವಲಪರ್ಸ್ ಎಂಬ ರಿಯಲ್ ಎಸ್ಟೇಟ್ ಕಂಪನಿ ನಡೆಸುತ್ತಿದ್ದಾರೆ. ತಾವು ನಿರ್ಮಿಸಿದ್ದ 5 ಅಂತಸ್ತಿನ ಅಪಾರ್ಟ್‌ಮೆಂಟ್‌ನಲ್ಲಿ 42 ಬಡ ಕುಟುಂಬಗಳಿವೆ ವಸತಿ ವ್ಯವಸ್ಥೆ ಮಾಡಿದ್ದಾರೆ.

ನಿರ್ವಹಣಾ ವೆಚ್ಚ ಪಾವತಿಸಬೇಕು

ನಿರ್ವಹಣಾ ವೆಚ್ಚ ಪಾವತಿಸಬೇಕು

ಮನೆ ಬಾಡಿಗೆ ಕಟ್ಟಲು ಸಾಧ್ಯವಾಗದಂತಹ, ತೀರಾ ಅಗತ್ಯ ಇರುವ ಕುಟುಂಬಗಳಿಗೆ ಮನೆಯನ್ನು ನೀಡಿದ್ದಾರೆ. ಆದರೆ, ಇದು ಸಂಪೂರ್ಣ ಉಚಿವಲ್ಲ. ವಿದ್ಯುತ್, ಕಸ, ನೀರು ಹೀಗೆ ನಿರ್ವಹಣಾ ವೆಚ್ಚವಾಗಿ ಪ್ರತಿ ಕುಟುಂಬ 1,500 ರೂ.ಗಳನ್ನು ಪಾವತಿಸಬೇಕು. ಫ್ಲ್ಯಾಟ್‌ನಲ್ಲಿರುವ ಕುಟುಂಬಕ್ಕೆ ಅಗತ್ಯವಿದ್ದರೆ ಆಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.

ಫ್ಲ್ಯಾಟ್‌ಗಳು ಮಾರಾಟ ಆಗಲ್ಲ

ಫ್ಲ್ಯಾಟ್‌ಗಳು ಮಾರಾಟ ಆಗಲ್ಲ

ಎಎನ್‌ಐ ಜೊತೆ ಮಾತನಾಡಿರುವ ಪ್ರಕಾಶ್ ಬಾಲಾನಿ, "ಕೋವಿಡ್ ಸಂದರ್ಭದಲ್ಲಿ 92 ಫ್ಲ್ಯಾಟ್‌ಗಳ ಈ ಅಪಾರ್ಟ್‌ಮೆಂಟ್ ಮಾರಾಟ ಆಗುವುದಿಲ್ಲ. ಅದಕ್ಕಾಗಿ ನಿರ್ವಹಣಾ ವೆಚ್ಚ ಪಡೆದು 42 ಕುಟುಂಬಗಳಿಗೆ ನೀಡಿದ್ದೇನೆ. ಉಳಿದವುಗಳನ್ನು ಬಡವರಿಗೆ ನೀಡುತ್ತೇನೆ. ಅವರು ಬಯಸಿದಷ್ಟು ದಿನ ವಾಸ್ತವ್ಯ ಹೂಡಬಹುದು" ಎಂದು ಹೇಳಿದ್ದಾರೆ.

Recommended Video

Pakistan, OIC ,Turkeyನ ತರಾಟೆಗೆ ತಗೊಂಡ India | Oneindia Kannada
ಹಲವು ಉದ್ಯಮಿಗಳನ್ನು ಸಂಪರ್ಕಿಸಿದ್ದಾರೆ

ಹಲವು ಉದ್ಯಮಿಗಳನ್ನು ಸಂಪರ್ಕಿಸಿದ್ದಾರೆ

ಪ್ರಕಾಶ್ ಬಾಲಾನಿ ತಮ್ಮ ಸ್ನೇಹಿತರ ವಲಯದಲ್ಲಿರುವ ಉದ್ಯಮಿಗಳನ್ನು ಸಂಪರ್ಕಿಸಿದ್ದಾರೆ. ಬಡವರಿಗೆ, ಅಗತ್ಯ ಇರುವವರಿಗೆ ಫ್ಲ್ಯಾಟ್‌ಗಳನ್ನು ನೀಡುವ ಕುರಿತು ಚರ್ಚಿಸಿದ್ದಾರೆ. ಪ್ರಕಾಶ್ ಅವರ ಕಾರ್ಯಕ್ಕೆ ಹಲವರು ಬೆಂಬಲ ಸೂಚಿಸಿದ್ದಾರೆ.

English summary
Gujarat Surat based builder Prakash Bhalani has accommodated 42 families who are facing financial crisis due to COVID 19 at his constructed buildings. People to pay Rs 1500 as maintenance fee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X