ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಡೆ ಕಟ್ಟಿದ್ದಾಯ್ತು, ಈಗ ಸ್ಲಂನಲ್ಲಿದ್ದ 45 ಕುಟುಂಬಕ್ಕೆ ಗೇಟ್ ಪಾಸ್!

|
Google Oneindia Kannada News

ಅಹಮದಾಬಾದ್, ಫೆಬ್ರವರಿ 18: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತಕ್ಕೆ ಭೇಟಿಯಾದ ಸಂದರ್ಭದಲ್ಲಿ ಎಲ್ಲವೂ ಸ್ವಚ್ಛ, ಸುಂದರವಾಗಿ ಕಾಣವಂತೆ ಮಾಡಬೇಕು ಎಂಬ ಉದ್ದೇಶದಿಂದ ಅಹಮದಾಬಾದ್ ನಗರಸಭೆ ಗೋಡೆಯನ್ನು ನಿರ್ಮಾಣ, ಪಾನ್ ಅಂಗಡಿ ಬಂದ್, ಬೀದಿ ನಾಯಿ ಮಾಯ ಮಾಡಿದ್ದು, ಈಗ ಮೊಟೆರಾ ಸ್ಟೇಡಿಯಂ ಸುತ್ತಾ ಮುತ್ತಾ ಕಣ್ಣು ಹಾಕಿದೆ.

ಟ್ರಂಪ್ ಉದ್ಘಾಟಿಸಲಿರುವ ಬೃಹತ್ ಮೈದಾನದ ಸುತ್ತಾ ಮುತ್ತಾ ಯಾವುದೇ ಸ್ಲಂ ಇಲ್ಲದಂತೆ ನೋಡಿಕೊಳ್ಳಲು ಅಹಮದಾಬಾದ್ ನಗರ ಸಭೆ ಮುಂದಾಗಿದೆ. ಸ್ಲಂಗಳಲ್ಲಿ ವಾಸವಿದ್ದ 45 ಕುಟುಂಬಗಳನ್ನು ಸ್ಥಳಾಂತರಿಸಲು ಆದೇಶ ನೀಡಲಾಗಿದೆ. ಈಗಾಗಲೇ ಸ್ಲಂ ಕಾಣದಂತೆ ಗೋಡೆ ನಿರ್ಮಿಸಲಾಗುತ್ತಿದೆ. ಆದರೂ ಸ್ಲಂ ನಿವಾಸಿಗಳನ್ನು ಒಕ್ಕಲೆಬ್ಬಿಸುತ್ತಿರುವುದು ಏಕೆ ಎಂದು ಪ್ರಶ್ನಿಸಲಾಗಿದೆ.

ಟ್ರಂಪ್ ಭೇಟಿ: ವಿಮಾನ ನಿಲ್ದಾಣ ಮಾರ್ಗದ ಪಾನ್ ಶಾಪ್ ಬಂದ್ಟ್ರಂಪ್ ಭೇಟಿ: ವಿಮಾನ ನಿಲ್ದಾಣ ಮಾರ್ಗದ ಪಾನ್ ಶಾಪ್ ಬಂದ್

ಅಹಮದಾಬಾದ್ ನಗರ ಪಾಲಿಕೆಗೆ ಸೇರಿದ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದೀರಿ, ಹಾಗಾಗಿ, ಈ ಜಾಗವನ್ನು ತ್ವರಿತವಾಗಿ ಖಾಲಿ ಮಾಡಿ ಎಂದು ಅದೇಶದಲ್ಲಿ ತಿಳಿಸಲಾಗಿದೆ. ಫೆಬ್ರವರಿ 19ರಂದು ಬೆಳಗ್ಗೆ ಸ್ಲಂ ತೆರವು ಕಾರ್ಯಾಚರಣೆ ನಡೆಯಲಿದೆ.

Slum-dwellers asked to vacate ahead of Trumps visit

ಅಹಮದಾಬಾದ್ ನಿಂದ ಗಾಂಧಿನಗರ ಮಾರ್ಗದಲ್ಲಿ ಕೊಳಗೇರಿಗಳಿದ್ದು, ಮೊಟೆರಾ ಸ್ಟೇಡಿಯಂನಿಂದ ಕೇವಲ ಅರ್ಧ ಕಿಲೋ ಮೀಟರ್ ದೂರದಲ್ಲಿದೆ.

"ದಶಕಗಳಿಂದ ನಾವು ಇಲ್ಲಿ ನೆಲೆಸಿದ್ದೆವೆ, ಯಾರೂ ಇಲ್ಲಿ ತನಕ ನಾವು ಅತಿಕ್ರಮಣ ಮಾಡಿದ್ದೇವೆ ಎಂದಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಜಾಗ ಖಾಲಿ ಮಾಡಿ ಎಂದು ನೋಟಿಸ್ ನೀಡಿದ್ದಾರೆ. ನೋಟಿಸ್ ಈಗ ಯಾಕೆ ಕೊಟ್ಟಿದ್ದಾರೆ'' ಎಂದು ದಿನಗೂಲಿ ಕಾರ್ಮಿಕ ದಿನೇಶ್ ಅದ್ರಾವಾನಿ ಪ್ರಶ್ನಿಸಿದ್ದಾರೆ.

ನಮಗೆ ಎಲ್ಲೂ ಶಾಶ್ವತ ನೆಲೆ ಎಂಬುದಿಲ್ಲ. ಆದ್ರೆ, ಸರ್ಕಾರ ಸ್ಲಂ ತೆರವುಗೊಳಿಸುವ ಮೊದಲು ಬದಲಿ ವಸತಿ ವ್ಯವಸ್ಥೆ ಕಲ್ಪಿಸಬೇಕಲ್ಲವೇ? ಮಕ್ಕಳು, ಮಹಿಳೆಯರನ್ನು ಕರೆದುಕೊಂಡು ಬೀದಿಯಲ್ಲಿ ವಾಸಿಸಲು ಆಗುತ್ತದೆಯೇ? ಎಂದು ಸ್ಲಂ ನಿವಾಸಿ ಶೈಲೇಶ್ ಬಿಲ್ವಾ ನೋವಿನಿಂದ ನುಡಿದಿದ್ದಾರೆ.

''ನಗರೋತ್ಥಾನ ಯೋಜನೆಯಡಿಯಲ್ಲಿ ಸ್ಲಂ ತೆರವುಗೊಳಿಸಲಾಗುತ್ತಿದೆ. ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೂ ನೋಟಿಸ್ ಗೂ ಸಂಬಂಧವಿಲ್ಲ. ಇದು ಎಎಂಸಿಗೆ ಸೇರಿದ ಜಾಗ, ಅತಿಕ್ರಮಣ ನಡೆದಿದೆ. ಅದನ್ನು ವಶಪಡಿಸಿಕೊಳ್ಳಲಾಗುತ್ತಿದೆ"ಎಂದು ಎಎಂಸು ಅಧಿಕಾರಿ ಚೈತನ್ಯ ಶಾ ಪ್ರತಿಕ್ರಿಯಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಬ್ರವರಿ 24 ಮತ್ತು 25ರಂದು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಅಹಮದಾಬಾದ್‌ಗೆ ಅವರು ಭೇಟಿ ನೀಡಲಿದ್ದು, ವಿಮಾನ ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ಜೊತೆ ರೋಡ್ ಶೋ ನಡೆಸಲಿದ್ದಾರೆ. ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದು, ನಂತರ ಮೊಟೆರಾದ ನೂತನ ಬೃಹತ್ ಕ್ರೀಡಾಂಗಣ ಉದ್ಘಾಟಿಸಿ, ಭಾಷಣ ಮಾಡಲಿದ್ದಾರೆ.

English summary
At least 45 families living in a slum near the newly-built Motera stadium in Ahmedabad have been served eviction notices by the municipal corporation ahead of the scheduled visit of US President Donald Trump and Prime Minister Narendra Modi on February 24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X