ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಗುಜರಾತ್ ಗಲಭೆ 2002: ಮೋದಿಗೆ ಕ್ಲೀನ್ ಚಿಟ್, ಜಫ್ರಿ ಅರ್ಜಿ ವಜಾ

|
Google Oneindia Kannada News

ನವದೆಹಲಿ, ಜೂನ್ 24: 2002ರ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಶಕಗಳ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ವಿಶೇಷ ತನಿಖಾ ತಂಡವು ಗುಜರಾತ್ ರಾಜ್ಯದ ಅಂದಿನ ಸಿಎಂ ಆಗಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ 62 ಜನರಿಗೆ ಕ್ಲೀನ್ ಚಿಟ್ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಯ ಮೇಲೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಕಿಯಾ ಝಫ್ರಿ ಅರ್ಜಿ ವಿಚಾರಣೆ ನಡೆಸಿದ ಅಹಮದಾಬಾದ್ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಬಿ. ಜೆ. ಗನತ್ರ ತೀರ್ಪುನೀಡಿದ್ದರು. ಗುಜರಾತ್ ಗಲಭೆ ಕುರಿತು ತನಿಖೆ ನಡೆಸಲು ಸುಪ್ರೀಂಕೋರ್ಟ್ ನೇಮಿಸಿದ್ದ ವಿಶೇಷ ತನಿಖಾ ತಂಡ (ಎಸ್ಐಟಿ) ಈಗಾಗಲೇ ಮೋದಿ ಸೇರಿದಂತೆ ಪ್ರಕರಣದ 57 ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿ, ವರದಿ ನೀಡಿತ್ತು.

SC Dismisses Petition by Zakia Jafri Challenging the Clean Chit to PM Modi in the 2002 Gujarat Riots

35 ಮಂದಿ ಸಜೀವ ದಹನ: ಫೆಬ್ರವರಿ 28, 2002ರಲ್ಲಿ ಗುಜರಾತ್‌ನ ಗುಲ್ಬರ್ಗದಲ್ಲಿ ನಡೆದ ಹತ್ಯಾಕಾಂಡದಲ್ಲಿ ಜಾಕಿಯಾ ಜಫ್ರಿ ಪತಿ ಹಾಗೂ ಮಾಜಿ ಕಾಂಗ್ರೆಸ್ ಸಂಸದ ಇಶಾನ್ ಜಫ್ರಿ ಸೇರಿದಂತೆ 35 ಮಂದಿ ಸಜೀವ ದಹನವಾಗಿದ್ದರು.

ಗುಲ್ಬರ್ಗ್ ಹೌಸಿಂಗ್ ಸೊಸೈಟಿ ಗಲಭೆ ಹಾಗೂ ಎಹ್ಸಾನ್ ಕೊಲೆ ಪ್ರಕರಣ ಕುರಿತಂತೆ ಸಿಬಿಐನ ಮಾಜಿ ನಿರ್ದೇಶಕ ಆರ್. ಕೆ. ರಾಘವನ್ ನೇತೃತ್ವದ ವಿಶೇಷ ತನಿಖಾ ತಂಡ ತನಿಖೆ ನಡೆಸಿತ್ತು. 2011ರ ಸೆಪ್ಟೆಂಬರ್ 12ರಂದು ಸುಪ್ರಿಂ ಕೋರ್ಟ್‌ನ ಮೂವರು ಸದಸ್ಯರ ವಿಸ್ತೃತ ನ್ಯಾಯಪೀಠ, ವಿಶೇಷ ತನಿಖಾ ತಂಡದ ಅಂತಿಮ ವರದಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಸ್ತಾಂತರಿಸುವಂತೆ ಆದೇಶ ನೀಡಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ್ದ ಅಹಮದಾಬಾದ್ ವಿಚಾರಣಾ ನ್ಯಾಯಾಲಯ 2012ರ ಮಾರ್ಚ್ 13ರಂದು ತನಿಖಾ ತಂಡ ಸಲ್ಲಿಸಿದ್ದ ಪರಿಸಮಾಪ್ತಿ ವರದಿಯನ್ನು ಎತ್ತಿ ಹಿಡಿದಿತ್ತು.

Recommended Video

Agnipath ಯೋಜನೆ ಮೂಲಕ ದೇಶಸೇವೆಗೆ ಹೊರಟಿರೋ ಯುವಕರ ಉತ್ಸಾಹಕ್ಕೆ ಹ್ಯಾಟ್ಸಾಫ್ | *India | Oneindia Kannada

English summary
Supreme Court Dismisses Zakia Jafri's Plea Against SIT Clean Chit To PM Narendra Modi In 2002 Gujarat Riots Larger Conspiracy Case. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X