ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ನ 67 ಕಾಂಗ್ರೆಸ್ ಶಾಸಕರು ಜೈಪುರ ಹೋಟೆಲ್‌ಗೆ!

|
Google Oneindia Kannada News

ಅಹಮದಾಬಾದ್, ಮಾರ್ಚ್ 17 : ಮಧ್ಯಪ್ರದೇಶದ ಬಳಿಕ ಗುಜರಾತ್ ಕಾಂಗ್ರೆಸ್‌ನಲ್ಲಿ ಭಿನ್ನಮತ ಉಂಟಾಗಿದೆ. ಈಗಾಗಲೇ 5 ಶಾಸಕರು ರಾಜೀನಾಮೆ ನೀಡಿದ್ದಾರೆ. ಒಬ್ಬ ಶಾಸಕ ಯಾವ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೂ ಸಿಗುತ್ತಿಲ್ಲ.

Recommended Video

Donald Trump in Sabarmati Ashram Ahmedabad | Donald Trump | Sabarthi Ashram | Oneindia Kannada

ಮಾರ್ಚ್ 26ರಂದು ರಾಜ್ಯಸಭೆ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ 68 ಶಾಸಕರ ಪೈಕಿ 67 ಶಾಸಕರನ್ನು ಕಾಂಗ್ರೆಸ್ ಜೈಪುರದಲ್ಲಿರುವ ಹೋಟೆಲ್‌ಗೆ ಕರೆದುಕೊಂಡು ಹೋಗಿದೆ. ಗುಜರಾತ್ ವಿಧಾನಸಭೆಯಿಂದ ನಾಲ್ವರು ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ.

ರಾಜ್ಯಸಭಾ ಚುನಾವಣೆ; ಬಿಜೆಪಿ ಬಹುಮತ ಪಡೆಯುವುದು ಕಷ್ಟರಾಜ್ಯಸಭಾ ಚುನಾವಣೆ; ಬಿಜೆಪಿ ಬಹುಮತ ಪಡೆಯುವುದು ಕಷ್ಟ

182 ಬಲದ ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ 73 ಶಾಸಕರ ಬಲ ಹೊಂದಿತ್ತು. 5 ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅನುಮೋದಿಸಿದ್ದು, ಕಾಂಗ್ರೆಸ್ ಬಲ 68ಕ್ಕೆ ಕುಸಿದಿದೆ. ಇವರನ್ನು ಜೈಪುರಕ್ಕೆ ಕರೆದುಕೊಂಡು ಹೋಗಲಾಗಿದ್ದು, ಒಬ್ಬ ಶಾಸಕ ಸಂಪರ್ಕಕ್ಕೆ ಸಿಕ್ಕಿಲ್ಲ.

ಮುಕೇಶ್ ಅಂಬಾನಿ ಮನವಿಯಂತೆ ರಾಜ್ಯಸಭೆ ಟಿಕೆಟ್ ಕೊಟ್ಟ ಜಗನ್! ಮುಕೇಶ್ ಅಂಬಾನಿ ಮನವಿಯಂತೆ ರಾಜ್ಯಸಭೆ ಟಿಕೆಟ್ ಕೊಟ್ಟ ಜಗನ್!

Gujarat Congress Shifted 67 MLAs To Jaipur

25 ಶಾಸಕರು ಬಜೆಟ್ ಅಧಿವೇಶದಲ್ಲಿ ಸಭಾತ್ಯಾಗ ಮಾಡಿ ವಿಧಾನಸಭೆಯಿಂದ ಹೊರ ಹೋಗುತ್ತಿದ್ದಂತೆ ವಿಶೇಷ ವಿಮಾನದಲ್ಲಿ ಜೈಪುರಕ್ಕೆ ಕರೆದುಕೊಂಡು ಹೋಗಲಾಗಿದೆ. ಮತ್ತೊಂದು ಬ್ಯಾಚ್‌ನಲ್ಲಿ 42 ಶಾಸಕರನ್ನು ಕರೆದೊಯ್ಯಲಾಗಿದೆ.

ರಾಜ್ಯಸಭೆ ಉಪ ಚುನಾವಣೆ; ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆರಾಜ್ಯಸಭೆ ಉಪ ಚುನಾವಣೆ; ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆ

ಗುಜರಾತ್ ಕಾಂಗ್ರೆಸ್ ವಕ್ತಾರ ಮನೀಷ್, "ಜಿತು ಚೌಧರಿ ಎಂಬ ಶಾಸಕರು ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ. ಅವರ ಫೋನ್ ಸ್ವಿಚ್ ಆಫ್ ಆಗಿದ್ದು, ಶಾಸಕರ ಜೊತೆ ವಿಮಾನದಲ್ಲಿ ಬಂದಿಲ್ಲ" ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ರಾಜ್ಯಸಭೆ ಚುನಾವಣೆಯಲ್ಲಿ ಕ್ರಾಸ್ ಓಟಿಂಗ್ ನಡೆಯುವ ಭಯ ಕಾಂಗ್ರೆಸ್ ಪಕ್ಷಕ್ಕಿದೆ. ಆದ್ದರಿಂದ, ಶಾಸಕರನ್ನು ಜೈಪುರಕ್ಕೆ ಕರೆದುಕೊಂಡು ಹೋಗಲಾಗಿದೆ. ಮಾರ್ಚ್ 25ರ ತನಕ ಎಲ್ಲರೂ ಅಲ್ಲಿಯೇ ವಾಸ್ತವ್ಯ ಹೂಡುವ ನಿರೀಕ್ಷೆ ಇದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಜೈಪುರದಲ್ಲಿ ಶಾಸಕರಿಗೆ ಯಾವುದೇ ತೊಂದರೆ ಆಗುವುದಿಲ್ಲ.

ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ ಹೊಂದಿರುವ ಶಾಸಕರ ಬಲದ ಮೇಲೆ ರಾಜ್ಯಸಭೆಗೆ ಇಬ್ಬರು ಸದಸ್ಯರನ್ನು ಸುಲಭವಾಗಿ ಆರಿಸಿ ಕಳಿಸಲಿದೆ. ಒಂದು ವೇಳೆ ಕ್ರಾಸ್ ಓಟಿಂಗ್ ನಡೆದರೆ ಮೂರು ಸ್ಥಾನಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ.

English summary
Gujarat Congress shifted 67 of its 68 MLAs from the state to Jaipur in view of the Rajya Sabha polls on March 26. Five of its legislators have submitted resignations. One MLA is unreachable.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X