ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಶಾಸಕರ ರಾಜೀನಾಮೆ; ರಾಜ್ಯಸಭೆ ಚುನಾವಣೆ ಲೆಕ್ಕಾಚಾರ ಉಲ್ಟಾ

|
Google Oneindia Kannada News

ಅಹಮದಾಬಾದ್, ಜೂನ್ 04 : ರಾಜ್ಯಸಭೆ ಚುನಾವಣೆ ಹತ್ತಿರವಿರುವಾಗಲೇ ಗುಜರಾತ್‌ ಕಾಂಗ್ರೆಸ್‌ನ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಚುನಾವಣೆಯಲ್ಲಿ 2 ಸೀಟುಗಳಲ್ಲಿ ಗೆಲ್ಲುವ ಪಕ್ಷದ ತಂತ್ರಕ್ಕೆ ಹಿನ್ನಡೆಯಾಗಿದೆ.

Recommended Video

ಲಾಕ್ ಡೌನ್ ನಡುವೆ ಚಲಿಸುವ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ | Oneindia Kannada

ಗುರುವಾರ ಅಕ್ಷಯ್ ಪಾಟೀಲ್ ಮತ್ತು ಜಿಟು ಭಾಯ್ ಎಂಬ ಇಬ್ಬರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದಾರೆ. ಇಂದು ಸಂಜೆ ಅಥವ ಶುಕ್ರವಾರ ಮತ್ತೊಬ್ಬ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ರಾಜ್ಯಸಭೆ ಚುನಾವಣೆ; ಮೌನ ಮುರಿದ ಮುದ್ದಹನುಮೇಗೌಡರು! ರಾಜ್ಯಸಭೆ ಚುನಾವಣೆ; ಮೌನ ಮುರಿದ ಮುದ್ದಹನುಮೇಗೌಡರು!

"ಸ್ವಯಂ ಪ್ರೇರಿತವಾಗಿ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದು, ಅದನ್ನು ಅಂಗೀಕರಿಸಲಾಗಿದೆ" ಎಂದು ಗುಜರಾತ್ ವಿಧಾನಸಭೆ ಸ್ಪೀಕರ್ ರಾಜೇಂದ್ರ ತ್ರಿವೇದಿ ಹೇಳಿದ್ದಾರೆ. ಮಾರ್ಚ್‌ನಲ್ಲಿ 5 ಶಾಸಕರು ರಾಜೀನಾಮೆ ನೀಡಿದ ಬಳಿಕ ವಿಧಾನಸಭೆಯಲ್ಲಿ ಪಕ್ಷದ ಬಲ 68ಕ್ಕೆ ಕುಸಿದಿತ್ತು.

ರಾಜ್ಯಸಭೆ ಚುನಾವಣೆ; ಜೂ.6ರಂದು ಬಿಜೆಪಿ ಕೋರ್ ಕಮಿಟಿ ಸಭೆ ರಾಜ್ಯಸಭೆ ಚುನಾವಣೆ; ಜೂ.6ರಂದು ಬಿಜೆಪಿ ಕೋರ್ ಕಮಿಟಿ ಸಭೆ

ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದಾಗಿ ರಾಜ್ಯಸಭೆ ಚುನಾವಣೆ ಲೆಕ್ಕಾಚಾರ ಬದಲಾಗಿದೆ. ಒಟ್ಟು ನಾಲ್ಕು ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಜೂನ್ 19ರಂದು ಚುನಾವಣೆ ನಿಗದಿಯಾಗಿದೆ. ಬಿಜೆಪಿ ಸುಲಭವಾಗಿ ಎರಡು ಸ್ಥಾನ ಗೆಲ್ಲಲಿದೆ.

ರಾಜ್ಯಸಭೆಯ 24 ಸ್ಥಾನಗಳಿಗೆ ಚುನಾವಣೆ ದಿನಾಂಕ ಪ್ರಕಟರಾಜ್ಯಸಭೆಯ 24 ಸ್ಥಾನಗಳಿಗೆ ಚುನಾವಣೆ ದಿನಾಂಕ ಪ್ರಕಟ

ಬಿಜೆಪಿ ವಿರುದ್ಧ ಆರೋಪ

ಬಿಜೆಪಿ ವಿರುದ್ಧ ಆರೋಪ

ಇಬ್ಬರು ಶಾಸಕರ ರಾಜೀನಾಮೆ ಬಳಿಕ ಟ್ವೀಟ್ ಮಾಡಿರುವ ಗುಜರಾತ್ ಕಾಂಗ್ರೆಸ್ ಉಸ್ತುವಾರಿ ರಾಜೀವ್ ಸತ್ವಾ, "ಬಿಜೆಪಿ ತನ್ನ ಎಲ್ಲಾ ಶಕ್ತಿಯನ್ನು ರಾಜ್ಯಸಭೆ ಚುನಾವಣೆಗೆ ಶಾಸಕರನ್ನು ಖರೀದಿ ಮಾಡಲು ಖರ್ಚು ಮಾಡುತ್ತಿದೆ" ಎಂದು ಆರೋಪ ಮಾಡಿದ್ದಾರೆ.

ಮತ್ತೊಬ್ಬರು ರಾಜೀನಾಮೆ?

ಮತ್ತೊಬ್ಬರು ರಾಜೀನಾಮೆ?

"ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದಾರೆ. ಇನ್ನೊಬ್ಬ ಶಾಸಕರು ಯಾವ ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರು ರಾಜೀನಾಮೆ ನೀಡುವ ಕುರಿತು ಪ್ರತಿಕ್ರಿಯೆ ನೀಡಲಾರೆ" ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಗುಜರಾತ್ ವಿಧಾನಸಭೆ

ಗುಜರಾತ್ ವಿಧಾನಸಭೆ

ಗುಜರಾತ್ ವಿಧಾನಸಭೆಯಲ್ಲಿ 103 ಶಾಸಕರ ಬಲವನ್ನು ಬಿಜೆಪಿ ಹೊಂದಿದೆ. ಎರಡು ಸೀಟುಗಳನ್ನು ಪಕ್ಷ ಸುಲಭವಾಗಿ ಗೆಲ್ಲಲಿದೆ. ರಾಜ್ಯಸಭೆ ಚುನಾವಣೆಗೆ 3ನೇ ಅಭ್ಯರ್ಥಿಯಾಗಿ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದ ನರಹರಿ ಅಮಿನ್ ಅವರನ್ನು ಬಿಜೆಪಿ ಕಣಕ್ಕಿಳಿಸುತ್ತಿದೆ.

ಕಾಂಗ್ರೆಸ್ ಬಲ ಕುಸಿತ

ಕಾಂಗ್ರೆಸ್ ಬಲ ಕುಸಿತ

ಮಾರ್ಚ್‌ನಲ್ಲಿ 5 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ ಬಳಿಕ ವಿಧಾನಸಭೆಯಲ್ಲಿ ಕಾಂಗ್ರೆಸ್ ಬಲ 68ಕ್ಕೆ ಕುಸಿದಿತ್ತು. ಆದ್ದರಿಂದ, ಪಕ್ಷ 2 ಸ್ಥಾನದಲ್ಲಿ ಜಯಗಳಿಸುವ ವಿಶ್ವಾಸ ಹೊಂದಿತ್ತು. ಈಗ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದು 66 ಶಾಸಕರು ಮಾತ್ರ ಉಳಿದುಕೊಂಡಿದ್ದಾರೆ.

English summary
Ahead of the Rajya Sabha elections two Gujarat Congress MLAs resigned. Akshay Patel and Jitu Bhai Chaudhary have resigned voluntarily I have accepted it said speaker Rajendra Trivedi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X