ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾದಿ ಹೇಳಿಕೆ: ಶೂ ಪ್ರಿಂಟ್‌ನೊಂದಿಗೆ ನೂಪುರ್ ಪೋಸ್ಟರ್‌- ಗುಜರಾತ್‌ನಲ್ಲಿ 8 ಬಂಧನ

|
Google Oneindia Kannada News

ರಾಜ್‌ಕೋಟ್‌ ಜೂನ್ 13: ಅಮಾನತುಗೊಂಡಿರುವ ಬಿಜೆಪಿ ವಕ್ತಾರರಾದ ನೂಪುರ್ ಶರ್ಮಾ ಅವರ ಶೂ ಪ್ರಿಂಟ್ ಇರುವ ಪೋಸ್ಟರ್‌ಗಳನ್ನು ಅಂಟಿಸಿದ್ದಕ್ಕಾಗಿ ಎಂಟು ಜನರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ರಾಜ್‌ಕೋಟ್‌ನಲ್ಲಿ 5 ಜನರನ್ನು ಬಂಧಿಸಲಾಗಿದ್ದು, 3 ಜನರನ್ನು ಸೂರತ್‌ನಲ್ಲಿ ಬಂಧಿಸಲಾಗಿದೆ. ಆರೋಪಿಗಳು ಪೋಸ್ಟರ್‌ಗಳನ್ನು ಅಂಟಿಸಿದ್ದಲ್ಲದೆ, ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ನಲ್ಲಿ ಏನಾಯಿತು ಎಂಬುದನ್ನು ಖಚಿತಪಡಿಸಿಕೊಳ್ಳಲು ಮುಸ್ಲಿಮರನ್ನು ಕೇಳುವ ಸಂದೇಶವನ್ನು ವಾಟ್ಸಾಪ್‌ನಲ್ಲಿ ಪ್ರಸಾರ ಮಾಡುವ ಮೂಲಕ ಅಶಾಂತಿಯನ್ನು ಸೃಷ್ಟಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

Recommended Video

ನೂಪುರ್ ಶರ್ಮಾ ಪರ ಬ್ಯಾಟ್ ಬೀಸಿದ ಸಂಸದ ಗೌತಮ್ ಗಂಭೀರ್ ಫುಲ್ ಗರಂ | *India | OneIndia Kannada

ಕಳೆದ 2 ರಿಂದ 3 ದಿನಗಳಲ್ಲಿ, ವಾಟ್ಸಾಪ್ ವಿಡಿಯೊ ವೈರಲ್ ಆಗಿದ್ದು, ಇದರಲ್ಲಿ ಇಬ್ಬರು ವ್ಯಕ್ತಿಗಳು ಶೂ ಪ್ರಿಂಟ್ ಚಿಹ್ನೆಯೊಂದಿಗೆ ನೂಪುರ್ ಶರ್ಮಾ ಅವರ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಈ 40-50 ಪೋಸ್ಟರ್‌ಗಳನ್ನು ಮುದ್ರಿಸುವುದರಿಂದ ಮುಸ್ಲಿಮರ ಉದ್ದೇಶ ಈಡೇರುವುದಿಲ್ಲ ಆದರೆ ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ನ ಘಟನೆಗಳು ಪುನರಾವರ್ತನೆಯಾಗಲು ಹೆಚ್ಚಿನದನ್ನು ಮಾಡಬೇಕಾಗಿದೆ ಎಂದು ಸಂದೇಶ ಹೇಳುತ್ತದೆ.

ಪೋಸ್ಟರ್‌ಗಳ ಅಂಟಿಸಿ ಆಕ್ರೊಶ

ಪೋಸ್ಟರ್‌ಗಳ ಅಂಟಿಸಿ ಆಕ್ರೊಶ

ಪ್ರವಾದಿ ಬಗ್ಗೆ ಅವಹೇಳನಕಾರಿ ಹೇಳಿಕೆಯ ವಿರುದ್ಧ ಪ್ರತಿಭಟಿಸಿ ದೇಶ ವಿದೇಶದಲ್ಲಿ ಬಿಜೆಪಿ ವಕ್ತಾರರಾಗಿದ್ದ ನೂಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ ಅವರ ಬಂಧನಕ್ಕೆ ಒತ್ತಾಯ ಹೆಚ್ಚಾಗಿದೆ. ಕೆಲವೆಡೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಇಬ್ಬರು ಬಲಿಯಾಗಿದ್ದಾರೆ. ಇದರ ಮದ್ಯೆ ಪೋಸ್ಟರ್‌ಗಳನ್ನು ಅಂಟಿಸುವ ವಿಡಿಯೋ ಹಿಂಸಾಚಾರಕ್ಕೆ ಮತ್ತಷ್ಟು ಪುಷ್ಠಿ ನೀಡಿದ್ದು ನೂಪುರ್ ಶರ್ಮಾ ವಿರುದ್ಧ ಕ್ರಮಕ್ಕೆ ಒತ್ತಡ ಹೇರಲಾಗುತ್ತಿದೆ. ವೈರಲ್ ವಿಡಿಯೊ ಮತ್ತು ಸಂದೇಶದ ತನಿಖೆಯಲ್ಲಿ ಪೊಲೀಸರು ಮೊಹಮ್ಮದ್ ತೌಫಿಕ್ ಮೊಹಮ್ಮದ್ ರಫೀಗ್ ಶೇಖ್ ಅನ್ನು ಪತ್ತೆಹಚ್ಚಲು ಸಾಧ್ಯವಾಗಿದೆ.

ಪ್ರಿಂಟಿಂಗ್ ಪ್ರೆಸ್‌ನಲ್ಲಿ ಉದ್ಯೋಗಿ ವಿಚಾರಣೆ

ಪ್ರಿಂಟಿಂಗ್ ಪ್ರೆಸ್‌ನಲ್ಲಿ ಉದ್ಯೋಗಿ ವಿಚಾರಣೆ

ನೂಪುರ್ ಶರ್ಮಾ ಅವರ ಪೋಸ್ಟರ್‌ಗಳನ್ನು ಅಂಟಿಸುವುದು ವೈರಲ್ ವಿಡಿಯೊದಲ್ಲಿ ಕಂಡುಬಂದಿದೆ. ಇದರ ಆಧಾರದ ಮೇಲೆ ನನ್ಪುರದ ಚಾಂದ್ ಸುಬೇದಾರ್ ಕಟ್ಟಡದ ನಿವಾಸಿ ಸದ್ದಾಂ ರೌಫ್ ಸೈಯದ್ ಮತ್ತು ಜಮಾಲ್ಶಾ ಮೊಹಲ್ಲಾದ ನಿವಾಸಿ ಕಡಶಾ ನಿ ನಾಲ್ ವಿಚಾರಣೆ ಆರಂಭವಾಯಿತು.

ಈ ಇಬ್ಬರ ವಿಚಾರಣೆಯು ಸೂರತ್‌ನ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಉದ್ಯೋಗಿಯಾಗಿರುವ ಇಮ್ರಾನ್ ಹಬೀಬ್ ಖಾನ್ ಪಠಾಣ್ ಅವರ ಬಳಿಗೆ ಪೊಲೀಸರನ್ನು ಕರೆದೊಯ್ಯಿತು ಮತ್ತು ಇವರಿಂದ ನೂಪುರ್ ಶರ್ಮಾ ಅವರ ಪೋಸ್ಟರ್‌ಗಳನ್ನು ಮುದ್ರಿಸಲಾಗಿರುವುದು ತಿಳಿದು ಬಂದಿದೆ.

ಸಿಸಿಟಿವಿ ಸಹಾಯದಿಂದ ಆರೋಪಿಗಳು ಪತ್ತೆ

ಸಿಸಿಟಿವಿ ಸಹಾಯದಿಂದ ಆರೋಪಿಗಳು ಪತ್ತೆ

ಅದೇ ರೀತಿ ನೂಪುರ್ ಶರ್ಮಾ ಅವರ ಪೋಸ್ಟರ್‌ಗಳನ್ನು ಅಂಟಿಸಿದ್ದಕ್ಕಾಗಿ ರಾಜ್‌ಕೋಟ್‌ನಲ್ಲಿ 5 ಜನರನ್ನು ಬಂಧಿಸಲಾಗಿದೆ. ರಾಜ್‌ಕೋಟ್‌ನಲ್ಲಿ ಪೋಸ್ಟರ್‌ಗಳನ್ನು ಅಂಟಿಸುವ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಎಲ್ಲಾ ಐವರನ್ನು ಗುರುತಿಸಿದ್ದಾರೆ. ಪ್ರವಾದಿ ಮೊಹಮ್ಮದ್ ಕುರಿತು ನೂಪುರ್ ಶರ್ಮಾ ಅವರ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಅಲ್ಪಸಂಖ್ಯಾತ ಸಮುದಾಯದ ಪ್ರಮುಖರು ಮೂರು ದಿನಗಳ ಹಿಂದೆ ರಾಜ್‌ಕೋಟ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

ಕಳೆದ ಕೆಲ ದಿನಗಳ ಹಿಂದೆ ಟಿವಿ ಸಂದರ್ಶನವೊಮದರಲ್ಲಿ ಬಿಜೆಪಿ ವಕ್ತಾರರಾಗಿದ್ದ ನೂಪುರ್ ಶರ್ಮಾ ಪ್ರವಾದಿ ಮಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಜೊತೆಗೆ ಟ್ವಿಟರ್‌ನಲ್ಲಿ ಪ್ರವಾದಿ ಮುಹಮ್ಮದ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಬಿಜೆಪಿಯ ಉಚ್ಛಾಟಿತ ನಾಯಕ ನವೀನ್ ಕುಮಾರ್ ಜಿಂದಾಲ್ ಮಾಡಿದ್ದರು. ಇವರಿಬ್ಬರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದೇಶ ವಿದೇಶದಲ್ಲಿ ಸಮುದಾಯಗಳು ಒತ್ತಡ ಹೇರಿವೆ. ರಾಂಚಿಯಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪ್ರತಿಭಟನೆ ಇಬ್ಬರು ಸಾವನ್ನಪ್ಪಿದ್ದಾರೆ. ದೇಶದೆಲ್ಲೆಡೆ ಇಂತಹ ಹಿಂಸಾಚಾರ ಘಟನೆಗಳು ಬೆಳಕಿಗೆ ಬಂದಿದೆ. ದೆಹಲಿ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ ಹೀಗೆ ಹಲವೆಡೆ ಪ್ರತಿಭಟನೆಗಳು ನಡೆದಿವೆ.

English summary
Gujarat police have arrested eight people for pasting posters of a suspended BJP spokesperson, Nupur Sharma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X