ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

WHO ಮುಖ್ಯಸ್ಥ ಟೆಡ್ರೋಸ್‌ಗೆ ಗುಜರಾತಿ ಹೆಸರು ನಾಮಕರಣ ಮಾಡಿದ ಪ್ರಧಾನಿ ಮೋದಿ

|
Google Oneindia Kannada News

ಜಾಮ್‌ನಗರ, ಏಪ್ರಿಲ್ 20: WHO ಮಹಾನಿರ್ದೇಶಕ ಟೆಡ್ರೋಸ್ ಅಧಾನಂ ಘೇಬ್ರಿಯೆಸಸ್ ಅವರಿಗೆ 'ತುಳಸಿಭಾಯ್' ಎಂಬ ಗುಜರಾತಿ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ.

ಗುಜರಾತ್‌ನ ಜಾಮ್‌ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಯ್ಲುಎಚ್‌ಒ) ಜಾಗತಿಕ ಸಾಂಪ್ರದಾಯಿಕ ಔಷಧಗಳ ಕೇಂದ್ರಕ್ಕೆ (ಜಿಸಿಟಿಎಂ) ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾರಿಷಲ್ ಪ್ರಧಾನಿ ಪ್ರವಿಂದ ಕುಮಾರ್ ಜಗನ್ನಾಥ ಮತ್ತು ಡಬ್ಲ್ಯುಎಚ್‌ಒ ಮಹಾ ನಿರ್ದೇಶಕ ಟೆಡ್ರೋಸ್ ಅಧಾನಂ ಘೇಬ್ರಿಯೆಸಸ್ ಭಾಗಿಯಾಗಿದ್ದರು.

ಜಿಸಿಟಿಎಂ ಎಂಬುದು ಪಾರಂಪರಿಕ ಔಷಧಗಳ ಜ್ಞಾನ ಕೇಂದ್ರವಾಗಿದೆ. ಆರೋಗ್ಯ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಸಾಂಪ್ರದಾಯಿಕ ಔಷಧಗಳ ಕೊಡುಗೆಯನ್ನು ಗರಿಷ್ಠಗೊಳಿಸಲು ಅಗತ್ಯವಾದ ಆವಿಷ್ಕಾರ ಮತ್ತು ತಂತ್ರಜ್ಞಾನ ಶೋಧ ಇದರ ಉದ್ದೇಶವಾಗಿದೆ. ಈ ಶಂಕುಸ್ಥಾಪನೆ ಸಮಾರಂಭದಲ್ಲಿ ಇದು ಸಂಭವಿಸಿದೆ.

Prime Minister Modi gives Gujarati name to WHO chiefs

ತಾನು ಪಕ್ಕಾ ಗುಜರಾತಿಯಾಗಿದ್ದೇನೆ ಎಂದು ಹೇಳಿದ ಡಾ ಟೆಡ್ರೋಸ್‌ಗೆ ಪ್ರಧಾನಿ ಮೋದಿ ತುಳಸಿಭಾಯ್ ಎಂಬ ಹೆಸರನ್ನು ನೀಡಿದ್ದಾರೆ. ಪಿಎಂ ಮೋದಿ ಹೇಳಿದರು, "ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ನನ್ನ ಉತ್ತಮ ಸ್ನೇಹಿತ. ಅವರು ಇಂದು ಏನಾಗಿದ್ದರೂ ಅದಕ್ಕೆ ಭಾರತೀಯ ಶಿಕ್ಷಕರೇ ಕಾರಣ. ಜೊತೆಗೆ ಅವರು ಭಾರತದೊಂದಿಗೆ ಸಂಬಂಧ ಹೊಂದಿರುವುದಕ್ಕೆ ಹೆಮ್ಮೆಪಡುತ್ತೇನೆ,'' ಎಂದು ಹೇಳಿದರು.

Prime Minister Modi gives Gujarati name to WHO chiefs

ಇಂದು ಬೆಳಗ್ಗೆ ಅವರು ನನಗೆ ಹೇಳಿದರು: 'ನಾನು ಪಕ್ಕಾ ಗುಜರಾತಿ ಆಗಿದ್ದೇನೆ ಎಂದು. ನೀವು ನನಗೆ ಗುಜರಾತಿ ಹೆಸರನ್ನು ನೀಡುತ್ತೀರಾ?'' ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥರು ಮತ್ತು ಸಭಿಕರು ಪ್ರಧಾನಿ ಮೋದಿಯವರೊಂದಿಗೆ ನಕ್ಕಾಗ ಪ್ರಧಾನಿ ಮೋದಿ ಅವರು, "ಗುಜರಾತಿಯಾಗಿ ನಾನು ಕೂಡ ಅವರನ್ನು ತುಳಸಿ ಭಾಯ್ ಎಂದು ಕರೆಯುತ್ತೇನೆ" ಎಂದು ಘೋಷಿಸಿದರು.

ಈ ಹೆಸರನ್ನು ಅವರಿಗೆ ಏಕೆ ಇಟ್ಟಿದ್ದೇನೆ ಎಂದು ಪ್ರಧಾನಿ ಮೋದಿ ವಿವರಿಸಿದರು. "ತುಳಸಿ ಎಂಬುದು ಆಧುನಿಕ ತಲೆಮಾರುಗಳಲ್ಲಿ ಮರೆಯುತ್ತಿರುವ ಸಸ್ಯವಾಗಿದೆ. ಆದರೆ ಇದನ್ನು ತಲೆಮಾರುಗಳಿಂದ ಪೂಜಿಸಲಾಗುತ್ತದೆ. ಇದನ್ನು ಮರೆಯಾಗದಂತೆ ಕಾಪಾಡಬೇಕಾಗಿದೆ. ಮದುವೆಯಲ್ಲಿ ತುಳಸಿ ಗಿಡವನ್ನು ಬಳಸಲಾಗುತ್ತದೆ. ತುಳಿಸಿ ಆಯುರ್ವೇದದೊಂದಿಗೆ ಸಂಬಂಧ ಹೊಂದಿದೆ" ಎಂದಿದ್ದಾರೆ.

Recommended Video

ಭಾರತಕ್ಕೆ ಚಿನ್ನದ ಪದಕ ಕೊಟ್ಟ ಮಗನ ಸಾಧನೆಗೆ ಮಾಧವನ್ ಫುಲ್ ಖುಷ್ | Oneindia Kannada

English summary
WHO Chief Dr Tedros Adhanom Ghebreyesus has been given a Gujarati name(Tulsibhai) by Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X