ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಗುಜರಾತ್ ಎಎಪಿ ಕಚೇರಿ ಮೇಲೆ ಪೊಲೀಸರ ದಾಳಿ

|
Google Oneindia Kannada News

ಅಹಮದಾಬಾದ್, ಸೆಪ್ಟೆಂಬರ್ 12: ಗುಜರಾತ್ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಆಮ್ ಆದ್ಮಿ ಪಕ್ಷದ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.

ಪೊಲೀಸರ ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ಆಮ್‌ ಆದ್ಮಿ ಪಕ್ಷ ಗುಜರಾತ್‌ನಲ್ಲಿ ಎಎಪಿ ಪಕ್ಷಕ್ಕೆ ಸಿಗುತ್ತಿರುವ ಜನ ಬೆಂಬಲ ಕಂಡು ಬಿಜೆಪಿ ಆತಂಕಗೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಹಮದಾಬಾದ್‌ಗೆ ಬಂದಾಗಲೇ ಈ ದಾಳಿ ನಡೆಸಲಾಗಿದೆ ಎಂದು ದೂರಿದೆ.

Breaking; ಎಎಪಿ ಸೇರಿದ ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ Breaking; ಎಎಪಿ ಸೇರಿದ ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ

ಪೊಲೀಸರ ದಾಳಿ ಕುರಿತು ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿದ್ದು, "ಪಕ್ಷದ ಕಚೇರಿಯಲ್ಲಿರುವ ನಾಯಕರು, ಕಾರ್ಯಕರ್ತರು ಪ್ರಮಾಣಿಕರು. ಕಚೇರಿಯಲ್ಲಿ ಪೊಲೀಸರಿಗೆ ಏನೂ ಸಿಕ್ಕಿಲ್ಲ" ಎಂದು ಹೇಳಿದ್ದಾರೆ.

ಎಎಪಿ V/s ಬಿಜೆಪಿ: ಭಯದಲ್ಲಿ ಗುಜರಾತ್ ರಾಜ್ಯಾಧ್ಯಕ್ಷರನ್ನೇ ತೆಗೆದು ಹಾಕುತ್ತಾ ಕೇಸರಿ ಪಡೆ?ಎಎಪಿ V/s ಬಿಜೆಪಿ: ಭಯದಲ್ಲಿ ಗುಜರಾತ್ ರಾಜ್ಯಾಧ್ಯಕ್ಷರನ್ನೇ ತೆಗೆದು ಹಾಕುತ್ತಾ ಕೇಸರಿ ಪಡೆ?

Police Raid On Aam Admi Party Office At Ahmedabad

ಎಎಪಿ ಕಚೇರಿ ಮೇಲೆ ದಾಳಿ ಏಕೆ ನಡೆಸಲಾಗಿದೆ?. ದಾಳಿಯ ವೇಳೆ ಸಿಕ್ಕಿರುವುದು ಏನು? ಎಂಬ ಬಗ್ಗೆ ಗುಜರಾತ್ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಈ ದಾಳಿ ಎಎಪಿ ಮತ್ತು ಬಿಜೆಪಿ ನಡುವೆ ರಾಜ್ಯದಲ್ಲಿ ವಾಕ್ಸಮರಕ್ಕೆ ಕಾರಣವಾಗಿದೆ.

ಬಿಜೆಪಿ ಎಎಪಿ ನಡುವೆ ವಾಕ್ ಸಮರ: ಬಿಜೆಪಿ ಸೇರಲು 5 ಕೋಟಿ ರೂ. ಆಫರ್- ಎಎಪಿ ವಕ್ತಾರ ಸೌರಭ್ ಆರೋಪ ಬಿಜೆಪಿ ಎಎಪಿ ನಡುವೆ ವಾಕ್ ಸಮರ: ಬಿಜೆಪಿ ಸೇರಲು 5 ಕೋಟಿ ರೂ. ಆಫರ್- ಎಎಪಿ ವಕ್ತಾರ ಸೌರಭ್ ಆರೋಪ

"ದೆಹಲಿ ಬಳಿಕ ಗುಜರಾತ್‌ನಲ್ಲಿಯೂ ದಾಳಿಗಳು ಆರಂಭವಾಗಿವೆ. ದೆಹಲಿಯಲ್ಲಿ ಏನೂ ಸಿಗಲಿಲ್ಲ, ಗುಜರಾತ್‌ನಲ್ಲಿಯೂ ಏನೂ ಸಿಕ್ಕಿಲ್ಲ. ನಾವು ಪ್ರಮಾಣಿಕರು" ಎಂದು ಅರವಿಂದ್ ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಗುಜರಾತ್‌ ಬಿಜೆಪಿ ಘಟಕದ ವಿರುದ್ಧ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದು, "ಎರಡು ಗಂಟೆಗಳ ಕಾಲ ಪರಿಶೀಲನೆ ನಡೆಸಿದರೂ ಪಕ್ಷದ ಕಚೇರಿಯಲ್ಲಿ ಪೊಲೀಸರಿಗೆ ಏನೂ ಸಿಕ್ಕಿಲ್ಲ. ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ಪಕ್ಷಕ್ಕೆ ಸಿಗುತ್ತಿರುವ ಬೆಂಬಲ ನೋಡಿ ಅವರು ಆತಂಕಗೊಂಡಿದ್ದಾರೆ" ಎಂದು ಹೇಳಿದ್ದಾರೆ.

ಎಎಪಿಯ ಗುಜರಾತ್ ಘಟಕ ಟ್ವೀಟ್ ಮಾಡಿ, "ದೆಹಲಿ ಬಳಿಕ ಅವರು ಈಗ ಗುಜರಾತ್‌ನಲ್ಲಿ ದಾಳಿ ನಡೆಸಿದ್ದಾರೆ. ಅದು ದೆಹಲಿ ಆಗಲಿ, ಗುಜರಾತ್ ಆಗಲಿ ಅವರಿಗೆ ಏನೂ ಸಿಗುವುದಿಲ್ಲ" ಎಂದು ಹೇಳಿದೆ.

ಗುಜರಾತ್ ವಿಧಾನಸಭೆ ಚುನಾವಣೆ ಈ ವರ್ಷದ ಅಂತ್ಯದಲ್ಲಿ ನಡೆಯಲಿದೆ. ಪಕ್ಷಗಳು ಈಗಾಗಲೇ ತಯಾರಿ ಆರಂಭಿಸಿವೆ. ಗುಜರಾತ್‌ ಚುನಾವಣೆಗೆ ಎಎಪಿ ಈಗಾಗಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿದೆ. ಅರವಿಂದ್ ಕೇಜ್ರಿವಾಲ್ ರಾಜ್ಯದಲ್ಲಿ ಪ್ರಚಾರವನ್ನು ಸಹ ಪ್ರಾರಂಭಿಸಿದ್ದಾರೆ.

English summary
Police conducted a raid at the Aam Admi Party office in Ahmedabad. Ahead of the Gujarat assembly polls raid may cause for political verbal war.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X