ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಝೈಕೋವ್-ಡಿ ಲಸಿಕೆ ಉತ್ಪಾದನೆ ವೀಕ್ಷಿಸಿದ ಪ್ರಧಾನಿ ಮೋದಿ

|
Google Oneindia Kannada News

ಅಹಮದಾಬಾದ್, ನವೆಂಬರ್ 28: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಳಿಗ್ಗೆ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಝೈಡಸ್ ಕ್ಯಾಡಿಲಾ ಲಸಿಕೆ ತಯಾರಕ ಸಂಸ್ಥೆಯ ಘಟಕಕ್ಕೆ ಭೇಟಿ ನೀಡಿದರು. ಈ ವೇಳೆ ಅವರು ಝೈಕೋವ್-ಡಿ ಕೊರೊನಾ ವೈರಸ್ ಲಸಿಕೆಯ ಅಭಿವೃದ್ಧಿ ಪ್ರಕ್ರಿಯೆಗಳನ್ನು ಪರಾಮರ್ಶಿಸಿದರು.

ಅಹಮದಾಬಾದ್‌ ನಗರದಿಂದ 20 ಕಿಮೀ ದೂರದಲ್ಲಿರುವ ಚಾಂಗೋದರ್ ಕೈಗಾರಿಕಾ ಪ್ರದೇಶದಲ್ಲಿರುವ ಝೈಡಸ್ ಕ್ಯಾಡಿಲಾ ಪಾರ್ಕ್‌ಗೆ ಬೆಳಿಗ್ಗೆ 9.30ರ ಸುಮಾರಿಗೆ ಆಗಮಿಸಿದ ಅವರು, ಕೊರೊನಾ ವೈರಸ್ ಲಸಿಕೆ ತಯಾರಿಕೆ, ಅದರ ಸಂಗ್ರಹ, ವಿತರಣೆ ವಿಚಾರವಾಗಿ ಸುಮಾರು ಒಂದು ಗಂಟೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಝೈಡಸ್ ಕ್ಯಾಡಿಲಾ ಅಭಿವೃದ್ಧಿಪಡಿಸುತ್ತಿರುವ ಡಿಎನ್ಎ ಆಧಾರಿತ ಸ್ವದೇಶಿ ಲಸಿಕೆಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಅಹಮದಾಬಾದ್‌ನ ಝೈಡಸ್ ಬಯೋಟೆಕ್ ಪಾರ್ಕ್‌ಗೆ ಭೇಟಿ ನೀಡಿದ್ದೆ. ಈ ಪ್ರಯತ್ನದ ಹಿಂದಿರುವ ತಂಡವನ್ನು ನಾನು ಶ್ಲಾಘಿಸುತ್ತೇನೆ. ಈ ಪ್ರಯಾಣದಲ್ಲಿ ಅವರಿಗೆ ಬೆಂಬಲವಾಗಿರಲು ಭಾರತ ಸರ್ಕಾರ ಸಕ್ರಿಯವಾಗಿ ಅವರೊಂದಿಗೆ ಕೆಲಸ ಮಾಡುತ್ತಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಮೂರು ಲಸಿಕೆ ಉತ್ಪಾದನಾ ಕೇಂದ್ರಗಳಿಗೆ ಶನಿವಾರ ನರೇಂದ್ರ ಮೋದಿ ಭೇಟಿ ಮೂರು ಲಸಿಕೆ ಉತ್ಪಾದನಾ ಕೇಂದ್ರಗಳಿಗೆ ಶನಿವಾರ ನರೇಂದ್ರ ಮೋದಿ ಭೇಟಿ

ಝೈಕೋವ್-ಡಿ ಕೊರೊನಾ ವೈರಸ್ ಲಸಿಕೆಯ ಮೊದಲ ಹಂತದ ಕ್ಲಿನಿಕಲ್ ಪ್ರಯೋಗ ಪೂರ್ಣಗೊಂಡಿದ್ದು, ಆಗಸ್ಟ್ ತಿಂಗಳಲ್ಲಿ ಎರಡನೆಯ ಹಂತದ ಪ್ರಯೋಗ ಆರಂಭಿಸಿರುವುದಾಗಿ ಝೈಡಸ್ ಕ್ಯಾಡಿಲಾ ಪ್ರಕಟಿಸಿತ್ತು. ಎರಡನೆಯ ಹಂತ ಮುಗಿದ ಬಳಿಕ ಮೂರನೇ ಮತ್ತು ಕೊನೆಯ ಹಂತದ ಪ್ರಯೋಗ ನಡೆಯಲಿದ್ದು, ಆ ವೇಳೆಗೆ ಲಸಿಕೆಯ ಗುಣಮಟ್ಟದ ಮತ್ತು ದಕ್ಷತೆಯ ಖಚಿತ ವಿವರ ಸಿಗಲಿದೆ.

PM Narendra Modi Visited Zydus Cadilas Vaccine Plant Near Ahmedabad

ಅಹಮದಾಬಾದ್‌ನಲ್ಲಿ ವೀಕ್ಷಣೆ ಬಳಿಕ ಮೋದಿ ಅವರು ಹೈದರಾಬಾದ್‌ನತ್ತ ತೆರಳಲು ವಿಮಾನ ನಿಲ್ದಾಣಕ್ಕೆ ನಿರ್ಗಮಿಸಿದರು. ಹೈದರಾಬಾದ್‌ನಲ್ಲಿ ಅವರು ಭಾರತ್ ಬಯೋಟೆಕ್ ಕಂಪೆನಿಯ ಕೋವ್ಯಾಕ್ಸಿನ್ ಲಸಿಕೆ ಘಟಕಕ್ಕೆ ಭೇಟಿ ನೀಡಿ ಪರಾಮರ್ಶೆ ನಡೆಸಲಿದ್ದಾರೆ. ಮೋದಿ ಅವರು ಕೊರೊನಾ ಲಸಿಕೆ ಸಂಬಂಧ ಹೈದರಾಬಾದ್‌ಗೆ ತೆರಳುತ್ತಿದ್ದರೂ ಈ ಭೇಟಿ ರಾಜಕೀಯ ಮಹತ್ವ ಕೂಡ ಪಡೆದುಕೊಂಡಿದೆ. ಡಿಸೆಂಬರ್ 1ರಂದು ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದ್ದು, ಇಲ್ಲಿ ಬಿಜೆಪಿ ಭಾರಿ ಪೈಪೋಟಿಗೆ ಇಳಿದಿದೆ.

Recommended Video

ಕಾನೂನು ಬಾಹಿರ ಮತಾಂತರ ನಿಷೇಧ ಸುಗ್ರೀವಾಜ್ಞೆ | UP | Oneindia Kannada

ಹೈದರಾಬಾದ್‌ನಲ್ಲಿ ಮಧ್ಯಾಹ್ನ ವೀಕ್ಷಣೆ ನಂತರ ಮೋದಿ ಅವರು ಪುಣೆಗೆ ತೆರಳಲಿದ್ದು, ಅಲ್ಲಿ ಸೆರಮ್ ಸಂಸ್ಥೆಯು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾ ಸಹಯೋಗದಲ್ಲಿ ಉತ್ಪಾದಿಸುತ್ತಿರುವ ಕೋವಿಶೀಲ್ಡ್ ಲಸಿಕೆಯ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.

English summary
PM Narendra Modi on Saturday reviewed pharma major Zydus Cadila's Zycov-D vaccine candidate development work near Ahmedabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X