ಎರಡು ದಿನಗಳ ಕಾಲ ಗುಜರಾತ್ನಲ್ಲಿ ಪ್ರಧಾನಿ ಮೋದಿ ಪ್ರವಾಸ: ಎಲ್ಲೆಲ್ಲಿ ಭೇಟಿ?
ಅಹಮದಾಬಾದ್, ಅಕ್ಟೋಬರ್ 30: ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕಾಲ ಗುಜರಾತ್ ಪ್ರವಾಸ ಕೈಗೊಂಡಿದ್ದು, ಇದೀಗ ಅಹಮದಾಬಾದ್ಗೆ ಬಂದಿಳಿದಿದ್ದಾರೆ.
ಮೋದಿಯವರು ಗುರುವಾರ ನಿಧನರಾದ ಗುಜರಾತ್ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಹಿರಿಯ ನಾಯಕ ಕೇಶುಭಾಯ್ ಪಟೇಲ್ ಅವರ ಕುಟುಂಬವನ್ನು ಭೇಟಿಯಾಗಲು ತೆರಳಿದ್ದಾರೆ.
ಗುಜರಾತ್: ಪ್ರಧಾನಿ ಮೋದಿ ಭದ್ರತೆಗೆ ನಿಯೋಜನೆಗೊಂಡಿದ್ದ 23 ಪೊಲೀಸರಿಗೆ ಕೊರೊನಾ ಸೋಂಕು
ಇತ್ತೀಚೆಗೆ ನಿಧನರಾದ ಗುಜರಾತಿ ಸಿನಿಮಾ ರಂಗದ ಸೂಪರ್ಸ್ಟಾರ್ ನರೇಶ್ ಕನೋಡಿಯಾ ಮತ್ತು ಅವರ ಸಹೋದರ ಸಂಗೀತ ಸಂಯೋಜಕ ಮಹೇಶ್ ಕನೋಡಿಯಾ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಬಹುದು ಎಂದು ಹೇಳಲಾಗುತ್ತಿದೆ.
ಎರಡು ದಿನಗಳ ಗುಜರಾತ್ ಭೇಟಿಯಲ್ಲಿ ಕೆವಡಿಯಾ ಮತ್ತು ಅಹಮದಾಬಾದ್ ನಡುವೆ ಸೀಪ್ಲೇನ್ ಸೇವೆ ಉದ್ಘಾಟಿಸಲಿದ್ದಾರೆ. ಇದೇ ವೇಳೆ ಸ್ಟ್ಯಾಚ್ಯು ಆಫ್ ಯುನಿಟಿ ವಲ್ಲಭಭಾಯಿ ಪಟೇಲ್ ಅವರ ಪುತ್ಥಳಿಯ ಸ್ಥಳಕ್ಕೆ ಭೇಟಿ ನೀಡಿ ಕೆಲವು ಪ್ರವಾಸೋದ್ಯಮ ಸಂಬಂಧಿತ ಯೋಜನೆ ಉದ್ಘಾಟಿಸಲಿದ್ದಾರೆ.
ಏಕತಾ ಪ್ರತಿಮೆ ಇರುವ ನರ್ಮದಾ ಜಿಲ್ಲೆಯ ಕೆವಾಡಿಯಾ ಗ್ರಾಮದಲ್ಲಿ ಎಸ್ ಆರ್ ಪಿ ಸೇರಿದಂತೆ 5 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಈ ಪೈಕಿ 3,651 ಮಂದಿ ಪೊಲೀಸರ ಕೋವಿಡ್ ಪರೀಕ್ಷೆ ನಡೆಸಲಾಗಿದೆ.
ಈ ಪೈಕಿ 23 ಮಂದಿ ಪೊಲೀಸರಿಗೆ ಸೋಂಕು ದೃಢಪಟ್ಟಿದೆ. ಪ್ರಸ್ತುತ ಸೋಂಕಿತ ಪೊಲೀಸರನ್ನು ರಾಜ್ಪಿಪಾಲಾ ಪಟ್ಟಣದ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.