• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗುಜರಾತ್‌ ಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಗೆಲುವು: ಮೋದಿ ಸಂತಸ

|

ಅಹಮದಾಬಾದ್‌, ಫೆಬ್ರವರಿ 23: ಗುಜರಾತ್ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ದಿಗ್ವಿಜಯ ದಾಖಲಿಸಿದೆ. ಎಲ್ಲ ಆರೂ ಪಾಲಿಕೆಗಳಲ್ಲಿನ ಅಧಿಕಾರವನ್ನು ಅದು ಮರಳಿ ಪಡೆದುಕೊಂಡಿದೆ. ಆದರೆ ಕಳೆದ 2015ರ ಪಾಲಿಕೆ ಚುನಾವಣೆಗಳಿಗಿಂತಲೂ ಅಧಿಕ ಕ್ಷೇತ್ರಗಳಲ್ಲಿ ಗೆಲುವನ್ನು ಸಂಭ್ರಮಾಚರಿಸಿದೆ.

ಅಹಮದಾಬಾದ್, ಸೂರತ್, ವಡೋದರ, ರಾಜ್‌ಕೋಟ್, ಜಾಮ್ನಗರ್ ಮತ್ತು ಭಾವನಗರಗಳಲ್ಲಿ ಬಿಜೆಪಿ ತನ್ನ ಎದುರಾಳಿ ಕಾಂಗ್ರೆಸ್‌ಗಿಂತ ಅತ್ಯಧಿಕ ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ. ಯಾವ ಪಾಲಿಕೆಯಲ್ಲಿಯೂ ಬಿಜೆಪಿಯ ಕಾಲು ಭಾಗದಷ್ಟೂ ಸೀಟುಗಳನ್ನು ಗೆಲ್ಲುವುದು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ.

ಈ ಗೆಲುವನ್ನು ಪ್ರಧಾನಿ ನರೇಂದ್ರ ಮೋದಿ ಸಂಭ್ರಮಿಸಿದ್ದಾರೆ. ಚುನಾವಣೆ ಮತ ಎಣಿಕೆಯ ಕಾರ್ಯಗಳು ಪೂರ್ಣಗೊಳ್ಳುವ ಮುನ್ನವೇ ಸರಣಿ ಟ್ವೀಟ್‌ಗಳನ್ನು ಮಾಡಿರುವ ಮೋದಿ, ಇದು ಉತ್ತಮ ಆಡಳಿತ ಹಾಗೂ ಅಭಿವೃದ್ಧಿ ರಾಜಕೀಯದ ಮೇಲಿನ ಜನರ ನಂಬಿಕೆ ಎಂದು ಹೇಳಿಕೊಂಡಿದ್ದಾರೆ.

ಬದಲಾಗದ ನಂಬಿಕೆ

ಬದಲಾಗದ ನಂಬಿಕೆ

'ಧನ್ಯವಾದ ಗುಜರಾತ್! ರಾಜ್ಯದೆಲ್ಲಡೆಯ ಪಾಲಿಕೆ ಚುನಾವಣೆ ಫಲಿತಾಂಶಗಳು ಅಭಿವೃದ್ಧಿ ಮತ್ತು ಉತ್ತಮ ಆಡಳಿತ ರಾಜಕಾರಣದ ಕುರಿತಾದ ಜನರ ಬದಲಾಗದ ನಂಬಿಕೆಯನ್ನು ಸ್ಪಷ್ಟವಾಗಿ ತೋರಿಸಿದೆ. ಬಿಜೆಪಿಯ ಮೇಲೆ ಮತ್ತೆ ನಂಬಿಕೆ ಇರಿಸಿದ್ದಕ್ಕಾಗಿ ಜನರಿಗೆ ಕೃತಜ್ಞರಾಗಿರುತ್ತೇನೆ. ಗುಜರಾತ್‌ಗೆ ಸೇವೆ ಸಲ್ಲಿಸುವುದು ಯಾವಾಗಲೂ ಗೌರವ ನೀಡುತ್ತದೆ' ಎಂದು ಮೋದಿ ಹೇಳಿದ್ದಾರೆ.

ಕಾರ್ಯಕರ್ತರ ಶ್ರಮವಿದೆ

ಕಾರ್ಯಕರ್ತರ ಶ್ರಮವಿದೆ

ಗುಜರಾತ್ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನ ಶ್ರಮವನ್ನೂ ನಾನು ಶ್ಲಾಘಿಸುತ್ತೇನೆ. ಅವರು ಜನರಲ್ಲಿಗೆ ತಲುಪಿ ರಾಜ್ಯದೆಡೆಗಿನ ನಮ್ಮ ಪಕ್ಷದ ದೃಷ್ಟಿಕೋನವನ್ನು ವಿವರಿಸಿದ್ದಾರೆ. ಗುಜರಾತ್ ಸರ್ಕಾರದ ಜನಪರ ನೀತಿಗಳು ಇಡೀ ರಾಜ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂದಿದ್ದಾರೆ.

ಯುವಕರ ಬೆಂಬಲ

ಯುವಕರ ಬೆಂಬಲ

ಗುಜರಾತ್‌ನಲ್ಲಿನ ಇಂದಿನ ಗೆಲುವು ಬಹಳ ವಿಶೇಷವಾದುದು. ಎರಡು ದಶಕಕ್ಕೂ ಹೆಚ್ಚು ಸಮಯದಿಂದ ರಾಜ್ಯವೊಂದರಲ್ಲಿ ಸೇವೆ ಸಲ್ಲಿಸುತ್ತಿರುವ ಪಕ್ಷವೊಂದು ಅಂತಹ ಅಪೂರ್ವ ಗೆಲುವು ಸಾಧಿಸುವುದು ಗಮನಾರ್ಹ. ಸಮಾಜದ ಎಲ್ಲ ವರ್ಗದವರೂ, ಮುಖ್ಯವಾಗಿ ಗುಜರಾತ್‌ನ ಯುವಕರು ವ್ಯಾಪಕವಾಗಿ ಬಿಜೆಪಿಯನ್ನು ಬೆಂಬಲಿಸುತ್ತಿರುವುದು ಸಂತೋಷ ನೀಡುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಅಮಿತ್ ಶಾ ಹೇಳಿಕೆ

ಅಮಿತ್ ಶಾ ಹೇಳಿಕೆ

ಬಿಜೆಪಿಯ ಅಭಿವೃದ್ಧಿ ಮತ್ತು ಪ್ರಗತಿ ಸಂಕೇತದ ಮೇಲೆ ಪುನಃ ನಂಬಿಕೆ ಇರಿಸಿದ್ದಕ್ಕಾಗಿ ಗುಜರಾತ್ ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ. ಬಡವರು, ಹಿಂದುಳಿದವರು ಮತ್ತು ಕೆಳವರ್ಗದ ಅಬಿವೃದ್ಧಿಗಾಗಿ ನಿರಂತರ ದುಡಿಯುತ್ತಿರುವ ಸ್ಥಳೀಯ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕೆಲಸಗಳಿಗೆ ಜನರು ಮನ್ನಣೆ ನೀಡಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

English summary
PM Narendra Modi expressed his happiness over BJP's victory in Gujarat municipal elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X