ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮ್ಮ ಶಾಲಾ ಶಿಕ್ಷಕರನ್ನು ಭೇಟಿ ಮಾಡಿದ ನರೇಂದ್ರ ಮೋದಿ : ಫೋಟೋ ವೈರಲ್

|
Google Oneindia Kannada News

ಅಹಮದಾಬಾದ್‌, ಜೂ. 11: ಗುಜರಾತ್‌ನ ನವ್ಸಾರಿಯಲ್ಲಿ ಪ್ರಧಾನ ಮಂತ್ರಿ ನರೇಂದ ಮೋದಿ ಅವರು ತಮ್ಮ ಶಾಲಾ ಶಿಕ್ಷಕರೊಬ್ಬರನ್ನು ಭೇಟಿ ಮಾಡಿರುವ ಪೋಟೋ ಈಗ ವೈರಲ್‌ ಆಗಿದೆ. ಮೋದಿ ಅವರ ಶಿಕ್ಷಣದ ಬಗ್ಗೆ ಹಾಗೂ ಅವರು ರೈಲ್ವೆ ಸ್ಟೇಷನ್‌ವೊಂದರಲ್ಲಿ ಟೀ ಮಾಡುತ್ತಿದ್ದರ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಿರುತ್ತವೆ. ಈಗ ಮೋದಿ ಅವರು ತಮ್ಮ ಶಿಕ್ಷಕರನ್ನು ಭೇಟಿ ಮಾಡಿರುವ ಪೋಟೋ ಈಗ ಸದ್ಯ ವೈರಲ್‌ ಆಗಿದೆ.

ಗುಜರಾತ್‌ನ ನಿರಾಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಲು ನವಸಾರಿ ತಲುಪಿದ ನಂತರ, ಪ್ರಧಾನಿ ಮೋದಿ ವಡ್ನಾಗರದ ತಮ್ಮ ಶಿಕ್ಷಕ ಜಗದೀಶ್ ನಾಯಕ್ ಅವರೊಂದಿಗೆ ಸಮಯ ಕಳೆದರು. ಸದ್ಯ ಇವರಿಬ್ಬರ ಈ ಫೋಟೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಶೇರ್ ಆಗಿದೆ.

ಪಿಟಿಐ ವರದಿಯ ಪ್ರಕಾರ, ಪ್ರಸ್ತುತ ತಾಪಿ ಜಿಲ್ಲೆಯ ವ್ಯಾರಾದಲ್ಲಿ ನೆಲೆಸಿರುವ 88 ವರ್ಷದ ಜಗದೀಶ್‌ ನಾಯಕ್, ಪ್ರಧಾನಿ ನರೇಂದ್ರ ಮೋದಿಯವರು ವಡ್ನಗರ ಪಟ್ಟಣದಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾಗ ಅವರಿಗೆ ಶಿಕ್ಷಕರಾಗಿದ್ದರು ಎನ್ನಲಾಗಿದೆ.

Modi who met his school teachers

ನನ್ನ ಮತ್ತು ಮೋದಿ ಅವರ ಮಧ್ಯೆ ಇದು ಒಂದು ಸಣ್ಣ ಭೇಟಿಯಾಗಿದ್ದರೂ, ನಾನು ಹೇಗೆ ಭಾವಿಸಿದೆ ಎಂಬುದನ್ನು ವಿವರಿಸಲು ನನ್ನ ಬಳಿ ಪದಗಳಿಲ್ಲ. ಇಷ್ಟು ವರ್ಷಗಳಿಂದ ನನ್ನ ಮೇಲಿನ ಗೌರವ ಮತ್ತು ಭಾವನೆಗಳು ಬದಲಾಗಿಲ್ಲ ಎಂದು ಜಗದೀಶ್‌ ನಾಯಕ್ ತಮ್ಮ ನಿವಾಸದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಜಗದೀಶ ನಾಯಕ್ ಅವರ ಮೊಮ್ಮಗ ಪಾರ್ಥ್ ನಾಯಕ್ ಅವರು ಪ್ರಧಾನಿ ಕಚೇರಿಗೆ (ಪಿಎಂಒ) ಕರೆ ಮಾಡಿ, ನವಸಾರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಅಜ್ಜ ನಾಯಕರು ಪ್ರಧಾನಿಯನ್ನು ಭೇಟಿಯಾಗಲು ಬಯಸಿದ್ದರು ಎಂದು ಹೇಳಿದರು.

ನವ್ಸಾರಿಗೆ ಭೇಟಿಯ ಸಂದರ್ಭದಲ್ಲಿ ನನ್ನ ತಾತ ಮೋದಿಜಿ ಅವರನ್ನು ಭೇಟಿಯಾಗಲು ಬಯಸಿದ್ದರು. ಹಾಗಾಗಿ ನಾನು ನಿನ್ನೆ ಪ್ರಧಾನಿಗಳಿಗೆ ಕರೆ ಮಾಡಿ ಅಪಾಯಿಂಟ್‌ಮೆಂಟ್ ಕೇಳಿದೆ. ನನಗೆ ಆಶ್ಚರ್ಯವಾಗುವಂತೆ, ಪ್ರಧಾನಿ ನನ್ನನ್ನು ಮರಳಿ ಕರೆದು ನಮ್ಮೊಂದಿಗೆ ಮಾತನಾಡಿದರು. ಅವರು ತುಂಬಾ ವಿನಮ್ರರು. ಪ್ರಧಾನಿಯವರನ್ನು ನಾನು ಕೂಡ ಭೇಟಿಯಾದೆ. ಇಂದು ನಾನು ಪ್ರಧಾನಿ ಅವರಿಂದ ಬಹಳಷ್ಟು ವಿಷಯಗಳನ್ನು ಕಲಿತಿದ್ದೇನೆ ಎಂದು ಪಾರ್ಥ ನಾಯಕ್ ಹೇಳಿದರು.

Recommended Video

ಪ್ರವಾದಿ ಬಗ್ಗೆ ವಿವಾದಿತ ಹೇಳಿಕೆ: ಜಾರ್ಖಂಡ್ನಲ್ಲಿ ಹಿಂಸಾರೂಪ ಪಡೆದ ಪ್ರತಿಭಟನೆ:ಇಬ್ಬರ ಸಾವು | Oneindia Kannada

ಇಂದು ಮುಂಜಾನೆ ಪ್ರಧಾನಿ ಮೋದಿ ಅವರು ಜಾಗತಿಕ ಬಾಹ್ಯಾಕಾಶ ಉದ್ಯಮಕ್ಕೆ ಭಾರತದ ಕೊಡುಗೆಯನ್ನು ಎತ್ತಿ ತೋರಿಸಿದ್ದಾರೆ. ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಖಾಸಗಿ ವಲಯವು ಮಹತ್ವದ ಪಾತ್ರವನ್ನು ವಹಿಸುತ್ತದೆ. 21ನೇ ಶತಮಾನದ ಆಧುನಿಕ ಭಾರತದ ಅಭಿವೃದ್ಧಿ ಪಯಣದಲ್ಲಿ ಅದ್ಭುತ ಅಧ್ಯಾಯವೊಂದು ಈಗ ಸೇರ್ಪಡೆಯಾಗಿದೆ. ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರದ ಪ್ರಧಾನ ಕಚೇರಿಗಾಗಿ ಎಲ್ಲಾ ದೇಶವಾಸಿಗಳು ಮತ್ತು ವೈಜ್ಞಾನಿಕ ಸಮುದಾಯವನ್ನು ಅಭಿನಂದಿಸಿದರು ಎಂದು ಪಾರ್ಥ್‌ ನಾಯಕ್‌ ಹೇಳಿದರು.

English summary
There are frequent discussions about Modi's education and his teasing at a railway station. The photo of Modi meeting his teachers is now viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X