ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈದ್ಯಕೀಯ ಪ್ರವಾಸೋದ್ಯಮ, ಆಯುಷ್‌ ವೀಸಾಗೆ ಚಾಲನೆ ನೀಡಿದ ಪ್ರಧಾನಿ ಮೋದಿ

|
Google Oneindia Kannada News

ಗಾಂಧಿನಗರ, ಏಪ್ರಿಲ್‌ 20: ವಿದೇಶಗಳಿಂದ ಭಾರತಕ್ಕೆ ಬರುವ ಹಾಗೂ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಲು ಭಾರತಕ್ಕೆ ಬರುವ ವಿದೇಶಿ ಪ್ರವಾಸಿಗರಿಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಆರೋಗ್ಯ ಕೊಡುಗೆ ನೀಡಿದ್ದಾರೆ.

ಹೌದು ಭಾರತಕ್ಕೆ ವೈದ್ಯಕೀಯ ಉದ್ದೇಶಕ್ಕೆ, ವೈದ್ಯಕೀಯ ಪ್ರವಾಸ ಹಾಗೂ ಚಿಕಿತ್ಸೆಗಾಗಿ ಭೇಟಿ ನೀಡುವ ವಿದೇಶಿಗರಿಗೆ ಆಯುಷ್‌ ವೀಸಾದ ವಿಶೇಷ ವರ್ಗಗಳ ಪ್ಯಾಕೇಜ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಗಾಂಧಿನಗರದಲ್ಲಿ ಚಾಲನೆ ನೀಡಿದ್ದಾರೆ. ದೇಶದಲ್ಲಿ ಉತ್ತಮ ಗುಣಮಟ್ಟಗಳ ಔಷಧಿಗಳ ಉತ್ಪನ್ನಗಳನ್ನು ಗುರುತಿಸಲು, ಔಷಧಿಗಳನ್ನು ನೀಡಲು ಆಯುಷ್‌ ಉತ್ಪನ್ನಗಳಿಗೆ ವಿಶೇಷ ಹಾಲ್‌ಮಾರ್ಕ್‌ ಪ್ರಕಾರದ "ಆಯುಷ್‌ ಮಾರ್ಕ್" ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಮೋದಿ ಘೋಷಣೆ ಮಾಡಿದ್ದಾರೆ.

ಗಾಂಧಿನಗರದಲ್ಲಿ ಮಹಾತ್ಮಾ ಮಂದಿರದಲ್ಲಿ ನಡೆಯುತ್ತಿರುವ ಮೂರು ದಿನಗಳ ಜಾಗತಿಕ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆಯನ್ನು ಉದ್ದೇಶಿಸಿ ಮೋದಿ ಮಾತನಾಡಿದರು.
ಬಿಎಸ್‌ಐ ಮತ್ತು ಐಎಸ್‌ಐಗಳಂತೆ ಗುಣಮಟ್ಟವನ್ನು ಖಚಿತ ಪಡಿಸುವ ಮಾರ್ಕ್‌ಗಳಂತೆಯೇ ಆಯುಷ್‌ ಉತ್ಪನ್ನಗಳನ್ನು ಗುರುತಿಸಲು ಆಯುಷ್‌ ಮಾರ್ಕ್‌ನ್ನು ಗುರುತಿಸಲಾಗುವುದು ಎಂದು ಪ್ರಧಾನಿ ಮೋದಿ ಈ ಜಾಗತಿಕ ಶೃಂಗಸಭೆಯಲ್ಲಿ ಘೋಷಿಸಿದರು.

PM Narendra Modi launches Ayush Visa for medical tourists

ಭಾರತವು ವೈದ್ಯಕೀಯಕ್ಕೆ ವಿಶ್ವದಲ್ಲಿಯೇ ಅತ್ಯಂತ ಆಕರ್ಷಕ ತಾಣವಾಗಿದ್ದು, ವೈದ್ಯಕೀಯ ಉದ್ಯಮದಿಂದಾಗಿ ಕೇರಳದಲ್ಲಿ ವಿದೇಶಿ ಪ್ರವಾಸಿಗರನ್ನು ಸೆಳೆಯುತ್ತಿದ್ದೇವೆ. ಇದು ನಮ್ಮ ದೇಶಕ್ಕೆ ವೈದ್ಯಕೀಯ ಪ್ರವಾಸೋದ್ಯವನ್ನು ಅಭಿವೃದ್ಧಿಪಡಿಸಲು ಭಾರತವು ಸಾಕ್ಷಿಯಾಗುತ್ತಿದೆ ಎಂದರು. ಇದೇ ಮಾದರಿಯನ್ನು ನಾವು ದೇಶದ ಸುತ್ತಲೂ ವಿಸ್ತರಣೆ ಮಾಡಬಹುದು. ದೇಶದ ಆಯುರ್ವೇದ, ಯುನಾನಿ ಮತ್ತು ಸಿದ್ಧ ಸಾಂಪ್ರದಾಯಿಕ ಮತ್ತು ಕ್ಷೇಮ ಹಾಗೂ ಭಾರತದಲ್ಲಿ ಯೋಗಕ್ಕೆ ಸಂಬಂಧಿಸಿದ ಹೊಸ ಕೇಂದ್ರಗಳು ದೇಶದಲ್ಲಿ ಜನಪ್ರಿಯವಾಗಲಿವೆ ಎಂದು ಮೋದಿ ಅಭಿಪ್ರಾಯಪಟ್ಟರು.

ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಮತ್ತು ವೈದ್ಯಕೀಯ ಪ್ರವಾಸಿಗರಾಗಲು ಬಯಸುವ ವಿದೇಶಿ ಪ್ರಯಾಣಿಕರಿಗೆ ವೀಸಾ ಪ್ರಕ್ರಿಯೆಯನ್ನು ಸುಲಭಗೊಳಿಸಲು ನಮ್ಮ ಸರ್ಕಾರವು ವಿಶೇಷ ವೀಸಾ ವರ್ಗವನ್ನು ಸ್ಥಾಪಿಸಲು ನಿರ್ಧರಿಸಿದೆ ಎಂದು ಪ್ರಧಾನಿ ಹೇಳಿದರು.

PM Narendra Modi launches Ayush Visa for medical tourists

ಆಯುಷ್‌ ಮಾರ್ಕ್:
ದೇಶದಲ್ಲಿ ಉತ್ಪಾದಿಸುವ ಹೊಸ ಉತ್ಪನಗಳಿಗೆ ಬಿಎಸ್‌ಐ, ಐಎಸ್‌ಐ ಸ್ಟಾಂಡರ್ಡ್ ಮಾರ್ಕ್‌ಗಳಂತೆ ಅತ್ಯುನ್ನತ ಗುಣಮಟ್ಟದ ಆಯುಷ್ ಉತ್ಪನ್ನಗಳನ್ನು ಗುರುತಿಸಲು ವಿಶೇಷ "ಆಯುಷ್ ಮಾರ್ಕ್" ರಚಿಸಲಾಗುವುದು ಎಂದು ಪ್ರಧಾನಿ ಮೋದಿ ಘೋಷಿಸಿದರು. "ಇದು ಜಾಗತಿಕ ಗ್ರಾಹಕರಿಗೆ ಮಾನ್ಯತೆ ಮತ್ತು ಉತ್ತಮ ಗುಣಮಟ್ಟದ ಖಚಿತವಾದ ಆಯುಷ್ ಔಷಧಿಗಳ ಉತ್ಪನ್ನಗಳನ್ನು ನೀಡುತ್ತದೆ." ಪ್ರದಾನಿ ಮೋದಿ ಶೃಂಗಸಭೆಯಲ್ಲಿ ಹೇಳಿದರು.

Recommended Video

ಭಾರತಕ್ಕೆ ಚಿನ್ನದ ಪದಕ ಕೊಟ್ಟ ಮಗನ ಸಾಧನೆಗೆ ಮಾಧವನ್ ಫುಲ್ ಖುಷ್ | Oneindia Kannada

English summary
Ayush Visa : PM Narendra Modi announces special category of Ayush visa for medical tourists, here's what it means in Kannada. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X