ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಕ್ರಿಯ ರಾಜಕಾರಣಕ್ಕೆ ಪ್ರಧಾನಿ ಮೋದಿ ಅಣ್ಣನ ಮಗಳು: ಮೊದಲ ಬೇಡಿಕೆಗೇ ಬಿಜೆಪಿ ಬೇಸ್ತು!

|
Google Oneindia Kannada News

ಅಹಮದಾಬಾದ್, ಫೆ 4: ರಾಜಕೀಯದಲ್ಲಿ ಕುಟುಂಬ ರಾಜಕಾರಣ ಹೊಸದಲ್ಲ ಮತ್ತು ಯಾವುದೇ ಪಕ್ಷ ಇದರಿಂದ ಹೊರತಾಗಿಲ್ಲ. ಅದು, ರಾಷ್ಟ್ರೀಯ ಪಕ್ಷಗಳಾಗಲಿ, ಪ್ರಾದೇಶಿಕ ಪಕ್ಷಗಳಾಗಲಿ..

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರದ್ದು ಕುಟುಂಬ ರಾಜಕಾರಣ ಎಂದು ಇತರ ಮುಖಂಡರು ಲೇವಡಿ ಮಾಡುತ್ತಿದ್ದರು. ಆದರೆ, ಯಡಿಯೂರಪ್ಪ ಮತ್ತು ಸಿದ್ದರಾಮಯ್ಯನವರ ಕುಟುಂಬವೂ ರಾಜಕೀಯಕ್ಕೆ ಧುಮುಕಿದ ನಂತರ, ಗೌಡ್ರನ್ನು ಈ ವಿಚಾರದಲ್ಲಿ ವ್ಯಂಗ್ಯವಾಡುವುದು ಕಮ್ಮಿಯಾಯಿತು.

ನಮ್ಮ ರೈತರಿಂದ ಯಾರೂ ಭೂಮಿ ಕಸಿದುಕೊಳ್ಳಲು ಸಾಧ್ಯವಿಲ್ಲ; ಮೋದಿನಮ್ಮ ರೈತರಿಂದ ಯಾರೂ ಭೂಮಿ ಕಸಿದುಕೊಳ್ಳಲು ಸಾಧ್ಯವಿಲ್ಲ; ಮೋದಿ

ಇನ್ನು, ರಾಷ್ಟ್ರ ರಾಜಕಾರಣದ ಕುಟುಂಬ ರಾಜಕಾರಣಕ್ಕೆ ಬರುವುದಾದರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಿಂಧಿಯಾ ಕುಟುಂಬ, ಗಾಂಧಿ-ನೆಹರೂ ಕುಟುಂಬವೂ ಇದನ್ನೇ ಮಾಡಿರುವುದು.

 ಲಕ್ನೋ ಏರ್‌ಪೋರ್ಟ್‌ನಲ್ಲಿ ಪ್ರಧಾನಿ ಸಹೋದರ ಪ್ರಹ್ಲಾದ್ ಮೋದಿ ಧರಣಿ ಲಕ್ನೋ ಏರ್‌ಪೋರ್ಟ್‌ನಲ್ಲಿ ಪ್ರಧಾನಿ ಸಹೋದರ ಪ್ರಹ್ಲಾದ್ ಮೋದಿ ಧರಣಿ

ಆದರೆ, ಪ್ರಧಾನಿ ನರೇಂದ್ರ ಮೋದಿಯವರ ಕುಟುಂಬದವರು ಬಿಜೆಪಿಯ ಸದಸ್ಯರಾಗಿದ್ದರೂ, ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿರಲಿಲ್ಲ. ಈಗ ಅವರ ದೊಡ್ಡಣ್ಣನ ಮಗಳು ಚುನಾವಣೆಗೆ ಟಿಕೆಟ್ ಬಯಸಿದ್ದಾರೆ. ಡಿಟೇಲ್ಸ್ ಮುಂದೆ ಓದಿ...

ಲಕ್ನೋ ವಿಮಾನ ನಿಲ್ದಾಣದಲ್ಲಿ ಧರಣಿ ಕೂತಿದ್ದ ಮೋದಿ ಬಿಗ್ ಬ್ರದರ್

ಲಕ್ನೋ ವಿಮಾನ ನಿಲ್ದಾಣದಲ್ಲಿ ಧರಣಿ ಕೂತಿದ್ದ ಮೋದಿ ಬಿಗ್ ಬ್ರದರ್

ಮೋದಿಯವರ ಅಣ್ಣ ಪ್ರಹ್ಲಾದ್ ಮೋದಿಯವರ ಮಗಳು ಸೋನಲ್ ಮೋದಿ, ಇವರು ಬಿಜೆಪಿಯ ಸದಸ್ಯೆ. ಪಕ್ಷದ ಪರವಾಗಿ ಕೆಲಸವನ್ನು ಮಾಡಿಕೊಂಡು ಬಂದಿರುವವರು. ಪ್ರಹ್ಲಾದ್ ಮೋದಿ ಎಂದರೆ, ಒಂದು ದಿನದ ಹಿಂದೆ ಲಕ್ನೋ ವಿಮಾನ ನಿಲ್ದಾಣದಲ್ಲಿ ಧರಣಿ ಕೂತವರು. ಇವರು ಏರ್ಪೋರ್ಟಿಗೆ ಬಂದಾಗ ಅವರನ್ನು ಸ್ವಾಗತಿಸಲು ಅವರ ಬೆಂಬಲಿಗರು ಬಂದಿದ್ದರು. ಅವರನ್ನು ಪೊಲೀಸರು ಬಂಧಿಸಿದ್ದು ಅವರ ಧರಣಿಗೆ ಕಾರಣವಾಗಿತ್ತು.

ಅಹಮದಾಬಾದ್ ಮಹಾನಗರ ಪಾಲಿಕೆ

ಅಹಮದಾಬಾದ್ ಮಹಾನಗರ ಪಾಲಿಕೆ

ಅಹಮದಾಬಾದ್ ಮಹಾನಗರ ಪಾಲಿಕೆಯ ಚುನಾವಣೆಗೆ ವೇದಿಕೆ ಸಿದ್ದವಾಗುತ್ತಿದೆ. "ನಾನು ಇದುವರೆಗೆ ಹೌಸ್ ವೈಫ್ ಆಗಿದ್ದೆ, ಆದರೂ ಬಿಜೆಪಿ ಪರವಾಗಿ ಕೆಲಸವನ್ನು ಮಾಡುತ್ತಿದ್ದೆ. ಈಗ ನನ್ನ ಮಕ್ಕಳು ದೊಡ್ಡವರಾಗಿದ್ದಾರೆ. ಹಾಗಾಗಿ, ಚುನಾವಣೆಗೆ ಧುಮುಕಲು ತಯಾರಿ ನಡೆಸುತ್ತಿದ್ದೇನೆ"ಎಂದು ಮೂವತ್ತು ವರ್ಷದ ಸೋನಲ್ ಮೋದಿ ಹೇಳಿದ್ದಾರೆ.

ಬೋಡಕ್ ದೇವ್ ವಾರ್ಡ್ ನಿಂದ ಸೋನಲ್ ಮೋದಿ

ಬೋಡಕ್ ದೇವ್ ವಾರ್ಡ್ ನಿಂದ ಸೋನಲ್ ಮೋದಿ

ಅಹಮದಾಬಾದ್ ಪಾಲಿಕೆಯ ಬೋಡಕ್ ದೇವ್ ವಾರ್ಡ್ ನಿಂದ ಸೋನಲ್ ಕಣಕ್ಕಿಳಿಯಲು ಬಯಸಿದ್ದಾರೆ. ಓಬಿಸಿ ಮಹಿಳಾ ಸಮುದಾಯಕ್ಕೆ ಮೀಸಲಾಗಿರುವ ಈ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸೋನಲ್ ಟಿಕೆಟ್ ಕೊಡಬೇಕೆಂದು ಡಿಮಾಂಡ್ ಮಾಡಿದ್ದಾರೆ. ಆದರೆ, ಪಕ್ಷದ ಮುಖಂಡರ ಸ್ನೇಹಿತರು, ಸಂಬಂಧಿಕರಿಗೆ ಟಿಕೆಟ್ ನೀಡುವುದಿಲ್ಲ ಎಂದು ಬಿಜೆಪಿ ಎರಡು ದಿನದ ಹಿಂದೆ ಪ್ರಕಟಿಸಿತ್ತು.

ಪಕ್ಷದ ನಿಷ್ಟಾವಂತ ಕಾರ್ಯಕರ್ತೆಯೆಂದು ಪರಿಗಣಿಸಿ

ಪಕ್ಷದ ನಿಷ್ಟಾವಂತ ಕಾರ್ಯಕರ್ತೆಯೆಂದು ಪರಿಗಣಿಸಿ

"ಪಕ್ಷದ ನಿಷ್ಟಾವಂತ ಕಾರ್ಯಕರ್ತೆಯೆಂದು ಪರಿಗಣಿಸಿ ನಮಗೆ ಟಿಕೆಟ್ ನೀಡಿ. ಮೋದಿಯವರ ಅಣ್ಣನ ಮಗಳು ಎನ್ನುವ ಕಾರಣಕ್ಕಾಗಿ ವಿಶೇಷ ಮುತುವರ್ಜಿ ತೋರಿಸುವುದು ಬೇಡ. ನನ್ನ ಕೆಲಸದ ಮೂಲಕವೇ ನಾನು ಗುರುತಿಸಿಕೊಳ್ಳಲು ಇಷ್ಟ ಪಡುತ್ತೇನೆ"ಎಂದು ಸೋನಲ್ ಮೋದಿ ಹೇಳಿದ್ದಾರೆ. ಇವರು ಸ್ಪರ್ಧಿಸಲು ಬಯಸುತ್ತಿರುವುದರಿಂದ ಬಿಜೆಪಿ ಮುಖಂಡರು ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ.

English summary
PM Modi's Niece Seeks BJP Ticket To Contest Ahmedabad Civic Polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X