ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಕತೆಯ ಪ್ರತಿಮೆಗೆ ತಡೆರಹಿತ 8 ರೈಲುಗಳಿಗೆ ಪ್ರಧಾನಿ ಹಸಿರು ನಿಶಾನೆ

|
Google Oneindia Kannada News

ಅಹಮದಾಬಾದ್, ಜನವರಿ 17: ದೇಶದ ವಿವಿಧ ಪ್ರದೇಶಗಳಿಂದ ಏಕತೆಯ ಪ್ರತಿಮೆಗೆ ತಡೆರಹಿತ ರೈಲು ಸಂಪರ್ಕ ಸೌಲಭ್ಯ ಒದಗಿಸುವ 8 ರೈಲುಗಳಿಗೆ ಪ್ರಧಾನಿ ಹಸಿರು ನಿಶಾನೆ ತೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೇಶದ ವಿವಿಧ ಪ್ರದೇಶಗಳನ್ನು ಕೇವಾಡಿಯಾಗೆ ಸಂಪರ್ಕಿಸುವ ಎಂಟು ರೈಲುಗಳಿಗೆ ಇಂದು(ಜನವರಿ 17) ಚಾಲನೆ ನೀಡಿದರು.

ಪ್ರಧಾನಮಂತ್ರಿ ಚಾಲನೆ ನೀಡಿದ ಈ ರೈಲುಗಳು ಏಕತೆಯ ಪ್ರತಿಮೆಗೆ ತಡೆರಹಿತ ಸಂಪರ್ಕವನ್ನು ಕಲ್ಪಿಸುತ್ತವೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಗುಜರಾತ್ ನಲ್ಲಿ ರೈಲ್ವೆ ವಲಯಕ್ಕೆ ಸಂಬಂಧಿಸಿದ ಇತರ ಹಲವು ಯೋಜನೆಗಳನ್ನು ಉದ್ಘಾಟಿಸಿದರು. ಗುಜರಾತ್ ಮುಖ್ಯಮಂತ್ರಿ ಮತ್ತು ರೈಲ್ವೆ ಸಚಿವ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜ.18ರಂದು ಸೂರತ್ ಮೆಟ್ರೋ ರೈಲು ಯೋಜನೆಗೆ ಭೂಮಿ ಪೂಜೆಜ.18ರಂದು ಸೂರತ್ ಮೆಟ್ರೋ ರೈಲು ಯೋಜನೆಗೆ ಭೂಮಿ ಪೂಜೆ

ದಭೋಯ್ - ಚಾಂದೋಡ್ ನಡುವೆ ಬ್ರಾಡ್‌ಗೇಜ್‌ಗೆ ಪರಿವರ್ತಿಸಲಾದ ಮಾರ್ಗ, ಚಾಂದೋಡ್ - ಕೇವಾಡಿಯ ಹೊಸ ಬ್ರಾಡ್‌ಗೇಜ್‌ ರೈಲ್ವೆ ಮಾರ್ಗ, ಹೊಸದಾಗಿ ವಿದ್ಯುದ್ದೀಕರಣ ಮಾಡಲಾಗಿರುವ ಪ್ರತಾಪ್ ನಗರ ಕೇವಾಡಿಯ ವಿಭಾಗ ಮತ್ತು ದಭೋಯ್, ಛಾಂದೋಡ್ ಮತ್ತು ಕೆವಾಡಿಯಾದ ನೂತನ ರೈಲು ನಿಲ್ದಾಣ ಕಟ್ಟಡಗಳನ್ನು ಉದ್ಘಾಟಿಸಿದರು. ಈ ಕಟ್ಟಡಗಳನ್ನು ಸ್ಥಳೀಯ ವೈಶಿಷ್ಟ್ಯಗಳನ್ನು ಮತ್ತು ಪ್ರಯಾಣಿಕರ ಆಧುನಿಕ ಸೌಲಭ್ಯ ಒಳಗೊಂಡಂತೆ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ.

PM Modi flags off 8 connecting Statue of Unity in Kevadiya with various parts of nation

ಕೇವಾಡಿಯಾ ನಿಲ್ದಾಣ ಹಸಿರು ಕಟ್ಟಡ ಪ್ರಮಾಣ ಪತ್ರ ಪಡೆದ ಭಾರತದ ಪ್ರಥಮ ರೈಲು ನಿಲ್ದಾಣವಾಗಿದೆ. ಈ ಯೋಜನೆ ನರ್ಮದಾ ತಟದ ಪ್ರಮುಖ ಧಾರ್ಮಿಕ ಮತ್ತು ಪುರಾತನ ಯಾತ್ರಾ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ ದೇಶಿಯ ಮತ್ತು ವಿದೇಶಿ ಪ್ರವಾಸಿಗರ ಹೆಚ್ಚಿನ ಆಗಮನ ಹೆಚ್ಚಿಸುವುದರೊಂದಿಗೆ ಹತ್ತಿರದ ಬುಡಕಟ್ಟು ವಲಯಗಳ ಅಭಿವೃದ್ಧಿಗೂ ಇಂಬು ನೀಡಲಿದೆ ಮತ್ತು ಒಟ್ಟಾರೆ ನಲಯದ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಕಾರಣವಾಗಲಿದೆ. ಜೊತೆಗೆ ಹೊಸ ವ್ಯಾಪಾರ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.

ಉದ್ಘಾಟನೆಗೊಂಡ 8 ರೈಲುಗಳ ವಿವರ:
ರೈಲಿನ ಹೆಸರು ಮತ್ತು ಕಾಲಾವಧಿ

1. 20903/04 ಕೇವಾಡಿಯಾ ದಿಂದ ವಾರಾಣಸಿ -ಮಹಾಮನ ಎಕ್ಸ್‌ಪ್ರೆಸ್ (ಸಾಪ್ತಾಹಿಕ)

2. 12927/28 ದಾದರ್ ದಿಂದ ಕೇವಾಡಿಯ-ದಾದರ್ -ಕೇವಾಡಿಯಾ ಎಕ್ಸ್‌ಪ್ರೆಸ್ (ದೈನಿಕ)

3. 20947/48 ಅಹ್ಮದಾಬಾದ್ ದಿಂದ ಕೇವಾಡಿಯಾ- ಜನ ಶತಾಬ್ದಿ (ದೈನಿಕ)

4. 20945/46 ಕೇವಾಡಿಯಾ ದಿಂದ ಎಚ್. ನಿಜಾಮುದ್ದೀನ್- ನಿಜಾಮುದ್ದೀನ್ ಕೇವಾಡಿಯಾ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ (ವಾರಕ್ಕೆರಡು ಬಾರಿ).

5.20905/06 ಕೇವಾಡಿಯಾ ದಿಂದ ರೇವಾ- ಕೇವಾಡಿಯಾ -ರೇವಾ ಎಕ್ಸ್‌ಪ್ರೆಸ್ (ಸಾಪ್ತಾಹಿಕ)

6. 20919/20 ಚೆನ್ನೈ- ಕೇವಾಡಿಯಾ ದಿಂದ ಚೆನ್ನೈ - ಕೇವಾಡಿಯಾ ಎಕ್ಸ್‌ಪ್ರೆಸ್ (ಸಾಪ್ತಾಹಿಕ)

7. 69201/02 ಪ್ರತಾಪ್ ನಗರ-ಕೇವಾಡಿಯಾ- ಮೆಮು ರೈಲು (ದೈನಿಕ)

8. 69203/04 ಪ್ರತಾಪ್ ನಗರ- ಕೇವಾಡಿಯಾ- ಮೆಮು ರೈಲು (ದೈನಿಕ)

ಜನ್ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿಗೆ ಇತ್ತೀಚಿನ "ವಿಸ್ಟಾ ಡೂಮ್ ಪ್ರವಾಸಿಗರ ಕೋಚ್" ಒದಗಿಸಲಾಗಿದ್ದು, ಇದು ಆಕಾಶದ ವಿಹಂಗಮ ನೋಟ ನೀಡುತ್ತದೆ. ಚೆನ್ನೈನ ಪುರುಚ್ಚಿ ತಲೈವರ್ ಡಾ ಎಂಜಿ ರಾಮಚಂದ್ರನ್ ಕೇಂದ್ರ ರೈಲ್ವೆ ನಿಲ್ದಾಣದಿಂದ ಒಂದು ರೈಲು ಕೇವಾಡಿಯಾ ತಲುಪಲಿದೆ. ಇಂದು ಎಂಜಿಆರ್ ಜನ್ಮವಾರ್ಷಿಕೋತ್ಸವ ದಿನವಾಗಿರುವುದು ವಿಶೇಷ ಎಂದು ಮೋದಿ ಹೇಳಿದರು.

English summary
Prime Minister Narendra Modi flags off eight trains connecting different regions of the country with Kevadiya, home to the Statue of Unity dedicated to Vallabhbhai Patel, in Gujarat today(Jan 17) via video-conferencing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X