ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆಗೆ ಎಲ್ ಕೆ ಅಡ್ವಾಣಿ ಸ್ಪರ್ಧಿಸುತ್ತಾರಾ?

|
Google Oneindia Kannada News

ನವದೆಹಲಿ, ಮಾರ್ಚ್ 20: ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ಎಂಬ ಪ್ರಶ್ನೆಗೆ ಇನ್ನು ಉತ್ತರ ಸ್ಪಷ್ಟವಾಗಿಲ್ಲ.

ಚುನಾವಣೆಗಳಲ್ಲಿ ಸ್ಪರ್ಧಿಸಲು 75 ವರ್ಷ ವಯಸ್ಸಿನ ಮಿತಿ ಹೇರಿಲ್ಲ. ಈ ವಯೋಮಿತಿ ಸಚಿವ ಹುದ್ದೆಗೆ ಮಾತ್ರ ಅನ್ವಯಿಸುತ್ತದೆ ಎಂದು ಬಿಜೆಪಿ ಪ್ರಕಟಿಸಿದ ಬಳಿಕ ಎಲ್ ಕೆ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಅವರು ಸ್ಪರ್ಧಿಸುತ್ತಾರೆ ಎಂಬಾ ಆಶಯ ವ್ಯಕ್ತವಾಗಿತ್ತು.

75 ವರ್ಷಗಳ ಮಿತಿ ಸಡಿಲ: ಅಡ್ವಾಣಿ, ಎಂಎಂ ಜೋಶಿ ಸ್ಪರ್ಧೆಗೆ ನಿರ್ಬಂಧವಿಲ್ಲ! 75 ವರ್ಷಗಳ ಮಿತಿ ಸಡಿಲ: ಅಡ್ವಾಣಿ, ಎಂಎಂ ಜೋಶಿ ಸ್ಪರ್ಧೆಗೆ ನಿರ್ಬಂಧವಿಲ್ಲ!

ಅಡ್ವಾಣಿ (91) ಮತ್ತು ಜೋಶಿ (84) ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಖಚಿತವಾಗಿಲ್ಲ. ಈ ನಿರ್ಧಾರವನ್ನು ಅವರಿಗೇ ಬಿಡಲು ಪಕ್ಷ ನಿರ್ಧರಿಸಿದ್ದಾರೆ. ಪಕ್ಷ ಬಯಸಿದ್ದನ್ನು ತಾವು ಮಾಡಲು ಸಿದ್ಧರಿರುವುದಾಗಿ ಜೋಶಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ

No decision yet on Advani contesting Lok Sabh Elections

2014ರ ಲೋಕಸಭೆ ಚುನಾವಣೆಯಲ್ಲಿ ಅಡ್ವಾಣಿ ಅವರು ಗಾಂಧಿನಗರ ಕ್ಷೇತ್ರದಿಂದ ಜಯಗಳಿಸಿದ್ದರು. ವಾರಣಾಸಿ ಕ್ಷೇತ್ರವನ್ನು ನರೇಂದ್ರ ಮೋದಿ ಅವರಿಗೆ ಬಿಟ್ಟುಕೊಟ್ಟಿದ್ದ ಮುರಳಿ ಮನೋಹರ ಜೋಶಿ ಕಾನ್ಪುರದಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು. ಈಗಾಗಲೇ ಆರೋಗ್ಯದ ಕಾರಣವೊಡ್ಡಿ ಸುಷ್ಮಾ ಸ್ವರಾಜ್ ಮತ್ತು ಉಮಾ ಭಾರತಿ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪ್ರಕಟಿಸಿದ್ದಾರೆ.

ಐದು ವರ್ಷದಲ್ಲಿ 365 ಪದ, 92% ಹಾಜರಾತಿ: ಅಡ್ವಾಣಿ ಸಂಸತ್ ಲೆಕ್ಕಾಚಾರಐದು ವರ್ಷದಲ್ಲಿ 365 ಪದ, 92% ಹಾಜರಾತಿ: ಅಡ್ವಾಣಿ ಸಂಸತ್ ಲೆಕ್ಕಾಚಾರ

ಅಡ್ವಾಣಿ ಅವರ ಸ್ಪರ್ಧೆಯ ಬಗ್ಗೆ ಅವರ ಆಪ್ತ ಕಾರ್ಯದರ್ಶಿ ದೀಪಕ್ ಛೋಪ್ರಾ ಅವರು ಪ್ರತಿಕ್ರಿಯಿಸಿ, ' ಅಡ್ವಾಣಿ ಅವರ ಸ್ಪರ್ಧೆ ಬಗ್ಗೆ ಇನ್ನು ನಿರ್ಧಾರವಾಗಿಲ್ಲ, ಈ ಬಗ್ಗೆ ಶೀಘ್ರವೇ ನಿರ್ಣಯ ಕೈಗೊಳ್ಳಲಿದ್ದಾರೆ' ಎಂದು ಹೇಳಿದ್ದಾರೆ. ಗಾಂಧಿನಗರದಿಂದ ಸ್ಪರ್ಧಿಸಲಿ ಎಂದು ಅಡ್ವಾಣಿ ಅವರಿಗೆ ಬಿಜೆಪಿಯಿಂದ ಯಾರೂ ಆಫರ್ ಮಾಡಿಲ್ಲ. ಅಡ್ವಾಣಿ ಅವರ ನಿರ್ಧಾರದ ಮೇಲೆ ಈ ಬಗ್ಗೆ ಬಿಜೆಪಿಯ ಚುನಾವಣಾ ಸಮಿತಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಿದೆ ಎಂದರು.

English summary
Suspense remains on whether BJP patriarch L K Advani will contest the coming Lok Sabha polls or hang up his boots. The 91-year-old, who served as Home Minister and Deputy Prime Minister, has won the Lok Sabha elections from Gandhinagar six times.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X