ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಯಂಘೋಷಿತ ದೇವಮಾನವ ನಿತ್ಯಾನಂದ ವಿದೇಶಕ್ಕೆ ಪರಾರಿ

|
Google Oneindia Kannada News

Recommended Video

Godman Nithyananda has fled the country:Gujarat police | Oneindia kannada

ಅಹಮದಾಬಾದ್, ನವೆಂಬರ್ 22: ಸ್ವಯಂಘೋಷಿತ ದೇವಮಾನವ ನಿತ್ಯಾನಂದಸ್ವಾಮಿ ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಖುದ್ದು ಗುಜರಾತ್ ಪೊಲೀಸ್ ಹೇಳಿಕೊಂಡಿದೆ.

ಅಹಮದಾಬಾದ್ ಹೈಕೋರ್ಟ್‌ಗೆ ಗುಜರಾತ್ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ನಿತ್ಯಾನಂದ ಸ್ವಾಮಿಗಾಗಿ ಗುಜರಾತ್‌ನಲ್ಲಿ ಅಥವಾ ಭಾರತದಲ್ಲಿ ಹುಡುಕಿ ಪ್ರಯೋಜನವಿಲ್ಲ. ಈಗಾಗಲೇ ಅವರು ವಿದೇಶಕ್ಕೆ ಪರಾರಿಯಾಗಿದ್ದಾರೆ.

ಇತ್ತೀಚೆಗಷ್ಟೆ ಗುಜರಾತ್‌ ಜನಾರ್ದನ ಶರ್ಮಾ ದಂಪತಿ ತಮ್ಮ ನಾಲ್ವರು ಹೆಣ್ಣು ಮಕ್ಕಳನ್ನು ನಿತ್ಯಾನಂದ ಅಕ್ರಮ ಬಂಧನಲದಲ್ಲಿಟ್ಟಿರುವ ಬಗ್ಗೆ ಗುಜರಾತ್ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.

ಇದೇ ದೂರಿನಲ್ಲಿ ಆಶ್ರಮದ ಇತರ ಅಪ್ರಾಪ್ತ ಬಾಲಕರಿಯರ ರಕ್ಷಣೆ ಕುರಿತು ಮನವಿ ಸಲ್ಲಿಸಲಾಗಿತ್ತು.
ರಾಮನಗರದಲ್ಲಿ ನಿತ್ಯಾನಂದನ ಜಾಮೀನು ಅರ್ಜಿ ವಜಾ ನಂತರ ಪೊಲೀಸರ ಸಹಾಯದೊಂದಿಗೆ ಜನಾರ್ದನ ಶರ್ಮಾ ದಂಪತಿಯ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ರಕ್ಷಿಸಲಾಗಿತ್ತು.

ಆದರೆ ಇದೇ ದಂಪತಿಯ ಇಬ್ಬರು ಹಿರಿಯ ಪುತ್ರಿಯರು ಪೋಷಕರೊಂದಿಗೆ ತೆರಳಲು ನಿರಾಕರಿಸಿ ಆಶ್ರಮದಲ್ಲಿಯೇ ಇರುವುದಾಗಿ ಹೇಳಿದ್ದರು.

ಕರ್ನಾಟಕದಲ್ಲಿ ಅತ್ಯಾಚಾರ ಪ್ರಕರಣ

ಕರ್ನಾಟಕದಲ್ಲಿ ಅತ್ಯಾಚಾರ ಪ್ರಕರಣ

ಕರ್ನಾಟಕದಲ್ಲಿ ಅತ್ಯಾಚಾರ ಪ್ರಕರಣ ಹಾಗೂ ಗುಜರಾತ್‌ನಲ್ಲಿ ಇಬ್ಬರು ಅಪ್ರಾಪ್ತರ ಮೇಲೆ ಹಲ್ಲೆ ಹಾಗೂ ಅಪಹರಣ ಪ್ರಕರಣ ದಾಖಲಾದ ಬಳಿಕ ನಿತ್ಯಾನಂದ ಸ್ವಾಮಿ ಪರಾರಿಯಾಗಿರುವ ಬಗ್ಗೆ ಮಾಹಿತಿ ದೊರೆತಿದೆ. ಪೊಲೀಸ್ ಮೂಲಗಳ ಪ್ರಕಾರ ಆಸ್ಟ್ರೇಲಿಯಾ ದ್ವೀಪವೊಂದರಲ್ಲಿ ನಿತ್ಯಾನಂದ ಅಡಗಿರುವ ಸಾಧ್ಯತೆ ಇದೆ.

ಅಪಹರಣ: ಸ್ವಾಮಿ ನಿತ್ಯಾನಂದ ವಿರುದ್ಧ ಎಫ್‌ಐಆರ್, ಶಿಷ್ಯೆಯರ ಬಂಧನಅಪಹರಣ: ಸ್ವಾಮಿ ನಿತ್ಯಾನಂದ ವಿರುದ್ಧ ಎಫ್‌ಐಆರ್, ಶಿಷ್ಯೆಯರ ಬಂಧನ

ಬಂಧನಕ್ಕೊಳಗಾಗುವ ಭೀತಿಯಲ್ಲಿ ಪರಾರಿ

ಬಂಧನಕ್ಕೊಳಗಾಗುವ ಭೀತಿಯಲ್ಲಿ ಪರಾರಿ

ಗುಜರಾತ್ ಪೊಲೀಸರಿಂದ ಬಂಧನಕ್ಕೊಳಗಾಗುವ ಭೀತಿಯಲ್ಲಿ ಈ ರೀತಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಕೋರ್ಟ್ ಅನುಮತಿ ನೀಡಿದರೆ ಇಂಟರ್ಪೋಲ್ ಹಾಗೂ ಇತರೆ ಏಜೆನ್ಸಿಗಳ ಮೂಲಕ ವಿದೇಶದಿಂದ ಬಂಧಿಸಿ ಭಾರತಕ್ಕೆ ಕರೆತರಲು ಪೊಲೀಸರು ಸಿದ್ಧರಿದ್ದಾರೆ ಎಂದು ಗುಜರಾತ್ ಸರ್ಕಾರ ಹೇಳಿಕೊಂಡಿದೆ.

ಡಿಸೆಂಬರ್ 9ಕ್ಕೆ ಕೋರ್ಟ್‌ಗೆ ಹಾಜರಾಗಬೇಕು

ಡಿಸೆಂಬರ್ 9ಕ್ಕೆ ಕೋರ್ಟ್‌ಗೆ ಹಾಜರಾಗಬೇಕು

ಆದರೆ ಕೋರ್ಟ್ ನಿತ್ಯಾನಂದಸ್ವಾಮಿಗೆ ಕೋರ್ಟ್ ಜಾರಿ ಮಾಡಿ ಡಿಸೆಂಬರ್ 9ರ ವಿಚಾರಣೆಗೆ ಹಾಜರಾಗಿ ಉತ್ತರ ನೀಡುವಂತೆ ಸೂಚಿಸಿದೆ. ಇದರಿಂದ ಮುಂದಿನ ವಿಚಾರಣೆಯಲ್ಲಿ ನಿತ್ಯಾನಂದ ನಿಲುವು ಹಾಗೂ ಕೋರ್ಟ್ ಪ್ರತಿಕ್ರಿಯೆ ಪ್ರಾಮುಖ್ಯತೆ ಪಡೆದಿದೆ.

ನಕಲಿ ಪಾಸ್‌ಪೋರ್ಟ್ ಬಳಕೆ

ನಕಲಿ ಪಾಸ್‌ಪೋರ್ಟ್ ಬಳಕೆ

ಗುಜರಾತ್ ಪೊಲೀಸರ ಪ್ರಕಾರ ನಿತ್ಯಾನಂದ ಪಾಸ್‌ಪೋರ್ಟ್ ಪೊಲೀಸರ ವಶದಲ್ಲಿದೆ. ಹಾಗಿದ್ದರೆ ವಿದೇಶಕ್ಕೆ ನಿತ್ಯಾನಂದ ಪರಾರಿಯಾಗಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವವಾಗಿದೆ. ನಕಲಿ ಪಾಸ್‌ಪೋರ್ಟ್ ಬಳಸಿ ವಿದೇಶಕ್ಕೆ ನಿತ್ಯಾನಂದ ಹೋಗಿರಬಹುದು ಎಂದು ಅಂದಾಜಿಸಲಾಗಿದೆ. ಒಂದೊಮ್ಮೆ ಇದು ನಿಜವಾದರೆ ನಿತ್ಯಾನಂದ ಸ್ವಾಮಿಗೆ ಇನ್ನಷ್ಟು ಕಾನೂನು ಸಂಕಟ ಎದುರಾಗಲಿದೆ.

English summary
Nithyananda Swamy has Fled To Foreign Countries, Ahmedabad SP RV Asari said Nithyananda has fled to abroad, and if required, the Gujarat police will seek his custody through proper channel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X