• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗುಜರಾತ್; ಪ್ರಧಾನಿ ಮೋದಿ ಸಂಬಂಧಿ ಕೋವಿಡ್‌ಗೆ ಬಲಿ

|

ಅಹಮದಾಬಾದ್, ಏಪ್ರಿಲ್ 27; ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸಂಬಂಧಿ ಅಹಮದಾಬಾದ್‌ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

80 ವರ್ಷದ ನರ್ಮದಾಬೇನ್ ಅಹಮದಾಬಾದ್‌ನ ನ್ಯೂ ರಾಣಿಪ್ ಪ್ರದೇಶದಲ್ಲಿ ಮಕ್ಕಳ ಜೊತೆ ವಾಸವಾಗಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.

ಗುಜರಾತ್ ಸರ್ಕಾರ 25 ವರ್ಷಗಳಿಂದ ಒಂದು ಆಸ್ಪತ್ರೆಯನ್ನೂ ನಿರ್ಮಿಸಿಲ್ಲ: ಕಾಂಗ್ರೆಸ್ ಗುಜರಾತ್ ಸರ್ಕಾರ 25 ವರ್ಷಗಳಿಂದ ಒಂದು ಆಸ್ಪತ್ರೆಯನ್ನೂ ನಿರ್ಮಿಸಿಲ್ಲ: ಕಾಂಗ್ರೆಸ್

ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಈ ಕುರಿತು ಮಾಹಿತಿ ನೀಡಿದ್ದಾರೆ. "ನಮ್ಮ ಸಂಬಂಧಿ ನರ್ಮದಾಬೇನ್ ಅವರನ್ನು 10 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೋವಿಡ್ ಸೋಂಕು ತಗುಲಿದ್ದ ಅವರ ಸ್ಥಿತಿ ಗಂಭೀರವಾಗಿತ್ತು" ಎಂದು ತಿಳಿಸಿದ್ದಾರೆ.

ಕೇಂದ್ರ ಮಾಜಿ ಸಚಿವ, ಗುಜರಾತ್ ಶಾಸಕ ದಿಗ್ವಿಜಯ್ ನಿಧನ ಕೇಂದ್ರ ಮಾಜಿ ಸಚಿವ, ಗುಜರಾತ್ ಶಾಸಕ ದಿಗ್ವಿಜಯ್ ನಿಧನ

"ಚಿಕಿತ್ಸೆ ಫಲಕಾರಿಯಾಗದೇ ಅವರು ಮಂಗಳವಾರ ಮೃತಪಟ್ಟಿದ್ದಾರೆ. ಆಕೆಯ ಪತಿ, ನರೇಂದ್ರ ಮೋದಿ ತಂದೆ ದಾಮೋದರ್ ದಾಸ್ ಸಹೋದರ ಜಗಜೀವನ್‌ದಾಸ್ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು" ಎಂದು ಹೇಳಳಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿಗೆ ಕೊರೊನಾ ನೆಗೆಟಿವ್, ಆಸ್ಪತ್ರೆಯಿಂದ ಡಿಸ್ಚಾರ್ಜ್ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿಗೆ ಕೊರೊನಾ ನೆಗೆಟಿವ್, ಆಸ್ಪತ್ರೆಯಿಂದ ಡಿಸ್ಚಾರ್ಜ್

ಗುಜರಾತ್ ರಾಜ್ಯದಲ್ಲಿಯೂ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಇಂದು ರಾಜ್ಯದಲ್ಲಿ 14,352 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 5,24,725ಕ್ಕೆ ಏರಿಕೆಯಾಗಿದೆ.

ರಾಜಧಾನಿ ಅಹಮದಾಬಾದ್‌ನಲ್ಲಿ ಇಂದು 5,725 ಹೊಸ ಪ್ರಕರಣ ದಾಖಲಾಗಿದೆ. 26 ಜನರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 56,076.

English summary
Prime Minister Narendra Modi's aunt Narmadaben Modi who was undergoing treatment for COVID 19 died at a hospital in Ahmedabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X