ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂರತ್ ಅಗ್ನಿ ದುರಂತ: ಮೃತ ವಿದ್ಯಾರ್ಥಿಗಳಿಗಾಗಿ ಮೋದಿ ಕಣ್ಣೀರು

|
Google Oneindia Kannada News

ಸೂರತ್, ಮೇ 24: ಗುಜರಾತ್ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಅಸುನೀಗಿದವರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಶಾಪಿಂಗ್ ಕಾಂಪ್ಲೆಕ್ಸ್‌ನ ಮೇಲ್ಭಾಗದಲ್ಲಿ ಟ್ಯೂಷನ್ ಸೆಂಟರ್ ಒಂದು ಇದ್ದು, ಬೆಂಕಿಯಿಂದ ರಕ್ಷಿಸಿಕೊಳ್ಳಲು ವಿದ್ಯಾರ್ಥಿಗಳು ನಾಲ್ಕನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾರೆ. ಈ ಅವಘಡದಲ್ಲಿ ಈ ವರೆಗೆ 19 ಮಂದಿ ಸಾವನ್ನಪ್ಪಿದ್ದಾರೆ ಇದರಲ್ಲಿ ಹಲವರು ವಿದ್ಯಾರ್ಥಿಗಳೇ ಆಗಿದ್ದಾರೆ.

ಗುಜರಾತ್‌ನಲ್ಲಿ ಭೀಕರ ಬೆಂಕಿ ಆಕಸ್ಮಿಕ : ಸಾವಿಗೀಡಾದವರ ಸಂಖ್ಯೆ 17ಕ್ಕೆ ಏರಿಕೆ ಗುಜರಾತ್‌ನಲ್ಲಿ ಭೀಕರ ಬೆಂಕಿ ಆಕಸ್ಮಿಕ : ಸಾವಿಗೀಡಾದವರ ಸಂಖ್ಯೆ 17ಕ್ಕೆ ಏರಿಕೆ

ಸೂರತ್‌ನ ಸರ್ತಾನಾ ಪ್ರದೇಶದಲ್ಲಿರುವ ತಕ್ಷಿಲಾ ಆರ್ಕೇಡ್‌ ಕಟ್ಟಡದ ಎರಡನೆಯ ಮಹಡಿಯಲ್ಲಿ ಬೆಂಕಿ ಆಕಸ್ಮಿಕ ಉಂಟಾಗಿದೆ. ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಮಾತ್ರದಲ್ಲಿಯೇ ಎಲ್ಲೆಡೆ ಆವರಿಸಿಕೊಂಡಿತು. 18 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದ್ದವು.

Narendra Modi tweet about Surat fire accident

ನರೇಂದ್ರ ಮೋದಿ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಘಟನೆಯಿಂದ ದುಃಖಿತನಾಗಿದ್ದೇನೆ, ಸಾವನ್ನಪ್ಪಿದ ಕುಟುಂಬದವರಿಗೆ ಸಾಂತ್ವನಗಳು. ಗುಜರಾತ್ ಸರ್ಕಾರ ಮತ್ತು ಸ್ಥಳೀಯ ಆಡಳಿತಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ ಎಂದು ಮೋದಿ ಹೇಳಿದ್ದಾರೆ.

PUBG ಆಡಲು ಬಿಡದ ಪತಿಯನ್ನೇ ಬಿಡಲು ನಿರ್ಧರಿಸಿದ ಹತ್ತೊಂಬತ್ತು ವರ್ಷದ ಹೆಂಡತಿPUBG ಆಡಲು ಬಿಡದ ಪತಿಯನ್ನೇ ಬಿಡಲು ನಿರ್ಧರಿಸಿದ ಹತ್ತೊಂಬತ್ತು ವರ್ಷದ ಹೆಂಡತಿ

ಸಾವನ್ನಪ್ಪಿದವರ ಕುಟುಂಬಕ್ಕೆ ನಾಲ್ಕು ಲಕ್ಷ ರೂಪಾಯಿಯನ್ನು ರಾಜ್ಯ ಸರ್ಕಾರ ಘೋಷಿಸಿದೆ. ಗಾಯಗೊಂಡವರಿಗೂ ಪರಿಹಾರ ಘೋಷಿಸಿದೆ.

ವಿದ್ಯಾರ್ಥಿಗಳು ಜೀವ ಭಯದಿಂದ ನಾಲ್ಕನೇ ಮಹಡಿಯಿಂದ ಕೆಳಗೆ ಹಾರುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ದೃಶ್ಯ ಭೀಕರವಾಗಿದೆ.

English summary
Narendra Modi tweeted about Surat fire accident. he said Extremely anguished by the fire tragedy in Surat. My thoughts are with bereaved families.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X