ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗ ಮೋದಿಗೆ ಆಶೀರ್ವದಿಸಿ ಮತ ಚಲಾಯಿಸಿದ ಹೀರಾ ಬೆನ್

|
Google Oneindia Kannada News

ಅಹಮದಾಬಾದ್, ಏಪ್ರಿಲ್ 23: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ 95 ವರ್ಷದ ಹೀರಾ ಬೆನ್ ಅವರು ಇಂದು ಮತ ಚಲಾಯಿಸಿದರು.

ಮೋದಿ ಅವರು ಮತ ಚಲಾಯಿಸಲು ತೆರಳುವ ಮೊದಲು ಮನೆಗೆ ತೆರಳಿ ತಾಯಿ ಹೀರಾಬೆನ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಗನಿಗೆ ಆಶೀರ್ವದಿಸಿದ ತಾಯಿ ಹೀರಾ ಬೇನ್, ತೆಂಗಿನಕಾಯಿ, ಶಾಲು ಜೊತೆಗೆ ಐದುನೂರು ರೂಪಾಯಿ ಹಣ ನೀಡಿ ಚುನಾವಣೆಯಲ್ಲಿ ಗೆಲ್ಲುವಂತೆ ಹಾರೈಸಿದರು. ಮಗನಿಗೆ ಸಿಹಿ ತಿನ್ನಿಸಿ ತಾವೂ ಸಿಹಿ ತಿಂದರು.

ನಿನ್ನೆ ರಾತ್ರಿ ಯಶವಂತಪುರ ರೈಲ್ವೆನಿಲ್ದಾಣದಲ್ಲಿ ಮೋದಿ ಅಭಿಮಾನಿಗಳು ಮಾಡಿದ್ದೇನು? ನಿನ್ನೆ ರಾತ್ರಿ ಯಶವಂತಪುರ ರೈಲ್ವೆನಿಲ್ದಾಣದಲ್ಲಿ ಮೋದಿ ಅಭಿಮಾನಿಗಳು ಮಾಡಿದ್ದೇನು?

ಹೀರಾಬೆನ್ ಅವರು ಗುಜರಾತ್‌ನ ಗಾಂಧಿನಗರದಿಂದ ರೈಸಾನ್ ಎಂಬಲ್ಲಿ ವಾಸವಾಗಿದ್ದು, ಅವರು ಮೋದಿ ಅವರ ಸಹೋದರ ಪಂಕಜ್‌ ಮೋದಿ ಅವರೊಂದಿಗೆ ತೆರಳಿ ಮತಚಲಾಯಿಸಿದರು.

ವಾರಣಾಸಿಯಲ್ಲಿ ತಮಗೇ ಮತ ಹಾಕಿಕೊಳ್ಳುವ ಅದೃಷ್ಟ ಮೋದಿಗಿಲ್ಲ! ವಾರಣಾಸಿಯಲ್ಲಿ ತಮಗೇ ಮತ ಹಾಕಿಕೊಳ್ಳುವ ಅದೃಷ್ಟ ಮೋದಿಗಿಲ್ಲ!

Narendra Modis mother Heera Ben casted her vote

ಇತ್ತ ಮೋದಿ ಅವರು ಅಹಮದಾಬಾದ್‌ನಲ್ಲಿ ಮತ ಚಲಾಯಿಸಿದರು. ಮತಚಲಾಯಿಸಿ ಟ್ವೀಟ್ ಮಾಡಿರುವ ಮೋದಿ, ಪ್ರಜಾಪ್ರಭುತ್ವವನ್ನು ಬಲಪಡಿಸುವ ಕಾರ್ಯದಲ್ಲಿ ಭಾಗಿಯಾಗಿದ್ದೇನೆ ಎಂದು ಹೇಳಿದ್ದಾರೆ.

Narendra Modis mother Heera Ben casted her vote

ಇಂದು ಮೂರನೇ ಹಂತದ ಲೋಕಸಭೆ ಚುನಾವಣೆಯು ನಡೆಯುತ್ತಿದ್ದು ಗುಜರಾತ್ ಸೇರಿದಂತೆ 15 ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ.

English summary
Narendra Modi today met his mother Heera Ben before he cast his vote. Narendra Modi's mother 95 year old Heera Ben also casted her vote today in Gujrat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X