• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಗುಜರಾತ್; 1,026 ಕೋಟಿ ಮೌಲ್ಯದ 513 ಕೆಜಿ ಡ್ರಗ್ಸ್ ವಶ

|
Google Oneindia Kannada News

ಅಹಮದಾಬಾದ್, ಆಗಸ್ಟ್ 16: ಮುಂಬೈ ಆಂಟಿ ನಾರ್ಕೋಟಿಕ್ಸ್ ಸೆಲ್‌ನ ವರ್ಲಿ ಘಟಕವು ಗುಜರಾತ್‌ನ ಭರೂಚ್ ಜಿಲ್ಲೆಯಲ್ಲಿ ಡ್ರಗ್ಸ್ ರಾಕೆಟ್ ಒಂದನ್ನು ಪತ್ತೆ ಹಚ್ಚಿದೆ. ಭರೂಚ್‌ನ ಅಂಕಲೇಶ್ವರ ಪ್ರದೇಶದಲ್ಲಿ ಪೊಲೀಸರು ಸುಮಾರು 513 ಕೆಜಿ ಎಂಡಿ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡಿರುವ ಮಾದಕ ವಸ್ತುಗಳ ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 1,026 ಕೋಟಿ ರೂಪಾಯಿಗಳು. ಈ ಪ್ರಕರಣದಲ್ಲಿ ಮಹಿಳೆ ಸೇರಿದಂತೆ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪೈಕಿ 5 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಇಬ್ಬರು ಆರೋಪಿಗಳು ಮಾದಕ ವಸ್ತು ನಿಗ್ರಹ ಘಟಕದ ವಶದಲ್ಲಿದ್ದಾರೆ.

ಇದಕ್ಕೂ ಮುನ್ನ ಮುಂಬೈ ಪೊಲೀಸರು ಶಿವಾಜಿ ನಗರದಿಂದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಪೊಲೀಸರು ಡ್ರಗ್ಸ್ ಜಾಲವನ್ನು ಹುಡುಕುವಲ್ಲಿ ತೊಡಗಿದ್ದರು. ಈ ಸರಕನ್ನು ಹಿಡಿಯಲು ಮುಂಬೈ ಪೊಲೀಸರು ಐದು ತಿಂಗಳ ಕಾಲ ಹರಸಾಹಸ ಪಟ್ಟಿದೆ.

ಮುಂಬೈ ಪೊಲೀಸರ ಮಾದಕ ವಸ್ತು ನಿಗ್ರಹ ಘಟಕ ಈ ಬಗ್ಗೆ ನಿರಂತರವಾಗಿ ಕೆಲಸ ಮಾಡುತ್ತಿತ್ತು. ಇದು ಹಲವು ರಾಜ್ಯಗಳಲ್ಲಿ ಹರಡಿರುವ ದೊಡ್ಡ ಅಂತರರಾಜ್ಯ ಡ್ರಗ್ ಗ್ಯಾಂಗ್ ಎಂದು ಪೊಲೀಸರು ಹೇಳಿದ್ದಾರೆ. ಈ ಗ್ಯಾಂಗ್ ವಿಶೇಷವಾಗಿ ಯುವಕರನ್ನು ಗುರಿಯಾಗಿಸುತ್ತದೆ. ಈ ಮಾದವ ವಸ್ತುಗಳನ್ನು ಮೇಲ್ವರ್ಗದ ಜನರಿಗೆ ಸರಬರಾಜು ಮಾಡಲಾಗುತ್ತದೆ.

ಮಾರ್ಚ್ 29 ರಂದು, ಮುಂಬೈನ ಶಿವಾಜಿ ನಗರ ಪ್ರದೇಶದಿಂದ ಮಾದಕವಸ್ತು ಕಳ್ಳಸಾಗಣೆ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಮುಂಬೈ ಪೊಲೀಸರ ನಾರ್ಕೋಟಿಕ್ಸ್ ಸೆಲ್‌ನ ವರ್ಲಿ ಘಟಕವು ಬಂಧಿಸಿದೆ.

ಬಂಧಿತರಿಂದ ಸುಮಾರು 4.5 ಕೋಟಿ ಮೌಲ್ಯದ ಎಂಡಿ (ಡ್ರಗ್ಸ್) ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಂದಿನಿಂದ ಪೊಲೀಸರು ಈ ಗ್ಯಾಂಗ್ ಬಗ್ಗೆ ತನಿಖೆ ಆರಂಭಿಸಿದ್ದರು. ಆಂಟಿ ನಾರ್ಕೋಟಿಕ್ಸ್ ಸೆಲ್ ಆಗಸ್ಟ್ 3 ರಂದು ಪಾಲ್ಘರ್ ಜಿಲ್ಲೆಯ (ಮುಂಬೈನ ಹೊರವಲಯ) ನಲಸೋಪಾರಾದಿಂದ 1,403 ಕೋಟಿ ರೂಪಾಯಿ ಮೌಲ್ಯದ 701 ಕೆಜಿ ಮೆಫೆಡ್ರೋನ್ (ಎಂಡಿ) ಅನ್ನು ವಶಪಡಿಸಿಕೊಂಡಿದೆ. ಈ ವೇಳೆ ಮಹಿಳೆ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದರು.

ಈ ಕೆಲಸದಲ್ಲಿ ತೊಡಗಿದ್ದ ಮಹಿಳೆಯನ್ನು ಜುಲೈ 27 ರಂದು ಬಂಧಿಸಲಾಗಿತ್ತು. ಮಹಿಳೆ ನೀಡಿದ ಮಾಹಿತಿಯ ಆಧಾರದ ಮೇಲೆ ಆಗಸ್ಟ್ 2 ರಂದು ಮತ್ತೊಬ್ಬ ಶಂಕಿತನನ್ನು ಬಂಧಿಸಲಾಯಿತು. ನಂತರ ಐದನೇ ಆರೋಪಿಯನ್ನು ಆಗಸ್ಟ್ 3 ರಂದು ವಶಕ್ಕೆ ಪಡೆಯಲಾಯಿತು. ಎಲ್ಲಾ ಆರೋಪಿಗಳ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆಕ್ಟ್ 1985 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

English summary
Mumbai Anti Narcotics Cell Worli unit recovered about 513 kg of MD drugs in Gujarat, its value Rs 1,026 crore. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X