ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮಸ್ತೆ ಟ್ರಂಪ್: ಮೊಟೆರಾ ಸ್ಟೇಡಿಯಂ ಕಟ್ಟಿದವರಿಗೆ ಆಹ್ವಾನವಿರಲಿಲ್ಲ!

|
Google Oneindia Kannada News

ಅಹಮದಾಬಾದ್, ಫೆಬ್ರವರಿ 25: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡು ದಿನಗಳ ಭಾರತ ಪ್ರವಾಸದ ಸಂದರ್ಭದಲ್ಲಿ ಹಲವು ಕಾರ್ಯಕ್ರಮಗಳ ನಡುವೆ ಮುಖ್ಯವಾಗಿ ಎಲ್ಲರ ಕುತೂಹಲ ಕೆರಳಿಸಿದ್ದು ನಮಸ್ತೆ ಟ್ರಂಪ್ ಕಾರ್ಯಕ್ರಮ. ಮೊಟೆರಾ ಸ್ಟೇಡಿಯಂ ಹೊಸ ಸ್ವರೂಪದೊಂದಿಗೆ ಈ ಕಾರ್ಯಕ್ರಮಕ್ಕೆ ವೇದಿಕೆ ಒದಗಿಸಿತ್ತು. ಆದರೆ, ಮೊಟೆರಾ ಸ್ಟೇಡಿಯಂ ನಿರ್ಮಿಸಿದ ವ್ಯಕ್ತಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನವಿರಲಿಲ್ಲ ಎಂಬ ಸುದ್ದಿ ಬಂದಿದೆ.

ಪೋಟಸ್ ಸ್ವಾಗತಕ್ಕಾಗಿ ಇಡೀ ಸ್ಟೇಡಿಯಂ ಸಿಂಗಾರಗೊಳಿಸಲಾಗಿತ್ತು. ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಗೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಸ್ವಾಗತ ಕೋರಿದರು. ಹೌಡಿ ಮೋದಿ ಕಾರ್ಯಕ್ರಮದಂತೆ ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೋಟೆರಾ ಸ್ಟೇಡಿಯಂ ಹೆಸರನ್ನು ಸರ್ದಾರ್ ವಲ್ಲಭಬಾಯಿ ಸ್ಟೇಡಿಯಂ ಎಂದು ಮರುನಾಮಕರಣ ಮಾಡಲಾಗಿದೆ. 1 ಲಕ್ಷ 10 ಸಾವಿರ ಸೀಟು ಹೊಂದಿದೆ. ಅತಿ ದೊಡ್ದ ಕ್ರಿಕೆಟ್ ಮೈದಾನ ಎನಿಸಿದೆ.

ನಮಸ್ತೆ ಟ್ರಂಪ್‌ಗೆ ವೇದಿಕೆ ಒದಗಿಸಿದ ಸ್ಟೇಡಿಯಂ ವಿಶೇಷತೆಗಳೇನು?

1983ರಲ್ಲಿ 8 ತಿಂಗಳು 13ದಿನಗಳಲ್ಲಿ ಮೃಗೇಶ್ ಜೈಕೃಷ್ಣ ಎಂಬುವರು ಈ ಕ್ರೀಡಾಗಣವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಮೊಟೆರಾದ ಕಾರ್ಯಕ್ರಮಕ್ಕೆ ವಿನ್ಯಾಸಗಾರ ಜೈಕೃಷ್ಣ ಆಹ್ವಾನ ಸಿಕ್ಕಿಲ್ಲ ಎಂದು ಮುಂಬೈ ಮಿರರ್ ವರದಿ ಮಾಡಿದೆ.

ವಿಶ್ವದ ಅತಿ ದೊಡ್ಡ ಕ್ರೀಡಾಂಗಣ ಎಂಬ ಹೆಮ್ಮೆ

ವಿಶ್ವದ ಅತಿ ದೊಡ್ಡ ಕ್ರೀಡಾಂಗಣ ಎಂಬ ಹೆಮ್ಮೆ

"ಆಗ ಮೊಟೆರಾ ಕ್ರೀಡಾಂಗಣದಲ್ಲಿ 54 ಸಾವಿರ ಜನರು ಪಂದ್ಯ ವೀಕ್ಷಿಸಬಹುದಾಗಿತ್ತು. ಕ್ರೀಡಾಂಗಣವನ್ನು ನವೀಕರಿಸಿ ಇನ್ನಷ್ಟು ವಿಸ್ತರಿಸಲು 2016ರಲ್ಲಿ ಜಿಸಿಎ ಹಳೆಯ ಕ್ರೀಡಾಂಗಣವನ್ನು ಕೆಡವಿ ಹೊಸ ಕಾಮಗಾರಿ ಆರಂಭಿಸಿತ್ತು. ಈಗ ವಿಶ್ವದ ಅತಿ ದೊಡ್ಡ ಕ್ರೀಡಾಂಗಣಗಳಲ್ಲಿ ಒಂದೆನಿಸಿರುವುದು ತುಂಬಾ ಹೆಮ್ಮೆಯ ವಿಷಯ" ಎಂದಿದ್ದಾರೆ.

ಕ್ರಿಕೆಟ್ ಮಂಡಳಿಯ ಉಪಾಧ್ಯಕ್ಷರಾಗಿದ್ದ ಜೈಕೃಷ್ಣ

ಕ್ರಿಕೆಟ್ ಮಂಡಳಿಯ ಉಪಾಧ್ಯಕ್ಷರಾಗಿದ್ದ ಜೈಕೃಷ್ಣ

ಗುಜರಾತ್ ಕ್ರಿಕೆಟ್ ಮಂಡಳಿಯ ಉಪಾಧ್ಯಕ್ಷರಾಗಿದ್ದ ಜೈಕೃಷ್ಣ ಅವರು ಹೊಸ ಸ್ಟೇಡಿಯಂ ನಿರ್ಮಾಣಕ್ಕಾಗಿ 1982ರಲ್ಲಿ ರೂಪುರೇಷೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳಿಸಿದ್ದರು. ಸಬರಮತಿ ನದಿ ಸಮೀಪದಲ್ಲಿ 100 ಎಕರೆ ವಿಸ್ತೀರ್ಣದ ಜಾಗವನ್ನು ಸರ್ಕಾರ ಮಂಜೂರು ಮಾಡಿತ್ತು. ಮರುವರ್ಷವೇ ಸ್ಟೇಡಿಯಂ ನಿರ್ಮಿಸಲಾಗಿತ್ತು. ಕ್ರಿಕೆಟ್ ಅಲ್ಲದೆ, ಫುಟ್ಬಾಲ್, ಹಾಕಿ, ಬಾಸ್ಕೆಟ್ ಬಾಲ್, ಕಬಡ್ಡಿ, ಬಾಕ್ಸಿಂಗ್, ಟೆನಿಸ್, ಅಥ್ಲೆಟಿಕ್ಸ್ ಮುಂತಾದ ಕ್ರೀಡೆಗಳಿಗೂ ಬಳಸಬಹುದಾಗಿದೆ.

Donald Trump India Visit Live: ಮೋದಿ-ಟ್ರಂಪ್ ಜಂಟಿ ಸುದ್ದಿಗೋಷ್ಠಿ ಆರಂಭDonald Trump India Visit Live: ಮೋದಿ-ಟ್ರಂಪ್ ಜಂಟಿ ಸುದ್ದಿಗೋಷ್ಠಿ ಆರಂಭ

ಸ್ಟೇಡಿಯಂನಲ್ಲಿ ಮೂರು ಅಭ್ಯಾಸ ಮೈದಾನಗಳು ಇರಲಿವೆ

ಸ್ಟೇಡಿಯಂನಲ್ಲಿ ಮೂರು ಅಭ್ಯಾಸ ಮೈದಾನಗಳು ಇರಲಿವೆ

ಸ್ಟೇಡಿಯಂನಲ್ಲಿ ಮೂರು ಅಭ್ಯಾಸ ಮೈದಾನಗಳು ಇರಲಿವೆ. ಇದರ ಜೊತೆ ಒಂದು ಒಳ ಕ್ರೀಡಾಂಗಣವೂ ಇರಲಿದೆ. 3,000 ಕಾರುಗಳು ಮತ್ತು 10,000 ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್ ಸೌಲಭ್ಯವಿದೆ. ಅಲ್ಲದೆ, ವಾಹನಗಳ ಸಂಚಾರ ಮತ್ತು ಪಾದಚಾರಿ ಮಾರ್ಗಗಳ ಸಂಪರ್ಕಕ್ಕೆ ಯಾವುದೇ ಅಡೆ ತಡೆ ಇರುವುದಿಲ್ಲ. 55 ಸುಸಜ್ಜಿತ ಕೊಠಡಿಗಳ ಕ್ಲಬ್‌ ಮತ್ತು ಒಲಿಂಪಿಕ್ ಗಾತ್ರದ ಸ್ವಿಮ್ಮಿಂಗ್ ಪೂಲ್ ಇರಲಿದ್ದು, 76 ಕಾರ್ಪೊರೆಟ್ ಬಾಕ್ಸ್‌ಗಳಿರಲಿವೆ.

ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಭಾಷಣ

ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಭಾಷಣ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಅವರ ಪತ್ನಿ ಮೆಲಾನಿಯಾ, ಮಗಳು ಇವಾಂಕ ಟ್ರಂಪ್ ಮತ್ತು ಅಳಿಯ ಜಾರೆಡ್ ಕುಶ್ನರ್ ಎರಡು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಬಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜೊತೆ ಅಹಮದಾಬಾದ್ ನಲ್ಲಿ ರೋಡ್ ಶೋ, ಸಬರಮತಿ ಆಶ್ರಮಕ್ಕೆ ಭೇಟಿ, ನಂತರ ಮೊಟೆರಾದ ನೂತನ ಬೃಹತ್ ಕ್ರೀಡಾಂಗಣ ಉದ್ಘಾಟಿಸಿ, ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಭಾಷಣ ಮಾಡಿದರು ನಂತರ ಆಗ್ರಾಕ್ಕೆ ತೆರಳಿ ತಾಜ್ ಮಹಲ್ ವೀಕ್ಷಿಸಿದರು.

English summary
Mrugesh Jaikrishna, The Man Who Built Motera Stadium, who constructed in just 8 months and 13 days in 1983, was not invited to Namaste Trump show.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X