ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಟಾಪ್-50 ಉದ್ಯಮ ಸ್ನೇಹಿ ರ‍್ಯಾಂಕಿಂಗ್‌ಗೆ ಮೋದಿ ಹಂಬಲ

|
Google Oneindia Kannada News

ಗಾಂಧಿನಗರ, ಜನವರಿ 18: ಉದ್ಯಮ ಸ್ನೇಹಿ ರ‍್ಯಾಂಕಿಂಗ್ ನಲ್ಲಿ ಭಾರತವು ಕಳೆದ ನಾಲ್ಕು ವರ್ಷದಲ್ಲಿ 65ನೇ ರ‍್ಯಾಂಕಿಂಗ್ ಗೆ ಏರಿಕೆಯಾಗಿದೆ. ಇದನ್ನು ಟಾಪ್ 50ರ ಒಳಗೆ ತರಲು ಸೂಚನೆ ನೀಡಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಗುಜರಾತ್‌ನ ಗಾಂಧಿನಗರದಲ್ಲಿ ನಡೆದ ವೈಬ್ರಂಟ್ ಗುಜರಾತ್ ಗ್ಲೋಬಲ್ ಸಮಿತ್-2019ನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಯುವಜನತೆ ಯಾವುದೇ ಉದ್ಯಮ ಮಾಡಲು ಹಿಂಜರಿಯುತ್ತಿದ್ದ ಕಾಲವೊಂದಿತ್ತು, ಆದರೆ ಇದೀಗ ಎಲ್ಲಾ ಉದ್ಯಮಕ್ಕೂ ಸಿದ್ಧರಿದ್ದಾರೆ ಎಂದು ತಿಳಿಸಿದರು.

ಜಿಎಸ್‌ಟಿ ಜಾರಿಗೆ ತಂದ ಬಳಿಕ ಹಾಗೂ ಕೆಲವು ತೆರಿಗೆಗಳನ್ನು ಸಡಿಲಗೊಳಿಸಿದ ಬಳಿಕ ವಿನಿಮಯ ವೆಚ್ಚ ಕೂಡ ಕಡಿಮೆಯಾಗಿದೆ, ಸುಲಭವಾಗಿ ಉದ್ಯೋಗವನ್ನು ಮಾಡಬಹುದಾಗಿದೆ. ನೂತನ ತಂತ್ರಜ್ಞಾನ ಮೂಲಕ ಸಾಕಷ್ಟು ಪ್ರಕ್ರಿಯೆಗಳು ಸುಲಭವಾಗಿದೆ, ಉದ್ಯೋಗಗಳು ಕೇವಲ ಉದ್ಯೋಗ ಮಾತ್ರವಾಗಿರದೆ ಜೀವನವನ್ನು ಸುಲಭವಾಗಿ ನಿರ್ವಹಿಸಲು ಒಂದು ಸಾಧನ ಕೂಡ ಆಗಿದೆ ಎಂದು ಹೇಳಿದರು.

ಹೊಸ ಉದ್ಯೋಗ ಮಾಡಬೇಕು ಎಂದು ಬಯಸುವವರು ಮೇಕ್ ಇನ್ ಇಂಡಿಯಾ ಮೂಲಕ ಆರಂಭಿಸಬಹುದು, ಅದರ ಮೂಲಕ ಯಾವುದಾದರು ಉದ್ಯೋಗದ ಮೇಲೆ ಹಣವನ್ನು ಹೂಡಿಕೆ ಮಾಡಬೇಕು, ಉತ್ಪನ್ನಗಳ ತಯಾರಿಕೆಯನ್ನು ಆರಂಭಿಸಬೇಕು, ಹೆಚ್ಚೆಚ್ಚು ಯುವಕರನ್ನು ಅದರಲ್ಲಿ ತೊಡಗಿಸಿಕೊಂಡು ಉದ್ಯೋಗವನ್ನು ಸೃಷ್ಟಿ ಮಾಡಬೇಕು ಇದು ಮೇಕ್ ಇನ್ ಇಂಡಿಯಾದ ಗುರಿಯಾಗಿದೆ.

Modi eying on top 50 ease of doing business rank

1991 ರಿಂದ ಭಾರತದಲ್ಲಿ ಆಡಳಿತ ನಡೆಸಿದ ಯಾವುದೇ ಸರ್ಕಾರದ ಅವಧಿಗಿಂತ ಉತ್ತಮ ಜಿಡಿಪಿ ಬೆಳವಣಿಗೆಯನ್ನು ನಮ್ಮ ಸರ್ಕಾರ ಸಾಧಿಸಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಜಿಡಿಪಿ ಶೇ.7.3ರಷ್ಟಿದೆ ಎಂದರು.

English summary
In the last 4 years, we have jumped 65 places in the Global Ranking of World Bank’s Doing Business Report. But we are still not satisfied. I have asked my team to work harder so that India is in the top 50 next year Said Prime minister Narendra modi in Vibrant gujrat summit 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X