ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಗೆ ನೀವು ಕಲಿಸಿದ ಪಾಠವೇನು ತಿಳಿಸಿ ಮೋದಿ ಎಂದ ಅಹ್ಮದ್ ಪಟೇಲ್

|
Google Oneindia Kannada News

ಅಹ್ಮದಾಬಾದ್ (ಗುಜರಾತ್), ಡಿಸೆಂಬರ್ 30: ನೆಹರೂ ರೀತಿಯಲ್ಲಿ ಜಾಕೆಟ್ ಧರಿಸಿದ ಮಾತ್ರಕ್ಕೆ ನೀವು ನೆಹರೂ ಆಗಲು ಸಾಧ್ಯವಿಲ್ಲ. ವಿದೇಶಗಳಿಗೆ ಭೇಟಿ ನೀಡಿದ ಮಾತ್ರಕ್ಕೆ ಇಂದಿರಾಗಾಂಧಿ ಆಗಲು ಸಾಧ್ಯವಿಲ್ಲ. ಅಥವಾ ಕುರ್ತಾ ಧರಿಸಿದರೆ ರಾಜೀವ್ ಗಾಂಧಿ ಆಗಲಾರಿರಿ. ತ್ಯಾಗದ ಮೂಲಕ ಅಷ್ಟೇ ನೆಹರೂ, ಇಂದಿರಾ ಮತ್ತು ರಾಜೀವ್ ಆಗಲು ಸಾಧ್ಯ ಎಂದು ರಾಜ್ಯ ಸಭಾ ಸದಸ್ಯ ಅಹ್ಮದ್ ಪಟೇಲ್ ಹೇಳಿದ್ದಾರೆ.

ಎನ್ ಜಿಒಯಿಂದ ಗುಜರಾತ್ ನ ಅರಾವಳಿ ಜಿಲ್ಲೆಯಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಅದರದೇ ಭಾಷೆಯಲ್ಲೇ ಉತ್ತರಿಸಬೇಕು ಎಂದು, ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಅವರು ಪಾಕಿಸ್ತಾನಕ್ಕೆ ಲವ್ ಲೆಟರ್ ಬರೆಯುತ್ತಾರೆ ಎಂದು ಮೋದಿ ಹೀಗಳೆದಿದ್ದರು.

ಪ್ರಧಾನಿ ಮೋದಿ ವಿದೇಶ ಪ್ರವಾಸದ ಖರ್ಚು-ವೆಚ್ಚದ ಮೊತ್ತ ಬಹಿರಂಗ ಪ್ರಧಾನಿ ಮೋದಿ ವಿದೇಶ ಪ್ರವಾಸದ ಖರ್ಚು-ವೆಚ್ಚದ ಮೊತ್ತ ಬಹಿರಂಗ

ಆದರೆ, ಮೋದಿ ಪ್ರಧಾನಿಯಾದ ಮೇಲೆ ಏನು ಮಾಡಿದ್ದಾರೆ? ಪಾಕಿಸ್ತಾನಕ್ಕೆ ಪಾಠ ಕಲಿಸಿದರಾ? ತಮ್ಮ ಪ್ರಮಾಣ ವಚನ ಸಮಾರಂಭಕ್ಕೆ ನವಾಜ್ ಷರೀಫ್ ರನ್ನು ಆಹ್ವಾನಿಸಿದ್ದು ಎಲ್ಲರಿಗೂ ಗೊತ್ತಿದೆ. ಆಹ್ವಾನ ನೀಡದಿದ್ದರೂ ಬಿರಿಯಾನಿ ತಿನ್ನುವ ಸಲುವಾಗಿ ಮೋದಿ ಪಾಕಿಸ್ತಾನಕ್ಕೆ ತೆರಳಿದ್ದರು ಎಂದು ವ್ಯಂಗ್ಯವಾಡಿದ್ದಾರೆ.

Modi can’t be Nehru only by wearing Nehru jackets said Ahmed Patel

ಉತ್ತರ ಪ್ರದೇಶದಲ್ಲೂ ಮೈತ್ರಿ ಬಿರುಕು? ಬಿಜೆಪಿಗೆ ಆಘಾತದ ಸುಳಿವು! ಉತ್ತರ ಪ್ರದೇಶದಲ್ಲೂ ಮೈತ್ರಿ ಬಿರುಕು? ಬಿಜೆಪಿಗೆ ಆಘಾತದ ಸುಳಿವು!

ಕಾಂಗ್ರೆಸ್ ನಿಂದ ಪ್ರಧಾನಿ ಆಗಿದ್ದವರು ಪಾಕಿಸ್ತಾನಕ್ಕೆ ಏನು ಪಾಠ ಮಾಡಿದ್ದರು ಎಂಬುದನ್ನು ನೆನಪಿಸಬೇಕಿದೆ. ದಿವಂಗತ ಪ್ರಧಾನಿ ಇಂದಿರಾಗಾಂಧಿ ಅವರು ಪಾಕಿಸ್ತಾನವನ್ನು ತುಂಡು ಮಾಡಿ, ಬಾಂಗ್ಲಾದೇಶ್ ಎಂಬ ಪ್ರತ್ಯೇಕ ದೇಶ ಮಾಡಿದರು. ಆಗಿದ್ದ ಎಲ್ಲ ಅಂತರರಾಷ್ಟ್ರೀಯ ಒತ್ತಡವನ್ನೂ ಅವರು ಮೀರಿದರು. ಪಾಕಿಸ್ತಾನದ ಒಂದು ಲಕ್ಷ ಸೈನಿಕರು ಭಾರತೀಯ ಸೈನ್ಯಕ್ಕೆ ಶರಣಾಗುವಂತೆ ಮಾಡಿದರು ಎಂದ ಅವರು, ಇವೆಲ್ಲ ದಾಖಲಾಗಿರುವ ಇತಿಹಾಸ. ಬದಲಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ.

English summary
Slamming Prime Minister Narendra Modi, senior Congress leader Ahmed Patel on Saturday said that the Prime Minister has failed miserably in fulfilling all promises he had made before the 2014 Lok Sabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X