ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶಿಷ್ಟ ಸಂಪ್ರದಾಯ: ಗುಜರಾತ್‌ನಲ್ಲಿ ಸೀರೆ ಉಟ್ಟು ನವರಾತ್ರಿ ಆಚರಿಸುವ ಪುರುಷರು

|
Google Oneindia Kannada News

ಅಹಮದಾಬಾದ್ ಸೆಪ್ಟೆಂಬರ್ 26: ದೇಶಾದ್ಯಂತ ಜನರು ಅದ್ಧೂರಿಯಾಗಿ ನವರಾತ್ರಿ ಹಬ್ಬವನ್ನು ಆಚರಿಸಲು ಆರಂಭಿಸಿದ್ದಾರೆ. ಇಂದಿನಿಂದ ನವರಾತ್ರಿ ಆರಂಭವಾಗಿದೆ. ನವರಾತ್ರಿ ಆಚರಣೆಯಲ್ಲಿ ಪ್ರತಿಯೊಂದು ಪ್ರದೇಶ ಅಥವಾ ಸಮುದಾಯವು ತನ್ನದೇ ಆದ ಸಂಪ್ರದಾಯಗಳನ್ನು ಹೊಂದಿದೆ. ಅಹಮದಾಬಾದ್ ಮತ್ತು ವಡೋದರದಲ್ಲಿ ಒಂದು ವಿಶಿಷ್ಟವಾದ ನವರಾತ್ರಿ ಆಚರಣೆಯ ಸಂಪ್ರದಾಯವಿದೆ. ಒಂಬತ್ತು ದಿನಗಳ ನವರಾತ್ರಿ ಉತ್ಸವದ ಎಂಟನೇ ರಾತ್ರಿಯಲ್ಲಿ ಬರೋಟ್ ಸಮುದಾಯಕ್ಕೆ ಸೇರಿದ ಪುರುಷರು ಸೀರೆಗಳನ್ನು ಧರಿಸುತ್ತಾರೆ ಮತ್ತು ನೃತ್ಯ ಮಾಡುತ್ತಾರೆ. ಇದು 200 ವರ್ಷಗಳ ಹಿಂದಿನ ಸಂಪ್ರದಾಯವಾಗಿದ್ದು ಇಂದಿನವರೆಗೂ ಅನುಸರಿಸಿಕೊಂಡು ಬರಲಾಗುತ್ತಿದೆ.

ನಂಬಿಕೆಗಳ ಪ್ರಕಾರ, ಅನೇಕ ವರ್ಷಗಳ ಹಿಂದೆ 'ಸದುಬಾ' ಎಂಬ ಮಹಿಳೆಯು ಬಾರೋಟ್ ಸಮುದಾಯದ ಪುರುಷರು ತನ್ನ ಘನತೆಯನ್ನು ರಕ್ಷಿಸಲು ಸಹಾಯ ಮಾಡಲು ನಿರಾಕರಿಸಿದಾಗ ಅವರಿಗೆ ಶಾಪವನ್ನು ನೀಡಿದ್ದಳು ಎಂದು ಹೇಳಲಾಗುತ್ತದೆ. ಈ ವೇಳೆ ಆಕೆ ತನ್ನ ಮಗುವನ್ನು ಕಳೆದುಕೊಂಡಿರುತ್ತಾಳೆ ಎನ್ನಲಾಗಿದೆ. ಅವಳ ಶಾಪ ಇನ್ನೂ ಪ್ರಬಲವಾಗಿದೆ ಎಂದು ಸ್ಥಳೀಯರು ನಂಬುತ್ತಾರೆ. ಅವಳನ್ನು ಸಮಾಧಾನಪಡಿಸಲು, ಅವಳ ಗೌರವಾರ್ಥವಾಗಿ ಒಂದು ದೇವಾಲಯವನ್ನು ನಿರ್ಮಿಸಲಾಯಿತು. ಅಲ್ಲಿ ಪುರುಷರು ಹೋಗಿ ಪ್ರಾರ್ಥಿಸುತ್ತಾರೆ ಮತ್ತು ಅವಳ ಕ್ಷಮೆಯನ್ನು ಕೋರುತ್ತಾರೆ. ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಆಕೆಯನ್ನು ಕೊಂಪವನ್ನು ಶಾಂತಗೊಳಿಸಲು ಮತ್ತು ಪುರುಷರು ತಮ್ಮ ಆಸೆಗಳನ್ನು ಪೂರೈಸಲು ಆಶೀರ್ವದಿಸಲು ಸೀರೆಯಲ್ಲಿ ನೃತ್ಯ ಮಾಡುತ್ತಾರೆ.

Men Wearing Sarees; Unique Tradition During Navratri in Gujarat

ಪ್ರತಿ ವರ್ಷ ಸುಮಾರು 800 ಜನ ಭಾಗವಹಿಸುವವರು ಗಾರ್ಬಾಗೆ ಸೇರುತ್ತಾರೆ. ಅಷ್ಟಮಿಯ ದಿನದಂದು, ನಗರದಾದ್ಯಂತ ನೂರಾರು ಬಾರೋಟ್ ಸಮುದಾಯದ ಪುರುಷರು ಸಾದು ಮಾತಾ ನಿ ಪೋಲ್‌ನಲ್ಲಿ ಸದುಬಾ ಮಾತೆಗೆ ನಮನ ಸಲ್ಲಿಸಲು ಸೇರುತ್ತಾರೆ.

Men Wearing Sarees; Unique Tradition During Navratri in Gujarat

ದೇವಿ ದುರ್ಗ ಮತ್ತು ಅವಳ ಒಂಬತ್ತು ಅವತಾರಗಳಾದ ನವದುರ್ಗೆಯ ಆರಾಧನೆಗೆ ಸಮರ್ಪಿತವಾಗಿರುವ ನವರಾತ್ರಿಯು ಸೆಪ್ಟೆಂಬರ್ 26 ರಂದು ಪ್ರಾರಂಭವಾಗಿ ಅಕ್ಟೋಬರ್ 5 ರಂದು ಕೊನೆಗೊಳ್ಳುತ್ತದೆ. ನವರಾತ್ರಿಯು ರಾಕ್ಷಸ ಮಹಿಷಾಸುರನನ್ನು ಕೊಂದ ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯ ವಿಜಯವನ್ನು ಆಚರಿಸುತ್ತದೆ. ಒಂಬತ್ತು ದಿನಗಳ ನವರಾತ್ರಿ ಉತ್ಸವದಲ್ಲಿ ಭಕ್ತರು ದೇವಿ ದುರ್ಗೆಯ ಒಂಬತ್ತು ಅವತಾರಗಳನ್ನು ಪೂಜಿಸುವ ಮೂಲಕ ಜನ ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ.

English summary
There is a unique tradition in Gujarat where Barot community men celebrate Navratri wearing a saree.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X