ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ ಬಗ್ಗೆ ಪಿಎಚ್ ಡಿ ಪ್ರಬಂಧ ಮಂಡಿಸಿದ 'ಮೆಹುಲ್ ಚೋಕ್ಸಿ!'

|
Google Oneindia Kannada News

ಸೂರತ್, ಮಾರ್ಚ್ 18: ಗುಜರಾತಿನ ಮುಖ್ಯಮಂತ್ರಿಯಾಗಿ ಮತ್ತು ಪ್ರಧಾನಿಯಾಗಿ ನರೇಂದ್ರ ಮೋದಿ ಅವರ ಬದುಕಿನ ಹಾದಿಯನ್ನು ಕುರಿತು ಸಂಶೋಧನಾ ಪ್ರಬಂಧವನ್ನು ಸೂರತ್ ಮೂಲದ ವಿದ್ಯಾರ್ಥಿಯೊಬ್ಬರು ಮಂಡಿಸಿದ್ದಾರೆ. ಆ ವಿದ್ಯಾರ್ಥಿಯ ಹೆಸರು ಮೆಹುಲ್ ಚೋಕ್ಸಿ!

ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾ ಏಪ್ರಿಲ್ 12ಕ್ಕೆ ತೆರೆಗೆನರೇಂದ್ರ ಮೋದಿ ಜೀವನಾಧಾರಿತ ಸಿನಿಮಾ ಏಪ್ರಿಲ್ 12ಕ್ಕೆ ತೆರೆಗೆ

ಮೆಹುಲ್ ಚೋಕ್ಸಿ ಎಂದೊಡನೆ 13 ಸಾವಿರ ಕೋಟಿ ರೂ ಪಿಎನ್ ಬಿ ಹಗರಣದ ರೂವಾರಿ, ದೇಶಭ್ರಷ್ಟ ಆರ್ಥಿಕ ಅಪರಾಧಿಯ ಮುಖ ಕಣ್ಮುಂದೆ ಬರಬಹುದು. ಆದರೆ ಆ ಮೆಹುಲ್ ಚೋಕ್ಸಿ ಬೇರೆ, ಈ ಮೆಹುಲ್ ಚೋಕ್ಸಿಯೇ ಬೇರೆ!

ಭಾರತದ ಪೌರತ್ವ ವಾಪಸ್ ಮಾಡಿದ ಉದ್ಯಮಿ ಮೆಹುಲ್ ಚೋಕ್ಸಿ ಭಾರತದ ಪೌರತ್ವ ವಾಪಸ್ ಮಾಡಿದ ಉದ್ಯಮಿ ಮೆಹುಲ್ ಚೋಕ್ಸಿ

"Leadership under Government- Case Study of Narendra Modi" ಎಂಬ ವಿಷಯದ ಬಗ್ಗೆ ಮೆಹುಲ್ ಚೋಕ್ಸಿ ಪ್ರಬಂಧ ಮಂಡಿಸಿದ್ದಾರೆ. ತಮ್ಮ ಪ್ರಬಂಧಕ್ಕಾಗಿ ಅವರು ಒಂದು ಸಮೀಕ್ಷೆಯನ್ನೂ ಮಾಡಿದ್ದು, ಸುಮಾರು 450ಕ್ಕೂ ಹೆಚ್ಚು ಜನರನ್ನು ಸಂದರ್ಶನ ಸಹ ಮಾಡಿದ್ದಾರೆ. ಅವರಲ್ಲಿ ಸರ್ಕಾರಿ ಅಧಿಕಾರಿಗಳು, ರೈತರು, ವಿದ್ಯಾರ್ಥಿಗಳು, ರಾಜಕಾರಣಿಗಳು ಎಲ್ಲರೂ ಇದ್ದಾರೆ.

Mehul Choksi sumbmits doctroral theses on PM Modi

ವಕಿಲರಾಗಿಯೂ ಕೆಲಸ ಮಾಡುತ್ತಿರುವ ಚೋಕ್ಸಿ, ನಿಲೇಶ್ ಜೋಷಿ ಎಂಬುವವರ ಮಾರ್ಗದರ್ಶನದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ.

ನರೇಂದ್ರ ಮೋದಿ ಅವರ ಜೀವನಾಧರಿತ ಬಾಲಿವುಡ್ ಚಿತ್ರ ಏಪ್ರಿಲ್ 12 ಕ್ಕೆ ತೆರೆ ಕಾಣುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.

English summary
A Surat based student Mehul Choksi has successfully completed his PhD thesis on Narendra Modi as the chief minister of Gujarat and Prime minister of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X