• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಿವ್ ಇನ್‌ ಅಲ್ಲಿದ್ದ ಮಹಿಳೆ ಹಾಗೂ ಅಪ್ರಾಪ್ತ ಮಗಳನ್ನು ಹತ್ಯೆಗೈದು ಚರಂಡಿಗೆ ಎಸೆದ ವ್ಯಕ್ತಿ

|

ಅಹಮದಾಬಾದ್,ಫೆಬ್ರವರಿ 15: ವ್ಯಕ್ತಿಯೊಬ್ಬ ಲಿವ್‌ ಇನ್‌ ಅಲ್ಲಿದ್ದ ಮಹಿಳೆ ಹಾಗೂ ಆಕೆಯ ಅಪ್ರಾಪ್ತ ಮಗಳನ್ನು ಹತ್ಯೆ ಮಾಡಿ ಚರಂಡಿ ಎಸೆದಿರುವ ಘಟನೆ ಗುಜರಾತ್‌ನಲ್ಲಿ ಬೆಳಕಿಗೆ ಬಂದಿದೆ.

37 ವರ್ಷದ ವ್ಯಕ್ತಿ ಲಿವ್ ಇನ್ ಪಾರ್ಟ್ನರ್‌ನ್ನು ಕೊಲೆ ಮಾಡಿದ್ದಾನೆ. ಗಾಂಧಿಧಾಮದ ಬಳಿ ಚರಂಡಿಯನ್ನು ಶವವನ್ನು ಎಸೆದಿದ್ದ ಎನ್ನಲಾಗಿದೆ. ಆರೋಪಿ ಸಂಜಯ್ ಸಿಂಗ್ ಎಂಬುವವನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಮರ್ಯಾದಾ ಹತ್ಯೆ: ಮುಸ್ಲಿಂ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳ ಸಜೀವ ದಹನಮರ್ಯಾದಾ ಹತ್ಯೆ: ಮುಸ್ಲಿಂ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳ ಸಜೀವ ದಹನ

ಮೂರು ದಿನಗಳ ಹಿಂದೆ ಪ್ಲಂಬರ್ ಸಿಂಗ್ 41 ವರ್ಷದ ಲಿವ್ ಇನ್ ಪಾರ್ಟ್ನರ್ ಹಾಗೂ ಆಕೆಯ 14 ವರ್ಷದ ಮಗಳಿಗೆ ತಲೆಗೆ ಸುತ್ತಿಗೆಯಿಂದ ಹೊಡೆದಿದ್ದ. ರಕ್ತಸ್ರಾವವಾಗಿ ಮೃತಪಟ್ಟಿದ್ದರು.

ಬಳಿಕ ಎರಡೂ ಶವವನ್ನು ಹತ್ತಿರವಿದ್ದ ಅರಣ್ಯಕ್ಕೆ ತನ್ನ ಬೈಕಿನಲ್ಲಿ ತೆಗೆದುಕೊಂಡು ಹೋಗಿದ್ದ, ಹಾಗೆಯೇ ಚರಂಡಿಯಲ್ಲಿ ಅವರ ಶವವನ್ನು ಹಾಕಿದ್ದ.

ಅಪ್ರಾಪ್ತೆಯ ಶವ ಭಾನುವಾರ ಪತ್ತೆಯಾಗಿದ್ದು, ಮಹಿಳೆಯ ಶವ ಇಂದು ಪತ್ತೆಯಾಗಿದೆ. ಸುಮಾರು 10 ವರ್ಷಗಳಿಂದ ಅವರಿಬ್ಬರು ಲಿವ್ ಇನ್ ರಿಲೇಷನ್‌ ಅಲ್ಲಿದ್ದರು ಎಂಬುದು ತಿಳಿದುಬಂದಿದೆ.

ಆಕೆ 2009ರಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಗಂಡಮನೆಯನ್ನು ಬಿಟ್ಟು ಬಂದಿದ್ದಳು. ಬಳಿಕ ಸಿಂಗ್ ಜತೆ ವಾಸಿಸಲು ಶುರು ಮಾಡಿದ್ದಳು. ಮದುವೆಯಾಗದೆ ಅವರಿಬ್ಬರು ಒಟ್ಟಿಗೆ ಇದ್ದರು.

ಕಳೆದ ಕೆಲವು ದಿನಗಳ ಹಿಂದೆ ಸಿಂಗ್‌ಗೆ ಮತ್ತೊಬ್ಬ ಮಹಿಳೆಯ ಜತೆ ಸಂಬಂಧವಿರುವುದು ತನ್ನ ತಾಯಿಗೆ ಗೊತ್ತಾಗಿತ್ತು. ಬಳಿಕ ಅವರ ಮಧ್ಯೆ ಸಂಬಂಧ ಸರಿ ಇರಲಿಲ್ಲ ಎಂದು ಮತ್ತೊಬ್ಬ ಮಗಳು ತಿಳಿಸಿದ್ದಾಳೆ.

English summary
A 37-year-old man allegedly killed his live-in partner and her minor daughter following frequent quarrels and dumped their bodies in a sewer near Gandhidham in Gujarat's Kutch district, the police said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X