ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀಪ್ ಎಂಜಿನ್ ಸ್ಟಾರ್ಟ್ ಆಗದಿದ್ದಕ್ಕೆ ಬೆಂಕಿ ಹೊತ್ತಿಸಿದ ಭೂಪ

|
Google Oneindia Kannada News

ಅಹ್ಮದಾಬಾದ್ (ಗುಜರಾತ್), ಸೆಪ್ಟೆಂಬರ್ 5: ಜೀಪ್ ವೊಂದರ ಮಾಲೀಕ ಹಾಗೂ ಆತನ ಸ್ನೇಹಿತನನ್ನು ರಾಜ್ ಕೋಟ್ ಪೊಲೀಸರು ಬಂಧಿಸಿದ್ದು, ಸೆಪ್ಟೆಂಬರ್ 2ರಂದು ಜೀಪ್ ಗೆ ಬೆಂಕಿ ಹೊತ್ತಿಸಿದ ಆರೋಪದಲ್ಲಿ ಬಂಧಿಸಿದ್ದಾರೆ. ವಾಹನಕ್ಕೆ ಬೆಂಕಿ ಹೊತ್ತಿಸಿದ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಹಾಗೂ ಟಿಕ್ ಟಾಕ್ ನಲ್ಲಿ ಕೂಡ ಹರಿಬಿಡಲಾಗಿದೆ.

ಆ ವಿಡಿಯೋದಲ್ಲಿ, ಕತ್ತು- ಕೈ ತುಂಬ ಬಂಗಾರ ಮೆತ್ತಿಕೊಂಡಂತೆ ಇರುವ ವ್ಯಕ್ತಿಯೊಬ್ಬ ತನ್ನದೇ ಜೀಪ್ ಗೆ ಪೆಟ್ರೋಲ್ ಸುರಿದು, ಬೆಂಕಿ ಕಡ್ಡಿಯನ್ನು ಗೀರಿ, ಜೀಪ್ ಕಡೆಗೆ ತೂರಿದ್ದಾನೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ರಾಜ್ ಕೋಟ್ ನ ಕೊಠಾರಿಯಾ ರಸ್ತೆಯಲ್ಲಿ ಇಂದ್ರಜಿತ್ ಸಿಂಗ್ ಜಡೇಜಾ ಜೀಪ್ ಗೆ ಬೆಂಕಿ ಹೊತ್ತಿಸಿದ್ದಾನೆ. ಆತನ ಸ್ನೇಹಿತ ನಿಮೇಶ್ ಗೋಹಲ್ ಆ ಕ್ಷಣದ ದೃಶ್ಯಗಳನ್ನು ಸೆರೆ ಹಿಡಿದಿದ್ದಾನೆ.

ತಿಲಕ್ ಪಾರ್ಕ್ ಸಿಪಿಐ ಪಾರ್ವತಮ್ಮ ಆವಾಜ್ ಓಕೆ, ವಿಡಿಯೋ ಯಾಕೆ?ತಿಲಕ್ ಪಾರ್ಕ್ ಸಿಪಿಐ ಪಾರ್ವತಮ್ಮ ಆವಾಜ್ ಓಕೆ, ವಿಡಿಯೋ ಯಾಕೆ?

ಇಬ್ಬರೂ ಆರೋಪಿಗಳನ್ನು ಭಕ್ತಿನಗರ್ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ, ಬೇಜವಾಬ್ದಾರಿ ನಡವಳಿಕೆಯ ಆರೋಪ ಮಾಡಲಾಗಿದೆ. ಆರೋಪಿ ಜಡೇಜಾ ವಾಹನದ ಬಿಡಿ ಭಾಗಗಳ ಮಾರಾಟಗಾರ. ಹಲವು ಸಲ ಪ್ರಯತ್ನ ಮಾಡಿದರೂ ಜೀಪ್ ಎಂಜಿನ್ ಸ್ಟಾರ್ಟ್ ಆಗಲಿಲ್ಲ ಎಂಬ ಸಿಟ್ಟಿನಲ್ಲಿ ಆತ ಬೆಂಕಿ ಹೊತ್ತಿಸಿದ್ದಾನೆ.

Man From Gujarat Set Ablaze His Own Jeep

ಮೊದಲಿಗೆ, ಜಡೇಜಾ ತನ್ನ ಸ್ನೇಹಿತನಿಗೆ ನಿರ್ಧಾರವನ್ನು ತಿಳಿಸಿದ್ದಾನೆ. ಅದನ್ನು ಗಂಭೀರವಾಗಿ ತೆಗೆದುಕೊಳ್ಳದ ನಿಮೇಶ್ ದೂರ ಹೋಗಿ ನಿಂತಿದ್ದಾನೆ. ಆ ನಂತರ ಜೀಪ್ ಗೆ ಬೆಂಕಿ ಹೊತ್ತಿಸುವಾಗ ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ಇಬ್ಬರಿಗೂ ಟಿಕ್ ಟಾಕ್ ವಿಡಿಯೋ ಮಾಡಬೇಕು ಎಂಬ ಉದ್ದೇಶ ಏನಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯ ಚಿತ್ರೀಕರಣ ಮಾಡಿಕೊಂಡ ಮೇಲೆ ನಿಮೇಶ್ ತನ್ನ ಕೆಲವು ಸ್ನೇಹಿತರಿಗೆ ಆ ವಿಡಿಯೋ ಕಳಿಸಿದ್ದಾನೆ. ಆ ನಂತರ ವಿಡಿಯೋಗೆ ಪಂಜಾಬಿ ಹಾಡೊಂದನ್ನು ಸೇರಿಸಿ, ಟಿಕ್ ಟಾಕ್ ವಿಡಿಯೋ ಮಾಡಲಾಗಿದೆ. ಇಬ್ಬರೂ ಆರೋಪಿಗಳಿಗೆ ಸ್ಥಳೀಯ ಕೋರ್ಟ್ ನಲ್ಲಿ ಜಾಮೀನು ಸಿಕ್ಕಿದೆ.

English summary
Man from Gujarat and his friend arrested by police for set ablaze a jeep on September 1st. Video viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X