ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆಗೆ ಒಂದು ದಿನ ಇರುವಾಗಲೇ ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಆಘಾತ

|
Google Oneindia Kannada News

ಅಹಮದಾಬಾದ್, ಏಪ್ರಿಲ್ 10: ಲೋಕಸಭೆ ಚುನಾವಣೆಯ ಮೊದಲ ಹಂತಕ್ಕೆ ಒಂದು ದಿನ ಮೊದಲೇ ಗುಜರಾತ್‌ನ ಕಾಂಗ್ರೆಸ್‌ಗೆ ಭಾರಿ ಆಘಾತ ಎದುರಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಗುಜರಾತ್‌ ಕಾಂಗ್ರೆಸ್‌ನ ಪ್ರಭಾವಿ ಮತ್ತು ಒಬಿಸಿ ನಾಯಕ ಅಲ್ಪೇಶ್ ಠಾಕೋರ್ ಮಂಗಳವಾರ ಪಕ್ಷ ತೊರೆದಿದ್ದಾರೆ. ಇದನ್ನು ಅವರ ಆಪ್ತ ಧವಳ್ ಝಾಲಾ ಖಚಿತಪಡಿಸಿದ್ದಾರೆ. ಪಕ್ಷದ ಎಲ್ಲ ಹುದ್ದೆಗಳಿಗೂ ಅವರು ರಾಜೀನಾಮೆ ನೀಡಿದ್ದಾರೆ.

ಲೋಕಸಭೆ ಸ್ಪರ್ಧೆಯಿಂದ ಹಿಂದೆ ಸರಿದ ಹಾಲಿ ಸಂಸದ ಪರೇಶ್ ರಾವಲ್ ಲೋಕಸಭೆ ಸ್ಪರ್ಧೆಯಿಂದ ಹಿಂದೆ ಸರಿದ ಹಾಲಿ ಸಂಸದ ಪರೇಶ್ ರಾವಲ್

ಅಲ್ಪೇಶ್ ನೇತೃತ್ವದ ಕ್ಷತ್ರಿಯ ಠಾಕೋರ್ ಸೇನಾ ನಡೆಸಿದ ಕೋರ್ ಕಮಿಟಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಕಾಂಗ್ರೆಸ್‌ಗೆ ನೀಡಿದ್ದ ಬೆಂಬಲವನ್ನು ಸೇನಾ ಹಿಂದಕ್ಕೆ ಪಡೆದುಕೊಂಡಿದೆ.

lok sabha elections 2019 gujarat obc leader alpesh thakor quits congress

ಒಂದು ತಿಂಗಳ ಹಿಂದಷ್ಟೇ ಅಲ್ಪೇಶ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಅದಕ್ಕೆ ಅಲ್ಪೇಶ್, ತಾವು ಠಾಕೂರ್ ಸಮುದಾಯದ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕಿದ್ದು, ಕಾಂಗ್ರೆಸ್‌ನಲ್ಲಿಯೇ ಮುಂದುವರಿಯುವುದಾಗಿ ಸ್ಪಷ್ಟೀಕರಣ ನೀಡಿದ್ದರು. ಅಲ್ಲದೆ, ಮುಂದಿನ ಲೋಕಸಭೆ ಚುನಾವಣೆಗೆ ತಾವು ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದರು.

'ನಾನು ಕಾಂಗ್ರೆಸ್‌ನಲ್ಲಿಯೇ ಉಳಿಯುತ್ತೇನೆ ಮತ್ತು ಪಕ್ಷಕ್ಕೆ ನನ್ನ ಬೆಂಬಲವನ್ನು ಮುಂದುವರಿಸಲಿದ್ದೇನೆ. ನನ್ನ ಜನರ ಗೌರವ ಮತ್ತು ಅವರ ಹಕ್ಕುಗಳನ್ನು ನಾನು ಬಯಸುತ್ತೇನೆ' ಎಂದು ಮಾರ್ಚ್‌ನಲ್ಲಿ ಅವರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು.

ಗುಜರಾತ್‌: ಮೋದಿ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ಅಬ್ಬರದ ಪ್ರಚಾರಗುಜರಾತ್‌: ಮೋದಿ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ಅಬ್ಬರದ ಪ್ರಚಾರ

ಕಾಂಗ್ರೆಸ್ ತೊರೆದಿರುವ ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆಯೇ ಅಥವಾ ಬೇರೆ ಪಕ್ಷಕ್ಕೆ ಸೇರಿಕೊಳ್ಳಲಿದ್ದಾರೆಯೇ ಎಂಬುದನ್ನು ಖಚಿತಪಡಿಸಿಲ್ಲ. ಆದರೆ, ಅಲ್ಪೇಶ್ ಮತ್ತು ಧವಳ್ ಝಾಲಾ ಬಿಜೆಪಿ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಹಾರ್ದಿಕ್ ಪಟೇಲ್ ಗೆ ಸುಪ್ರೀಂ ಕೋರ್ಟ್ ನಿಂದ ಮುಖಭಂಗಹಾರ್ದಿಕ್ ಪಟೇಲ್ ಗೆ ಸುಪ್ರೀಂ ಕೋರ್ಟ್ ನಿಂದ ಮುಖಭಂಗ

ಎರಡು ವರ್ಷಗಳ ಹಿಂದೆ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಅಲ್ಪೇಶ್, ಗುಜರಾತ್ ವಿಧಾನಸಭೆಗೆ ರಾಧಾನ್ಪುರ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು.

English summary
lok sabha elections 2019: Gujarat Congress MLA and OBC leader alpesh Thakor quits the party a day ahead of first phase of elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X