ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸರ್ಕಾರದ ದ್ವಂದ್ವ ನಿಲುವು; ಕೈಗಾರಿಕೆಗಳಿಗೆ ಕವಿದ ಮಂಕು

|
Google Oneindia Kannada News

ಅಹಮದಾಬಾದ್, ಮೇ 3: ಕಳೆದ 48 ದಿನಗಳಿಂದ ಲಾಕ್‌ಡೌನ್ ನಿಂದ ದೇಶವೇ ತತ್ತರಿಸಿ ಹೋಗಿದೆ. ಸದ್ಯ ಲಾಕ್‌ಡೌನ್‌ಗೆ ಕೇಂದ್ರ ಸರ್ಕಾರ ಕೆಲವು ವಿನಾಯಿತಿಗಳನ್ನು ನೀಡಿದೆ, ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು, ಕೈಗಾರಿಕೆ, ನಿರ್ಮಾಣ ಚಟುವಟಿಕೆಗಳಿಗೆ ಅನುಮತಿ ಕೊಟ್ಟಿದೆ.

ಆದರೆ, ಕೇಂದ್ರ ಸರ್ಕಾರ ಲಾಕ್‌ಡೌನ್ ಬಗ್ಗೆ ಕೈಗೊಂಡಿರುವ ತೀರ್ಮಾನಗಳಲ್ಲಿ ವಿರೋಧಾಭಾಸಗಳು ಉಂಟಾಗಿವೆ ಎಂಬ ಆರೋಪಗಳು ಕೇಳಿ ಬಂದಿವೆ.

ಸ್ವಂತ ಊರಿಗೆ ತೆರಳಲು ಬಸ್ ನಿಲ್ದಾಣದ ಕಡೆ ಕಾರ್ಮಿಕರ ದಾಂಗುಡಿಸ್ವಂತ ಊರಿಗೆ ತೆರಳಲು ಬಸ್ ನಿಲ್ದಾಣದ ಕಡೆ ಕಾರ್ಮಿಕರ ದಾಂಗುಡಿ

ಈ ಕುರಿತು ಆಂಗ್ಲ ದೈನಿಕ ಬುಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆ ಬೆಳಕು ಚೆಲ್ಲಿದೆ. ಒಂದೆಡೆ ಕೇಂದ್ರ ಸರ್ಕಾರ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಲು ಬಸ್, ರೈಲು ಸಾರಿಗೆ ವ್ಯವಸ್ಥೆ ಮಾಡಿದೆ. ಇತ್ತ ಕೈಗಾರಿಕೆ ಹಾಗೂ ನಿರ್ಮಾಣ ಚಟುವಟಿಕೆಗಳನ್ನು ನಡೆಸಬಹುದು ಎಂದು ಹೇಳಿದೆ. ಈ ಬಗ್ಗೆ ಪತ್ರಿಕೆ ದೇಶದ ಅನೇಕ ಕಡೆ ಕಾರ್ಮಿಕರನ್ನು, ಕಾರ್ಮಿಕ ಮುಖಂಡರನ್ನು ಮಾತನಾಡಿಸಿದಾಗ ಅವರು, ಊರಿಗೆ ತೆರಳಲು ಇಚ್ಚೆ ವ್ಯಕ್ತಪಡಿಸಿದ್ದಾರೆ.

ಅನ್ನ ಆಹಾರವಿಲ್ಲದೇ ತೀವ್ರ ಪಡಿಪಾಟಲು ಪಟ್ಟಿದ್ದಾರೆ

ಅನ್ನ ಆಹಾರವಿಲ್ಲದೇ ತೀವ್ರ ಪಡಿಪಾಟಲು ಪಟ್ಟಿದ್ದಾರೆ

ಗುಜರಾತ್‌ನ ಅಹಮದಾಬಾದ್, ಸೂರತ್ ಸೇರಿದಂತೆ ಅನೇಕ ದೊಡ್ಡ ನಗರಗಳು ದೊಡ್ಡ ದೊಡ್ಡ ಕೈಗಾರಿಕೆಗಳನ್ನು ಹೊಂದಿವೆ. ಇಲ್ಲಿಗೆ ಓಡಿಶಾ, ಉತ್ತರಪ್ರದೇಶ, ಬಿಹಾರ್ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳ ಕಾರ್ಮಿಕರು ಕೆಲಸಕ್ಕೆ ಬರುತ್ತಾರೆ. ಲಾಕ್‌ಡೌಕ್‌ನಿಂದ ಕಳೆದ ಒಂದೂವರೆ ತಿಂಗಳಿನಿಂದ ಈ ಕಾರ್ಮಿಕರು ಅನ್ನ ಆಹಾರವಿಲ್ಲದೇ ತೀವ್ರ ಪಡಿಪಾಟಲು ಪಟ್ಟಿದ್ದಾರೆ. ಕೊರೊನಾ ಕುರಿತು ತೀರಾ ಕಟ್ಟುನಿಟ್ಟಿನ ಕ್ರಮಗಳು ಇದ್ದದ್ದರಿಂದ ಈ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲೂ ಸಹ ಆಗಿರಲಿಲ್ಲ.

ಕೆಲಸಕ್ಕೆ ಸೇರುವ ಬದಲು ಮನೆಗೆ ಮರಳಲು ಬಯಸುತ್ತೇವೆ

ಕೆಲಸಕ್ಕೆ ಸೇರುವ ಬದಲು ಮನೆಗೆ ಮರಳಲು ಬಯಸುತ್ತೇವೆ

ಈಗ ನಿರ್ಮಾಣ ಹಾಗೂ ಕೈಗಾರಿಕೆ ಚಟುವಟಿಕೆಗಳು ಆರಂಭವಾಗಿರುವುದರಿಂದ ಗುತ್ತಿಗೆದಾರರು ಕಾರ್ಮಿಕರನ್ನು ಕರೆ ತರಲು ಪ್ರಯತ್ನ ನಡೆಸುತ್ತಿರುವುದು ಕಂಡು ಬರುತ್ತಿದೆ. ಅಹಮದಾಬಾದ್‌ನಲ್ಲಿ ಗುತ್ತಿಗೆದಾರರ ಬಳಿ, ಕಾರ್ಮಿಕರು ನಮಗೆ ಇಲ್ಲಿಇರಲು ಇಷ್ಟವಿಲ್ಲ. ಸರ್ಕಾರ ಬಸ್ ಟ್ರೈನ್ ವ್ಯವಸ್ಥೆ ಮಾಡಿದೆ. ನಾವು ನಮ್ಮ ಊರುಗಳಿಗೆ ತೆರಳುತ್ತೇವೆ ಎಂದು ಹೇಳಿದ್ದಾರೆ. ದೇಶಾದ್ಯಂತ ಇದೇ ಪರಿಸ್ತಿತಿ ಉಂಟಾಗಿದೆ ಎಂದು ಪತ್ರಿಕೆ ಹೇಳಿದೆ. ಒಂದೇ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ವಾಸಿಸುತ್ತಿರುವ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಒಡಿಶಾದಂತಹ ವಿವಿಧ ರಾಜ್ಯಗಳಿಗೆ ಸೇರಿದ ಅನೇಕ ಕಾರ್ಮಿಕರು ಕೆಲಸಕ್ಕೆ ಸೇರುವ ಬದಲು ಮನೆಗೆ ಮರಳಲು ಬಯಸುತ್ತೇವೆ ಎಂದಿದ್ದಾರೆ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್‌ಗೆ ತಿಳಿಸಿದರು.

ವಾಪಸ್‌ ಬರಲು ಸುಮಾರು ಮೂರು ತಿಂಗಳೇ ಕಳೆಯಬಹುದು

ವಾಪಸ್‌ ಬರಲು ಸುಮಾರು ಮೂರು ತಿಂಗಳೇ ಕಳೆಯಬಹುದು

ಕಾರ್ಮಿಕರ ಆದಾಯದ ಮಟ್ಟ ಕಡಿಮೆ ಇರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಅಲ್ಪಾವಧಿಯಲ್ಲಿ ಕಾರ್ಮಿಕರನ್ನು ಉಳಿಸಿಕೊಳ್ಳುವುದು ಕಷ್ಟಕರವಾಗಬಹುದು ಎಂದು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿಯ ಕೈಗಾರಿಕಾ ಸಂಬಂಧಗಳ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಎಂ.ಎಸ್. ಉನ್ನಿಕೃಷ್ಣನ್ ಹೇಳಿದ್ದಾರೆ. "ಆದರೆ ಒಮ್ಮೆ ಅವರು ಮನೆಗೆ ಹಿಂದಿರುಗಿದರೆ, ಅವರು ವಾಪಸ್‌ ಬರಲು ಸುಮಾರು ಮೂರು ತಿಂಗಳೇ ಕಳೆಯಬಹುದು ಎನ್ನುತ್ತಾರೆ. ಕೈಗಾರಿಕೆಗಳು ಮೂಲಭೂತ ಅಗತ್ಯಗಳನ್ನು ನೋಡಿಕೊಳ್ಳುವುದರ ಜೊತೆಗೆ ಸುರಕ್ಷಿತ ಕೆಲಸದ ಪರಿಸ್ಥಿತಿಗಳನ್ನು ನೀಡುವ ಮೂಲಕ ಕಾರ್ಮಿಕರನ್ನು ಹಿಂತಿರುಗಿಸಲು ಪ್ರೇರೇಪಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕೈಗಾರಿಕೆಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ'

ಕೈಗಾರಿಕೆಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ'

ಕಾರ್ಮಿಕರಿಗೆ ಮತ್ತೊಂದು ಚಿಂತೆ ಎಂದರೆ, ಸರ್ಕಾರದ ಇತ್ತೀಚಿನ ಮಾರ್ಗಸೂಚಿಗಳ ಪ್ರಕಾರ, ಸೈಟ್‌ಗಳಲ್ಲಿ ಕೆಲಸ ಮಾಡುವವರ ಸಂಖ್ಯೆ ಸೀಮಿತವಾಗಿರುತ್ತದೆ. ಕಾರ್ಖಾನೆಗಳು ಮತ್ತು ಸಂಸ್ಥೆಗಳು ಶೇಕಡಾ 33 ರಷ್ಟು ಉದ್ಯೋಗಿಗಳೊಂದಿಗೆ ಪುನರಾರಂಭಗೊಳ್ಳಬೇಕಾಗುತ್ತದೆ. "ಎಲ್ಲರಿಗೂ ಕೆಲಸ ಸಿಗುವುದಿಲ್ಲ" ಎಂದು ಹೀಗಾಗಿ ಸುಮ್ಮನೇ ಊರಿಗೆ ಹೋಗುವುದು ಸೂಕ್ತ ಎಂದು ಪಶ್ಚಿಮ ಬಗಾಳದ ಅನ್ವರ್ ಎಂಬ ಕಾರ್ಮಿಕ ಹೇಳುತ್ತಾನೆ. ಉತ್ಕಲ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ (ಯುಸಿಸಿಐ) ಅಧ್ಯಕ್ಷ ರಮೇಶ್ ಮೊಹಾಪಾತ್ರ, "ವಲಸೆ ಕಾರ್ಮಿಕರ ಆತಿಥೇಯ ರಾಜ್ಯಗಳು ವಸತಿ ಮತ್ತು ಆಹಾರವನ್ನು ಒದಗಿಸಬೇಕಾಗಿರುವುದರಿಂದ ನಿರ್ಬಂಧಿಸಲಾಗಿದೆ. ಇದಲ್ಲದೆ, ಅನೇಕ ಕಾರ್ಮಿಕರು ತಮ್ಮ ಸ್ಥಳೀಯ ಪ್ರದೇಶಗಳಿಗೆ ಹಿಂತಿರುಗಲು ಸಿದ್ಧರಿದ್ದಾರೆ. ಇದು ಉತ್ಪಾದನೆಯನ್ನು ಪುನರಾರಂಭಿಸಲು ಕೈಗಾರಿಕೆಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ'' ಎಂದು ಹೇಳುತ್ತಾರೆ.

English summary
Labours Not Interested To Work At Factories Says Report. Central Government Allow the Industries, but, also gives the permission for going to native to migrate labours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X