• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇದೇನಿದು? ಏರ್‌ಪೋರ್ಟ್‌ನಲ್ಲಿ ಅಡ್ಡಾಡುತ್ತಿದೆ ಕರಡಿ!: ವೈರಲ್ ವಿಡಿಯೋ

|

ಅಹ್ಮದಾಬಾದ್, ಫೆಬ್ರವರಿ 7: ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ಸರ್ದಾರ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೃಹತ್ ಗಾತ್ರದ ಕರಡಿಯೊಂದು ಮನಬಂದಂತೆ ಓಡಾಡುತ್ತಿದೆ. ವಿಮಾನ ನಿಲ್ದಾಣದ ಆವರಣದಲ್ಲೆಲ್ಲಾ ಓಡಾಡುತ್ತಿದ್ದ ಕರಡಿ ಕಂಡು ಅನೇಕರು ಚಕಿತಗೊಂಡಿದ್ದಾರೆ. ಅರೇ ಇದೇನಿದು? ವಿಮಾನ ನಿಲ್ದಾಣದೊಳಗೆ ಕರಡಿ ಬರಲು ಸಾಧ್ಯವೇ? ಸಿಬ್ಬಂದಿಯ ಕಣ್ಣು ತಪ್ಪಿಸಿ ಆ ಜನನಿಬಿಡ ಪ್ರದೇಶದೊಳಗೆ ಕರಡಿ ಹೇಗೆ ಬಂತು ಎಂಬ ಗೊಂದಲವೇ?

ಇದು ಅಂತಿಂಥ ಕರಡಿಯಲ್ಲ. ಇದನ್ನು ವಿಮಾನ ನಿಲ್ದಾಣದ ಸಿಬ್ಬಂದಿಯೇ ಒಳಗೆ ಬಿಟ್ಟಿರುವುದು. ಹೀಗಾಗಿ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ನಿಮಗೆ ಕರಡಿ ಕಾಣಿಸಿದರೆ ಅಚ್ಚರಿ ಅಥವಾ ಭಯ ಪಡಬೇಕಾಗಿಲ್ಲ. ಹೀಗೆ ಓಡಾಡಿಕೊಂಡು ಈ 'ಕರಡಿ' ಕುಣಿಯುತ್ತಾ, ಜಿಗಿಯುತ್ತಾ, ಕೂಗುತ್ತಾ ವಿಮಾನ ನಿಲ್ದಾಣದ ಮೂಲೆ ಮೂಲೆಗೆ ಹೋಗುತ್ತಿದೆ. ಈ ಕರಡಿಯ ಉದ್ದೇಶವೇ ಅದು, ನಮ್ಮ 'ಪೂರ್ವಜ'ರನ್ನು ಹೆದರಿಸುವುದು!

ಮಂಗನಾಟಕ್ಕೆ ಕನ್ಯೆಯಾಗಿಯೇ ಉಳಿದ ಈ ಊರಿನ ಯುವತಿಯರು: ಕತೆ ಕೇಳಿದ್ರೆ ಬೆಚ್ಚಿ ಬೀಳ್ತೀರ

ಹೌದು. ಇದು ನಿಜವಾದ ಕರಡಿಯಲ್ಲ. ಕರಡಿ ವೇಷದ ಮನುಷ್ಯ. ಮಂಗಗಳ ಕಾಟದಿಂದ ರೋಸೆತ್ತಿದ್ದ ವಿಮಾನ ನಿಲ್ದಾಣ ಸಿಬ್ಬಂದಿ ಕಂಡುಕೊಂಡ ಹೊಸ ವಿಧಾನವಿದು. ಈಗಿನ ಮಂಗಗಳು ಸಾಕಷ್ಟು ಬುದ್ಧಿವಂತವಾಗಿವೆ. ಪಟಾಕಿ ಸದ್ದಿಗೆ ಬೆದರುವುದಿಲ್ಲ. ಮಂಗಗಳನ್ನು ಓಡಿಸುವ ಸಕಲ ಪ್ರಯತ್ನಗಳೂ ಠುಸ್ಸ್ ಆಗುತ್ತಿವೆ. ಮಲೆನಾಡು ಪ್ರದೇಶಗಳಲ್ಲಂತೂ ಮಂಗಗಳ ಹಾವಳಿ ತೀವ್ರವಾಗಿದೆ.

ಕೋತಿಗಳ ಉಪಟಳ ಅಷ್ಟಿಷ್ಟಲ್ಲ

ಕೋತಿಗಳ ಉಪಟಳ ಅಷ್ಟಿಷ್ಟಲ್ಲ

ಅಹಮದಾಬಾದ್‌ನ ಸರ್ದಾರ್ ಪಟೇಲ್ ವಿಮಾನ ನಿಲ್ದಾಣದಲ್ಲಿಯೂ ಹೀಗೆ. ಉದ್ದ ಬಾಲದ ಕೋತಿಗಳಾದ ಲಂಗೂರ್‌ಗಳ ಹಾವಳಿ ಮಿತಿ ಮೀರಿದೆ. ಈ ಕಪಿಗಳು ಮಾಡುವ ಚೇಷ್ಟೆ ಒಂದೆರಡಲ್ಲ. ರನ್‌ವೇದಲ್ಲಿ ಓಡಾಡುವುದು, ಸಿಬ್ಬಂದಿಗೆ ಕಾಟ ಕೊಡುವುದು, ಅಲ್ಲಿನ ಸಲಕರಣೆಗಳನ್ನು ಹಾಳು ಮಾಡುವುದು ಹೀಗೆ ಅನೇಕ ಕಿತಾಪತಿಗಳನ್ನು ಮಾಡುತ್ತಿವೆ. 2019ರ ಏಪ್ರಿಲ್‌ನಲ್ಲಿ ಲಂಗೂರ್‌ಗಳ ಸೈನ್ಯವೊಂದು ವಿಮಾನಗಳ ಕಾರ್ಯಾಚರಣೆಯ ಪ್ರದೇಶದೊಳಗೇ ನುಗ್ಗಿದ್ದ ಪರಿಣಾಮ ಕೆಲವು ವಿಮಾನಗಳನ್ನು ಅಲ್ಲಿ ಇಳಿಸದೆ ಬೇರೆ ವಿಮಾನ ನಿಲ್ದಾಣಕ್ಕೆ ದಿಕ್ಕು ಬದಲಿಸಲಾಗಿತ್ತು. ಅಲ್ಲಿಂದ ಹೊರಡಬೇಕಿದ್ದ ವಿಮಾನಗಳು ವಿಳಂಬವಾಗಿ ಹೊರಟಿದ್ದವು.

ಕರಡಿಗೆ ಬೆದರಿದ ವಾನರ ಸೇನೆ

ಲಂಗೂರ್‌ಗಳನ್ನು ಓಡಿಸಿ ಹೈರಾಣಾದ ಸಿಬ್ಬಂದಿ, ಕೊನೆಗೆ ಹೊಸ ಯೋಜನೆ ರೂಪಿಸಿದರು. ಸಿಬ್ಬಂದಿಯೇ ಕರಡಿ ವೇಷ ತೊಟ್ಟು ಮಂಗಗಳತ್ತ ಓಡಿದರು. ಯಾವುದಕ್ಕೂ ಬಗ್ಗದ ಮಂಗಗಳು ಕರಡಿಗಳಿಗೆ ಹೆದರುತ್ತವೆ ಎನ್ನುವುದನ್ನು ತಿಳಿದು ಈ ಉಪಾಯ ಮಾಡಲಾಗಿತ್ತು. ಕಳೆದ ಒಂದು ವಾರದಿಂದ ಮಂಗಗಳ ಮೇಲೆ 'ಕರಡಿ ಪ್ರಯೋಗ' ನಡೆಸಲಾಗುತ್ತಿದೆ. ಕರಡಿ ಕಂಡು ಕಪಿಗಳು ಅಲ್ಲಿಂದ ಪರಾರಿಯಾಗುತ್ತಿವೆ.

ಶಿವಮೊಗ್ಗದಲ್ಲಿ ಬಿಳಿಯ ಆದ "ಹುಲಿಯಾ", ಏನಿದರ ಹಿಂದಿನ ಕಥೆ?

ಪ್ರಯಾಣಿಕರು, ವಿಮಾನ ಸುರಕ್ಷತೆ ಆದ್ಯತೆ

ಪ್ರಯಾಣಿಕರು, ವಿಮಾನ ಸುರಕ್ಷತೆ ಆದ್ಯತೆ

'ನಮಗೆ ಪ್ರಯಾಣಿಕರ ಸುರಕ್ಷತೆ ಮೊದಲ ಆದ್ಯತೆ. ವಿಮಾನ ನಿಲ್ದಾಣದ ಕಾರ್ಯಾಚರಣೆಯ ಪ್ರದೇಶದಲ್ಲಿ ಅನೇಕ ಲಂಗೂರ್‌ಗಳು ಅಡ್ಡಾಡುತ್ತಿರುತ್ತವೆ. ವಿಮಾನ ಸಂಚಾರ ನಿಯಂತ್ರಣ ಅಧಿಕಾರಿಗಳು ಮತ್ತು ಇತರೆ ಸಿಬ್ಬಂದಿ ಅವುಗಳನ್ನು ಓಡಿಸಲು ಪ್ರಯತ್ನಿಸುತ್ತಾರೆ. ಆದರೆ ಇದರಿಂದ ಅಷ್ಟು ಪ್ರಯೋಜನವಾಗಿಲ್ಲ. ವಿಮಾನ ಹಾಗೂ ಪ್ರಯಾಣಿಕರ ಸುರಕ್ಷತೆಗೆ ಅಪಾಯ ಉಂಟುಮಾಡುವ ಪ್ರಾಣಿ ಮತ್ತು ಪಕ್ಷಿಗಳನ್ನು ಓಡಿಸಲೆಂದೇ ನಾವು ಸಿಬ್ಬಂದಿಯನ್ನು ಹೊಂದಿದ್ದೇವೆ. ಅವರೇ ಕರಡಿ ವೇಷ ತೊಟ್ಟು ಲಂಗೂರ್‌ಗಳನ್ನು ಹೆದರಿಸುತ್ತಿದ್ದಾರೆ. ಲಂಗೂರ್‌ಗಳು ದೊಡ್ಡದಾಗಿದ್ದರೂ ಬಹಳ ಚುರುಕು. ಅವುಗಳಿಂದ ವಿಮಾನಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚು' ಎಂದು ವಿಮಾನ ನಿಲ್ದಾಣ ನಿರ್ದೇಶಕ ಮನೋಜ್ ಗಂಗಲ್ ತಿಳಿಸಿದರು.

ಆರಂಭದಲ್ಲಿ ಯಶಸ್ಸು ಕಂಡ ಪ್ರಯೋಗ

ಆರಂಭದಲ್ಲಿ ಯಶಸ್ಸು ಕಂಡ ಪ್ರಯೋಗ

ಒಂದು ವಾರದ ಹಿಂದೆ ಈ ಪ್ರಯೋಗ ಆರಂಭವಾಗಿದ್ದು, ಯಶಸ್ಸು ಕಂಡಿದೆ. ಒಬ್ಬ ಸಿಬ್ಬಂದಿ ಕರಡಿ ವೇಷ ತೊಟ್ಟು ವಾನರ ಸೈನ್ಯವನ್ನು ಬೆದರಿಸುತ್ತಿದ್ದಾರೆ. ನಿತ್ಯವೂ ಮಂಗಗಳು ಅಲ್ಲಿಗೆ ಬರುತ್ತಿದ್ದು, ಕರಡಿಯ ಆರ್ಭಟಕ್ಕೆ ಹೆದರಿ ಓಡುತ್ತಿವೆ. ಆದರೆ ಇದು ಶಾಶ್ವತ ಪರಿಹಾರ ನೀಡುತ್ತದೆಯೇ ಎನ್ನುವುದು ಖಚಿತವಾಗಿಲ್ಲ. ಕೆಲವು ದಿನಗಳ ಬಳಿಕ ಕರಡಿ ಭಯಕ್ಕೆ ಲಂಗೂರ್‌ಗಳು ತಮ್ಮ ವಾಸ್ತವ್ಯವನ್ನು ಬದಲಿಸುವ ಸಾಧ್ಯತೆ ಇದೆ. ಅಥವಾ ಕರಡಿ ತಮಗೇನೂ ಮಾಡಲಾರದು ಎಂಬುದು ಲಂಗೂರ್‌ ಸೈನ್ಯಕ್ಕೆ ಅರ್ಥವಾದರೆ ಮಾತ್ರ ವಿಮಾನ ನಿಲ್ದಾಣ ಸಿಬ್ಬಂದಿ ಹೊಸ ಮಾರ್ಗ ಹುಡುಕುವುದು ಅನಿವಾರ್ಯ.

ವಿಡಿಯೋ: ಇದಪ್ಪ ತಾಕತ್ತು! ಪೊಲೀಸನ ತಲೆ ಹತ್ತಿ ಹೇನು ಆರಿಸಿದ ಕೋತಿ

English summary
An airport official at Sardar Vallabhai Patel International Airport dressed as bear to scare away langoors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X