ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿಡ್ನಿ ತೆಗೆದು ವೈದ್ಯನ ಯಡವಟ್ಟು; 11 ಲಕ್ಷ ಪರಿಹಾರಕ್ಕೆ ಆದೇಶ!

|
Google Oneindia Kannada News

ಅಹಮದಾಬಾದ್, ಅಕ್ಟೋಬರ್ 19: ಹೊಟ್ಟೆ, ಬೆನ್ನು ನೋವೆಂದು ಆಸ್ಪತ್ರೆಗೆ ದಾಖಲಾದ ವ್ಯಕ್ತಿಗೆ ಕಿಡ್ನಿಯ ಕಲ್ಲು ತೆಗೆಯುವ ಶಸ್ತ್ರ ಚಿಕಿತ್ಸೆ ಮಾಡಬೇಕಿತ್ತು. ಆದರೆ ವೈದ್ಯರೊಬ್ಬರು ಕಿಡ್ನಿಯನ್ನೇ ತೆಗೆದಿದ್ದರಿಂದ ರೋಗಿ ಸಾವನ್ನಪ್ಪಿದ್ದಾರೆ. ಈಗ ಮೃತ ವ್ಯಕ್ತಿಗೆ ಪರಿಹಾರ ನೀಡಲು ಆದೇಶಿಸಲಾಗಿದೆ.

ಗುಜರಾತ್‌ನ ಮಹಿಸಾಗರ್ ಜಿಲ್ಲೆಯ ಅಹೋಸ್ಪಾಲ್ಟಿಯಲ್ಲಿ ವೈದ್ಯನೊಬ್ಬ ರೋಗಿಯ ಎಡ ಮೂತ್ರಪಿಂಡವನ್ನು ತೆಗೆದುಹಾಕಿದ್ದಾನೆ. ಹೀಗಾಗಿ ರೋಗಿ ಮೃತಪಟ್ಟಿದ್ದು ಕುಟುಂಬಕ್ಕೆ 11 ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶಿಸಲಾಗಿದೆ.

ಮೃತ ವ್ಯಕ್ತಿಯನ್ನು ದೇವೇಂದ್ರಭಾಯ್ ರಾವಲ್ ಎಂದು ಗುರುತಿಸಲಾಗಿದೆ. 2011 ರಲ್ಲಿ ಮೂತ್ರಪಿಂಡದ ಕಲ್ಲುಗಳನ್ನು ತೆಗೆಯಲು ಬಾಲಸಿನೋರ್‌ನ ಕೆಎಂಜಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ವೈದ್ಯರು ಕಲ್ಲುಗಳನ್ನು ತೆಗೆಯುವ ಬದಲಿಗೆ ಕಿಡ್ನಿಯನ್ನೇ ತೆಗೆದಿದ್ದಾರೆ.

Instead of the Kidney Stones doctor Removed Kidney

ವೈದ್ಯರ ನಿರ್ಲಕ್ಷ್ಯದ ವಿರುದ್ಧ ಮೃತರ ಸಂಬಂಧಿಯೊಬ್ಬರು ಗುಜರಾತ್ ರಾಜ್ಯ ಗ್ರಾಹಕರ ವಿವಾದ ಪರಿಹಾರ ಆಯೋಗಕ್ಕೆ ಹೋಗಿದ್ದರು. ವಿಚಾರಣೆ ನಡೆಸಿದ ಆಯೋಗವು ಮೃತ ವ್ಯಕ್ತಿಯ ಸಂಬಂಧಿಕರಿಗೆ 11.23 ಲಕ್ಷ ಪರಿಹಾರ ನೀಡಲು ಆದೇಶಿಸಿದೆ. ಗ್ರಾಹಕರ ಹಕ್ಕುಗಳ ಸಮಿತಿಯು ಆಸ್ಪತ್ರೆಯು ಉದ್ಯೋಗಿಯ ನಿರ್ಲಕ್ಷ್ಯದ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ ಎಂದು ಹೇಳಿದೆ.

ಗುಜರಾತ್‌ನ ಖೇಡಾ ಜಿಲ್ಲೆಯ ವಂಘ್ರೋಲಿ ಹಳ್ಳಿಯ ನಿವಾಸಿ ದೇವೇಂದ್ರಭಾಯಿ ರಾವಲ್ 2011ರ ಮೇ ತಿಂಗಳಲ್ಲಿ ತೀವ್ರ ಬೆನ್ನು, ಹೊಟ್ಟೆ ನೋವು ಮತ್ತು ಮೂತ್ರ ವಿಸರ್ಜನೆ ಮಾಡಲು ತೊಂದರೆ ಅನುಭವಿಸುತ್ತಿದ್ದರು.

ಈ ವೇಳೆ ಅವರು ಕೆಎಂಜಿ ಜನರಲ್ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿದಾಗ ರಾವಲ್ ಎಡ ಮೂತ್ರಪಿಂಡದಲ್ಲಿ 15 ಎಂಎಂ ಕಲ್ಲು ಪತ್ತೆಯಾಗಿದೆ. ರಾವಲ್‌ಗೆ ಸೆಪ್ಟೆಂಬರ್ 3, 2011 ರಂದು ಶಸ್ತ್ರ ಚಿಕಿತ್ಸೆ ನಡೆಸಲಾಯಿತು.

ಶಸ್ತ್ರಚಿಕಿತ್ಸೆಯ ನಂತರ ವೈದ್ಯರು ಕಲ್ಲಿನ ಬದಲು ರೋಗಿಯ ಎಡ ಮೂತ್ರಪಿಂಡವನ್ನು ತೆಗೆಯಬೇಕೆಂದು ಮೃತರ ಕುಟುಂಬಕ್ಕೆ ತಿಳಿಸಿದರು ಎಂದು ವರದಿಯಾಗಿದೆ. ರೋಗಿಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವೈದ್ಯರು ಒತ್ತಾಯಿಸಿದರು.

ಶಸ್ತ್ರಚಿಕಿತ್ಸೆಯ ನಂತರದ ತಿಂಗಳುಗಳಲ್ಲಿ ಅವರು ಮೂತ್ರ ವಿಸರ್ಜನೆಯೊಂದಿಗೆ ಹೆಚ್ಚಿನ ಸಮಸ್ಯೆಗಳನ್ನು ಅನುಭವಿಸಿದ ಕಾರಣ, ದೇವೇಂದ್ರಭಾಯ್ ರಾವಲ್‌ರನ್ನು ಚಿಕಿತ್ಸೆಗಾಗಿ ನಾಡಿಯಾಡ್‌ನ ಕಿಡ್ನಿ ಆಸ್ಪತ್ರೆಗೆ ದಾಖಲಿಸಲಾಯಿತು.

ನಂತರ ಅವರನ್ನು ಅಹಮದಾಬಾದ್‌ನ ಇನ್ಸ್ಟಿಟ್ಯೂಟ್ ಆಫ್ ಕಿಡ್ನಿ ಡಿಸೀಸ್ ಅಂಡ್ ರಿಸರ್ಚ್ ಸೆಂಟರ್ (ಐಕೆಡಿಆರ್‌ಸಿ) ಗೆ ದಾಖಲಿಸಲಾಯಿತು. ಅಲ್ಲಿ ಅವರು ಜನವರಿ 8, 2012 ರಂದು ಮೂತ್ರಪಿಂಡದ ತೊಂದರೆಗೆ ಒಳಗಾಗಿರುವ ಬಗ್ಗೆ ಗೊತ್ತಾಗಿದೆ.

ವೈದ್ಯನು ತನ್ನದೇ ಆದ ಕಮಿಷನ್ ಮತ್ತು ಲೋಪಗಳಿಗೆ ಮಾತ್ರವಲ್ಲದೆ ತನ್ನ ಉದ್ಯೋಗಿಗಳ ನಿರ್ಲಕ್ಷ್ಯಕ್ಕೂ ಜವಾಬ್ದಾರನಾಗಿರುತ್ತಾನೆ. ಈ ಕಾಯ್ದೆಯು ಉದ್ಯೋಗದ ಕೋರ್ಸ್ ಮತ್ತು ವ್ಯಾಪ್ತಿಯೊಳಗೆ ನಡೆದಿರುವುದು ವಿಷಾದನೀಯ ಎಂದು ಗುಜರಾತ್ ರಾಜ್ಯ ಗ್ರಾಹಕ ವಿವಾದ ಪರಿಹಾರ ಆಯೋಗ ಹೇಳಿದೆ.

ಆಯೋಗವು ತನ್ನ ಆದೇಶದಲ್ಲಿ ಬಾಲಾಸಿನೋರ್‌ನ ಕೆಎಂಜಿ ಜನರಲ್ ಆಸ್ಪತ್ರೆಗೆ 2012 ರಿಂದ ಮೃತನ ಸಂಬಂಧಿಕರಿಗೆ ಶೇಕಡಾ 7.5 ಬಡ್ಡಿಯೊಂದಿಗೆ ಪರಿಹಾರವನ್ನು ಪಾವತಿಸುವಂತೆ ಆದೇಶಿಸಿದೆ.

ವೈದ್ಯಲೋಕದಲ್ಲಿ ಕೂಡ ಸಾಕಷ್ಟು ಎಡವಟ್ಟುಗಳು ನಡೆಯುತ್ತಲೇ ಇರುತ್ತವೆ. ಆದರೆ, ವೈದ್ಯರು ತಪ್ಪು ಮಾಡಿದರೆ ಕೆಲವೊಮ್ಮೆ ಪ್ರಾಣವೇ ಹೋಗುವ ಸಾಧ್ಯತೆಗಳೂ ಇರುತ್ತವೆ. ಹಾಗಂತ ವೈದ್ಯರ ಮಾಡಿದ ತಪ್ಪುಗಳನ್ನು ಮುಚ್ಚುವ ಪ್ರಯತ್ನ ನಡೆಯುತ್ತಲೇ ಇವೆ. ಏನೂ ಅರಿಯದ ಅಮಾಯಕ ಜನರು ಕುಟುಂಬಸ್ಥರನ್ನು ಕಳೆದುಕೊಳ್ಳುತ್ತಿದ್ದಾರೆ. ಇಂಥಹ ಪ್ರಕರಣಗಳು ಅದೆಷ್ಟೋ ಬೆಳಕಿಗೆ ಬಂದಿವೆ. ಪ್ರಕರಣ ಬೆಳಕಿಗೆ ಬಂದಾಗ ಎಚ್ಚತ್ತುಕೊಳ್ಳುವ ಬದಲು ರೋಗಿಗಳನ್ನ ನಿರ್ಲಕ್ಷಿಸದೇ ಚಿಕಿತ್ಸೆ ನೀಡುವುದು ಉತ್ತಮ. ಈ ಬಗ್ಗೆ ಆರೋಗ್ಯ ಇಲಾಖೆ ಆಗಾಗ ಅಧಿಕಾರಿಗಳನ್ನು ಎಚ್ಚರಿಸುತ್ತಿರುವುದರೊಂದಿಗೆ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುವುದು ಮುಖ್ಯವಾಗಿದೆ.

English summary
A hospital in Gujarat's Mahisagar district has been ordered to pay a compensation of Rs 11 lakh to the family of a man who died after doctor removed his left kidney.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X