ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮಗೆ 'ಗ್ಯಾಸ್ ಟ್ರಬಲ್' ಇದೆಯೇ? ನಿಮಗಾಗಿ ಒಂದು ಸ್ಪರ್ಧೆ ಇದೆ ನೋಡಿ

|
Google Oneindia Kannada News

ಅಹಮದಾಬಾದ್, ಸೆಪ್ಟೆಂಬರ್ 16: ಗುಜರಾತ್‌ನ ಸೂರತ್‌ನಲ್ಲಿರುವ ರೆಸ್ಟೋರೆಂಟ್ ಒಂದು ವಿಶಿಷ್ಟ ಸ್ಪರ್ಧೆ ಏರ್ಪಡಿಸಿದೆ. ಇದು ಅಂತಿಂಥ ಸ್ಪರ್ಧೆಯಲ್ಲ. ನಿಮ್ಮ 'ಶಕ್ತಿ' ಸಾಮರ್ಥ್ಯಕ್ಕೆ ದೊಡ್ಡ ಸವಾಲು ಇಲ್ಲಿದೆ.

ಅಂದಹಾಗೆ, ಈ ಸ್ಪರ್ಧೆ ಯಾವುದು ಗೊತ್ತೇ? 'ಹೂಸು ಬಿಡುವ ಸ್ಪರ್ಧೆ'. ಕೇಳಲು ವಿಚಿತ್ರ ಹಾಗೂ ಮುಜುಗರ ಉಂಟುಮಾಡಬಹುದು. ಆದರೆ ಜನರಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಹುಮ್ಮಸ್ಸು ಮೂಡಿದೆ. ಸೆ. 22ರಂದು ಈ ಸ್ಪರ್ಧೆ ನಡೆಯಲಿದ್ದು, ಸೋಮವಾರದ ವೇಳೆಗಾಗಲೇ 200ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ.

ಮೈಸೂರಲ್ಲಿ ಮಹಿಳೆಯರಿಗೆ ಇಡ್ಲಿ ತಿನ್ನುವ ಸ್ಪರ್ಧೆ: ಗೆದ್ದೋರು ತಿಂದದ್ದೆಷ್ಟು?ಮೈಸೂರಲ್ಲಿ ಮಹಿಳೆಯರಿಗೆ ಇಡ್ಲಿ ತಿನ್ನುವ ಸ್ಪರ್ಧೆ: ಗೆದ್ದೋರು ತಿಂದದ್ದೆಷ್ಟು?

ತರಹೇವಾರ ಹೂಸುಗಳನ್ನು ಬಿಡುವ ಮಂದಿ ನಮ್ಮ ನಡುವೆ ಇದ್ದಾರೆ. ನಮ್ಮ ಒತ್ತಡದ ಬದುಕು, ಅನಾರೋಗ್ಯಕರ ಜೀವನ ಶೈಲಿ ಹೆಚ್ಚಿನವರಲ್ಲಿ ಗ್ಯಾಸ್ ಟ್ರಬಲ್ ಉಂಟುಮಾಡುತ್ತದೆ. ಅದರ ಪರಿಣಾಮ ಅವರ ದೇಹದಲ್ಲಿ ಉಂಟಾಗುವ ವಾಯು ಪದೇ ಪದೇ ಹೊರಹೋಗುತ್ತದೆ. ಸಾರ್ವಜನಿಕವಾಗಿ ವಾಯು ಪ್ರಯೋಗ ಮಾಡಿದರೆ ಮೂಗುಮುಚ್ಚಿಕೊಳ್ಳುವ ಸರದಿ ಜನರದ್ದು. ಕೆಲವರು ಮೌನವಾಗಿಯೇ ತಮ್ಮ ವಾಯು ಶಕ್ತಿ ಪ್ರದರ್ಶಿಸುತ್ತಾರೆ. ಆದರೆ ಈ ಸ್ಪರ್ಧೆಯಲ್ಲಿ ಶಬ್ಧರಹಿತ ಹೂಸು ಮತ್ತು ದುರ್ವಾಸನೆಯನ್ನು ಪರಿಗಣಿಸುವುದಿಲ್ಲ. ಹೀಗಾಗಿ ಈ ಸ್ಪರ್ಧೆಯಲ್ಲಿ ಭಾಗವಹಿಸಲು ವಿಶೇಷ ಪ್ರತಿಭೆ ಅಗತ್ಯ.

ಮೂರು ಬಗೆಯ ಸ್ಪರ್ಧೆ

ಮೂರು ಬಗೆಯ ಸ್ಪರ್ಧೆ

ಈ ಹೂಸು ಬಿಡುವ ಸ್ಪರ್ಧೆ ಸುಮ್ಮನೆ ಹೂಸು ಬಿಡುವುದಕ್ಕೆ ಸೀಮಿತವಾಗಿಲ್ಲ. ಇಲ್ಲಿ ಮೂರು ವಿಭಿನ್ನ ವಿಭಾಗಗಳಿವೆ. ಈ ಮೂರರಲ್ಲಿ ಗೆದ್ದವರು ಟ್ರೋಫಿಗಳನ್ನು ಗೆಲ್ಲುತ್ತಾರೆ. ಅತ್ಯಂತ ದೀರ್ಘಾವಧಿ, ಅತಿ ಸದ್ದು ಮಾಡುವ ಮತ್ತು ಹೆಚ್ಚು ಸಂಗೀತಮಯ ಹೂಸು ಎಂದು ಸ್ಪರ್ಧೆಗಳನ್ನು ವರ್ಗೀಕರಿಸಲಾಗಿದೆ.

ರಾಯಚೂರು: ಭಾರ ಎತ್ತುವ ಸ್ಪರ್ಧೆಯಲ್ಲಿ ಬಂಪರ್ ಬಹುಮಾನ ಪಡೆದ ಹಮಾಲರುರಾಯಚೂರು: ಭಾರ ಎತ್ತುವ ಸ್ಪರ್ಧೆಯಲ್ಲಿ ಬಂಪರ್ ಬಹುಮಾನ ಪಡೆದ ಹಮಾಲರು

60 ಸೆಕೆಂಡುಗಳ ಸಮಯ

60 ಸೆಕೆಂಡುಗಳ ಸಮಯ

ಪ್ರತಿ ಸ್ಪರ್ಧಿಗೂ ತೀರ್ಪುಗಾರರ ಮುಂದೆ ತಮ್ಮ 'ಪ್ರತಿಭೆ'ಯನ್ನು ಪ್ರದರ್ಶಿಸಲು 60 ಸೆಕೆಂಡುಗಳ ಸಮಯ ನೀಡಲಾಗುತ್ತದೆ. ತೀರ್ಪುಗಾರರಲ್ಲಿ ಒಬ್ಬರು ವೈದ್ಯರು ಇರುತ್ತಾರೆ. ಈ ಸ್ಪರ್ಧೆಯ ಉದ್ದೇಶ ಈ ಮೂರು ವಿಭಾಗಗಳಲ್ಲಿ ಭಾರತದ ಅತ್ಯಂತ ಶ್ರೇಷ್ಠ 'ಹೂಸುಗಾರ'ರನ್ನು ಗುರುತಿಸುವುದಾಗಿದೆ ಎಂದು ಆಯೋಜಕ ಯತಿನ್ ಸಂಗೋಯ್ ತಿಳಿಸಿದ್ದಾರೆ.

ಪ್ರಾಯೋಜಕರ ಹುಡುಕಾಟ

ಪ್ರಾಯೋಜಕರ ಹುಡುಕಾಟ

'ಈ ಬಗೆಯ ಸ್ಪರ್ಧೆ ವಿವಿಧ ದೇಶಗಳಲ್ಲಿ ನಡೆಯುತ್ತಿವೆ. ಭಾರತದಲ್ಲಿ ಈ ರೀತಿಯ ಸ್ಪರ್ಧೆ ನಡೆಯುತ್ತಿರುವುದು ಇದೇ ಮೊದಲು. ಕೋಲ್ಕತಾ, ದೆಹಲಿ ಮತ್ತು ಜೈಪುರದಂತಹ ಸ್ಥಳಗಳಲ್ಲಿ ನೋಂದಣಿ ಮಾಡಲಾಗುತ್ತಿದೆ' ಎಂದು ಅವರು ಹೇಳಿದ್ದಾರೆ. ಕಾರ್ಯಕ್ರಮಕ್ಕಾಗಿ ಅವರು ಇನ್ನೂ ಪ್ರಾಯೋಜಕರನ್ನು ಹುಡುಕುತ್ತಿದ್ದಾರೆ. ಒಂದು ವೇಳೆ ಪ್ರಾಯೋಜಕರು ಸಿಕ್ಕರೆ ಟ್ರೋಫಿಯ ಜತೆಗೆ ನಗದು ಬಹುಮಾನ ನೀಡುವ ಉದ್ದೇಶ ಅವರದು.

ಆಹಾರದ ಬಗ್ಗೆ ಸಲಹೆ

ಆಹಾರದ ಬಗ್ಗೆ ಸಲಹೆ

ಈ ಸ್ಪರ್ಧೆ ತಮಾಷೆಯಾಗಿ ಕಂಡರೂ ಸಂಗೋಯ್ ಮತ್ತು ಅವರ ಸ್ನೇಹಿತ ಮುಲ್ ಸಂಘ್ವಿ ಗಂಭೀರವಾಗಿ ಪರಿಗಣಿಸಿದ್ದಾರೆ. ಅದಕ್ಕಾಗಿ ಫೇಸ್‌ಬುಕ್‌ ಪುಟವನ್ನೂ ತೆರೆದಿದ್ದಾರೆ. ಅದರಲ್ಲಿ ಸ್ಪರ್ಧಿಗಳು ಉತ್ತಮವಾಗಿ ಹೂಸು ಬಿಡಲು ಏನನ್ನು ತಿನ್ನಬೇಕು, ಹೇಗೆ ತಿನ್ನಬೇಕು ಎಂಬ ಸಲಹೆಗಳನ್ನೂ ನೀಡುತ್ತಿದ್ದಾರೆ.

English summary
A restaurant in Gujarat's Surat has organized India's first 'Fart Competition' on Sep 22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X