ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳಾ ನೌಕರರಿಗೆ ವಾರ್ಷಿಕ 12 ದಿನಗಳ ಋತುಚಕ್ರ ರಜೆ ಘೋಷಿಸಿದ ಕಂಪನಿ

|
Google Oneindia Kannada News

ಸೂರತ್, ಆಗಸ್ಟ್ 14: ಮಹಿಳಾ ನೌಕರರ ಹಿತದೃಷ್ಟಿಯಿಂದ ವಾರ್ಷಿಕ 12 ದಿನ ಋತುಚಕ್ರ ರಜೆ(period leave) ಅನ್ನು ನೀಡಲು ಸೂರತ್ ಮೂಲದ ಡಿಜಿಟಲ್ ಮಾರುಕಟ್ಟೆ ಕಂಪನಿಯೊಂದು ನಿರ್ಧರಿಸಿದೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಭೌಟಿಯಾ, ಹೆಣ್ಣು ಮಕ್ಕಳ ಋತುಚಕ್ರ ಬಗ್ಗೆ ಭಾರತೀಯ ಸಮಾಜದಲ್ಲಿ ಇನ್ನು ಕೂಡ ಮೂಢನಂಬಿಕೆ, ಆರೋಪವಿದೆ.

ಕೇರಳ ಶಾಲೆಯಲ್ಲಿ 105 ವರ್ಷಗಳ ಹಿಂದೆಯೇ ಇತ್ತು ಋತುಚಕ್ರದ ರಜೆಕೇರಳ ಶಾಲೆಯಲ್ಲಿ 105 ವರ್ಷಗಳ ಹಿಂದೆಯೇ ಇತ್ತು ಋತುಚಕ್ರದ ರಜೆ

ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳೆಯರು ವಾಶ್ ರೂಂಗೆ ಹೋಗುವಾಗ ಬ್ಯಾಗ್, ಪರ್ಸ್, ಪ್ಲಾಸ್ಟಿಕ್ ಬ್ಯಾಗ್ ತೆಗೆದುಕೊಂಡು ಹೋಗುವ ಪರಿಸ್ಥಿತಿಯಿದೆ. ಮಹಿಳೆಯರು ಮತ್ತು ಪುರುಷರ ಮಧ್ಯೆ ನೈಸರ್ಗಿಕ ಬದಲಾವಣೆಯನ್ನು ಅರ್ಥಮಾಡಿಸಲು ಭಾರತದಲ್ಲಿ ಸಣ್ಣಪುಟ್ಟ ಉದ್ದಿಮೆಗಳು, ಕಂಪೆನಿಗಳು ಈ ರೀತಿ ಹೆಣ್ಣುಮಕ್ಕಳಿಗೆ ರಜೆ ನೀಡಬೇಕೆಂದು ನಾವು ಸಂದೇಶ ಸಾರಲು ಈ ಕ್ರಮ ಕೈಗೊಂಡಿದ್ದೇವೆ.

Indian Firm Rolls Out 12 Days Period Leave To Woman Staffers

ಋತುಚಕ್ರ ಸಮಯದಲ್ಲಿ ಮಹಿಳೆಯರು ಕಚೇರಿಗೆ ಬಂದು ಕಷ್ಟಪಡುವ ಸಮಸ್ಯೆ ಇದರಿಂದ ತಪ್ಪುತ್ತದೆ ಎಂದು ಹೇಳಿದ್ದಾರೆ.ತಕ್ಷಣದಿಂದಲೇ ಜಾರಿಗೆ ಬರುವಂತೆ ಮಹಿಳಾ ನೌಕರರಿಗೆ ವರ್ಷಕ್ಕೆ 12 ಋತುಚಕ್ರ ರಜೆಯನ್ನು ನೀಡಲಾಗುವುದು ಎಂದು ಐವಿಪನನ್ ಸ್ಥಾಪಕ ಭೌಟಿಕ್ ಸೇಠ್ ಮಾಹಿತಿ ನೀಡಿದ್ದಾರೆ.

ಈ ಮೂಲಕ, ಫುಡ್ ಡೆಲಿವರಿ ಕಂಪೆನಿಯಾದ ಝೊಮ್ಯಾಟೊ ಕ್ರಮವನ್ನೇ ಅನುಸರಿಸಿದಂತಾಗಿದೆ.ಭೌಟಿಕ ಸೇಠ್ ಅವರು ಕಂಪೆನಿಯನ್ನು 2014ರಲ್ಲಿ ಆರಂಭಿಸಿದ್ದರು. ಒಟ್ಟು 9 ಮಂದಿ ನೌಕರರಿದ್ದಾರೆ, ಅವರಲ್ಲಿ 8 ಮಂದಿ ಮಹಿಳಾ ನೌಕರಿದ್ದಾರೆ. ಅವರ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

English summary
In a welcome move, a Surat-based Indian digital marketing company said it would give 12 days of period leave per year to the woman employees working in the firm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X