ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fake: ಗುಜರಾತ್‌ನಲ್ಲಿ ಲಾಕ್‌ಡೌನ್ ನಿಯಂತ್ರಿಸಲು ಭಾರತೀಯ ಸೇನೆ ಪ್ರವೇಶ?

|
Google Oneindia Kannada News

ಅಹಮದಾಬಾದ್, ಏಪ್ರಿಲ್ 15: ಗುಜರಾತ್‌ನಲ್ಲಿ ಲಾಕ್‌ಡೌನ್‌ ನಿಯಂತ್ರಿಸಲು ಭಾರತೀಯ ಸೈನ್ಯ ಕಾರ್ಯನಿರ್ವಹಿಸಲಿದೆ ಎಂಬ ಸುದ್ದಿ ವರದಿಯಾಗಿತ್ತು. ಮೇ 3ರ ತನಕ ಲಾಕ್‌ಡೌನ್ ವಿಸ್ತರಣೆಯಾಗಿರುವ ಕಾರಣ, ಪರಿಸ್ಥಿತಿ ನಿಯಂತ್ರಿಸಲು ಸೇನೆಗೆ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ.

ರಜೆಯಲ್ಲಿದ್ದ ಸಿಬ್ಬಂದಿ ಮತ್ತು ನಿವೃತ್ತಿಯ ಸನಿಹದಲ್ಲಿರುವ ಸೈನಿಕರನ್ನು ಲಾಕ್‌ಡೌನ್‌ ನಿಯಂತ್ರಿಸುವ ಕಾರ್ಯಕ್ಕೆ ನೇಮಕ ಮಾಡಲಾಗಿದೆ ಎಂಬ ಸುದ್ದಿಯೂ ಇದೆ. ಈ ವಿಷಯದ ಬಗ್ಗೆ ಭಾರತೀಯ ಸೈನ್ಯ ಮಂಗಳವಾರ ಬೆಳಿಗ್ಗೆ ಸ್ಪಷ್ಟನೆ ನೀಡಿದೆ.

ಕೊರೊನಾ ಬಗ್ಗೆ ಸುಳ್ಳುಸುದ್ದಿ ಹಬ್ಬಿಸಿದರೆ 1 ವರ್ಷ ಜೈಲು ಶಿಕ್ಷೆ ಗ್ಯಾರಂಟಿಕೊರೊನಾ ಬಗ್ಗೆ ಸುಳ್ಳುಸುದ್ದಿ ಹಬ್ಬಿಸಿದರೆ 1 ವರ್ಷ ಜೈಲು ಶಿಕ್ಷೆ ಗ್ಯಾರಂಟಿ

ಈ ಸುದ್ದಿ ಸತ್ಯವಲ್ಲ. ಗುಜರಾತ್‌ನಲ್ಲಿ ಲಾಕ್‌ಡೌನ್‌ ನಿಭಾಯಿಸಲು ಸೇನೆಗೆ ಆಹ್ವಾನವೂ ಬಂದಿಲ್ಲ. ನೇಮಕವೂ ಮಾಡಿಲ್ಲ. ಇಂತಹ ಸುದ್ದಿಗಳನ್ನು ವರದಿ ಮಾಡುವ ಮುನ್ನ ಅಧಿಕೃತ ಕಚೇರಿಗಳಿಂದ ಮಾಹಿತಿ ಪಡೆಯುವುದು ಉತ್ತಮ ಎಂದು ತಿಳಿಸಿದೆ.

Indian Army Has Not Been Called Into Gujarat

ಈ ಹಿಂದೆ ಕೂಡ ಇಂತಹ ಸುದ್ದಿಗಳು ಸದ್ದು ಮಾಡಿದ್ದವು. ಲಾಕ್‌ಡೌನ್‌ ನಿಯಂತ್ರಿಸಲು ಆರ್ಮಿ ಬರಲಿದ್ದಾರೆ ಎಂದು ಬೇರೆ ಬೇರೆ ರಾಜ್ಯಗಳಲ್ಲಿ ವರದಿ ಆಗಿತ್ತು. ಆದರೆ, ಇದುವರೆಗೂ ಯಾವ ರಾಜ್ಯದಲ್ಲೂ ಲಾಕ್‌ಡೌನ್‌ ಕುರಿತು ಸೇನೆ ಕಾರ್ಯ ನಿರ್ವಹಿಸುತ್ತಿಲ್ಲ.

Fake News: ಒಂದೊಂದು ಧರ್ಮದವರಿಗೆ ಒಂದೊಂದು ಐಸೋಲೇಟೆಡ್ ವಾರ್ಡ್!Fake News: ಒಂದೊಂದು ಧರ್ಮದವರಿಗೆ ಒಂದೊಂದು ಐಸೋಲೇಟೆಡ್ ವಾರ್ಡ್!

ಸದ್ಯ ರಾಜ್ಯದಲ್ಲಿ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಲಾಕ್‌ಡೌನ್‌ ನಿಯಂತ್ರಿಸಿದೆ. ಲಾ ಅಂಡ್ ಆರ್ಡರ್ ಸರಿ ಇರುವ ಈ ಸಮಯದಲ್ಲಿ ಸೇನೆ ಮೊರೆ ಹೋಗುವುದು ಸಾಧ್ಯವಿಲ್ಲ ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿದೆ.

English summary
Coronavirus Lockdown: Indian army has not been called into gujarat said ADGP of state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X