ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಹಮದಾಬಾದ್‌: ಬ್ಲ್ಯಾಕ್‌ ಫಂಗಸ್‌ ಸೋಂಕು ಗಣನೀಯ ಹೆಚ್ಚಳ

|
Google Oneindia Kannada News

ಬ್ಲ್ಯಾಕ್‌ ಫಂಗಸ್‌ ಸೋಂಕು ಹೆಚ್ಚಳ - ಅಹಮದಾಬಾದ್‌ನಲ್ಲಿ 481 ರೋಗಿಗಳು ಆಸ್ಪತ್ರೆಗೆ ದಾಖಲು

ಅಹಮದಾಬಾದ್‌, ಮೇ 20: ದೇಶದಲ್ಲಿ ಈಗ ಬ್ಲ್ಯಾಕ್‌ ಫಂಗಸ್‌ ಸೋಂಕು ಪ್ರಕರಣಗಳು ಕೂಡಾ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಗುಜರಾತ್‌ನ ಅಹಮದಾಬಾದ್‌ನಲ್ಲೇ 481 ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.

 ಬ್ಲ್ಯಾಕ್‌ ಫಂಗಸ್ ನಂತರ ಇದೀಗ ಅಪಾಯಕಾರಿ ವೈಟ್ ಫಂಗಸ್ ಪತ್ತೆ; ಯಾರು ಎಚ್ಚರದಿಂದಿರಬೇಕು? ಬ್ಲ್ಯಾಕ್‌ ಫಂಗಸ್ ನಂತರ ಇದೀಗ ಅಪಾಯಕಾರಿ ವೈಟ್ ಫಂಗಸ್ ಪತ್ತೆ; ಯಾರು ಎಚ್ಚರದಿಂದಿರಬೇಕು?

ದೇಶದಲ್ಲಿ ಈಗಾಗಲೇ ಕೊರೊನಾ ಸೋಂಕು ಆರೋಗ್ಯ ವಲಯ ಮಾತ್ರವಲ್ಲದೇ ಎಲ್ಲಾ ವಲಯಗಳಲ್ಲೂ ಭಾರೀ ಪ್ರಮಾಣದ ಪರಿಣಾಮ ಉಂಟು ಮಾಡಿದೆ. ಈ ನಡುವೆ ಈಗ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಬ್ಲ್ಯಾಕ್‌ ಫಂಗಸ್‌ ಸೋಂಕು ಪ್ರಕರಣಗಳು ದೃಢಪಡುತ್ತಿರುವುದು ಕೂಡಾ ಅಧಿಕವಾಗುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರವು ಈ ಸೋಂಕನ್ನು ಸಾಂಕ್ರಾಮಿಕ ಎಂದು ಘೋಷಿಸಲು ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

Increase in Black Fungal Infection - 481 Patients hospitalized in Ahmedabad

4 ರಾಜ್ಯಗಳಲ್ಲಿ ಈ ಸೋಂಕು ಹೆಚ್ಚಳವಾಗುತ್ತಿದ್ದು, ಮಹಾರಾಷ್ಟ್ರದಲ್ಲಿ ಸುಮಾರು 90 ಜನರು ಈ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ಸೋಂಕು ಪ್ರಮಾಣ ಉಲ್ಬಣವಾಗಿದ್ದು 481 ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ರೋಗಿಗಳ ಸೇವೆಗೆ 24x7 ಹಾಜರಿರುವಂತೆ ವೈದ್ಯರಿಗೆ ಆದೇಶ ಹೊರಡಿಸಲಾಗಿದೆ.

ಇನ್ನು ಈಗಾಗಲೇ 132 ರೋಗಿಗಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಚಿಕಿತ್ಸೆ ಪಡೆದ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಈ ನಡುವೆ ಬ್ಲ್ಯಾಕ್ ಫಂಗಸ್ ಸೋಂಕಿಗೆ ಬಳಸಲಾಗುವ ಆಂಟಿ ಫಂಗಲ್ ಔಷಧಿ ಆಂಫೊಟೆರಿಸಿನ್-ಬಿ ಯ ಕೊರತೆಯು ಗುಜರಾತ್‌ನಲ್ಲಿ ಆತಂಕಕ್ಕೆ ಕಾರಣವಾಗಿದೆ.

ಈ ಬ್ಲ್ಯಾಕ್‌ ಫಂಗಸ್‌ನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಲು ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿರುವ ಕೇಂದ್ರ ಸರ್ಕಾರವು, ಈ ಬಗ್ಗೆ ಎಲ್ಲಾ ರಾಜ್ಯ, ಕೇಂದ್ರಾಡಳಿತ ಪ್ರದೇಶಕ್ಕೆ ಪತ್ರ ಕಳುಹಿಸಿದೆ. ಈ ಪತ್ರದಲ್ಲಿ ಬ್ಲ್ಯಾಕ್‌ ಫಂಗಸ್‌ ಅಥವಾ ನ್ಯೂಕೋರ್ಮಿಕೋಸಿಸ್‌ ರೋಗವನ್ನು ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಸೂಚಿಸಬಹುದಾದ ಕಾಯಿಲೆ ಎಂದು ತಿಳಿಸಲಾಗಿದೆ.

(ಒನ್ಇಂಡಿಯಾ ಸುದ್ದಿ)

English summary
The number of Black Fungus cases in Ahmedabad has increased significantly and 481 patients have been hospitalized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X