ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಈ ವೇಗದಲ್ಲಿ ಎಲ್ಲಾ ಜನರಿಗೆ ಲಸಿಕೆ ಹಾಕಲು 5 ವರ್ಷ ಬೇಕು'- ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

|
Google Oneindia Kannada News

ಅಹಮದಾಬಾದ್‌, ಮೇ 26: ಗುಜರಾತ್ ಹೈಕೋರ್ಟ್ ಬುಧವಾರ ಗುಜರಾತ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಜನರಿಗೆ ಕೊರೊನಾ ಲಸಿಕೆ ಹಾಕಿಸಲು ಎಷ್ಟು ಸಮಯದ ಯೋಜನೆಯನ್ನು ಅಂದಾಜಿಸಿದ್ದೀರಿ ಎಂದು ಸರ್ಕಾರವನ್ನು ಪ್ರಶ್ನಿಸಿದ ಹೈಕೋರ್ಟ್, "ಈ ವೇಗದಲ್ಲಿ ಎಲ್ಲಾ ಜನರಿಗೆ ಲಸಿಕೆ ಹಾಕಲು 5 ವರ್ಷ ಬೇಕಾಗುತ್ತದೆ" ಎಂದು ಹೇಳಿದೆ.

ಕೋವಿಡ್‌ ನಿರ್ವಹಣೆಯ ಸಂದರ್ಭದ ಉದ್ಭವಿಸುವ ಸಮಸ್ಯೆಗಳ ಬಗ್ಗೆ ಸಲ್ಲಿಕೆಯಾಗಿದ್ದ ಸು ಮೋಟೋ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ ತ್ರಿವೇದಿ ಮತ್ತು ಭಾರ್ಗವ್ ಡಿರನ್ನು ಒಳಗೊಂಡ ದ್ವಿ ಸದಸ್ಯ ನ್ಯಾಯಪೀಠವು, ಸರ್ಕಾರ ಕೊರೊನಾ ಅಭಿಯಾನದ ಅವಧಿಯನ್ನು ಪ್ರಶ್ನಿಸಿದೆ.

ಗುಜರಾತ್ ಹೈಕೋರ್ಟ್ ಸ್ಥಾಪನೆ ಆಗಿ 60 ವರ್ಷ-ಅಂಚೆಚೀಟಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

"ಮೇ ತಿಂಗಳಲ್ಲಿ ರಾಜ್ಯಕ್ಕೆ 16 ಲಕ್ಷ ಲಸಿಕೆ ದೊರೆತಿದೆ. ಜೂನ್‌ನಲ್ಲಿ 10.7 ಲಕ್ಷ ಲಸಿಕೆ ದೊರೆಯಲಿದೆ" ಎಂದು ಈ ಸಂದರ್ಭ ರಾಜ್ಯ ಸರ್ಕಾರದ ಪರ ವಕೀಲ ಕಮಲ್ ತ್ರಿವೇದಿ ನ್ಯಾಯಾಲಯಕ್ಕೆ ತಿಳಿಸಿದ್ದು ನ್ಯಾಯಪೀಠವು, "ಇದರರ್ಥ ನೀವು ಜನರಿಗೆ ಲಸಿಕೆ ಹಾಕಲು 5 ವರ್ಷಗಳ ಯೋಜನೆ ಹೊಂದಿದ್ದೀರಿ ಎಂದಾಯಿತು" ಎಂದು ಟೀಕಿಸಿದೆ.

In this pace it will take 5 years to vaccinate people: Gujarat High Court to State govt

ಈ ಸಂದರ್ಭದಲ್ಲಿ ಸರ್ಕಾರ ಪರ ವಕೀಲ, "ಈ ಸಮಸ್ಯೆ ದೇಶದಲ್ಲಿ ಲಸಿಕೆ ಉತ್ಪಾದನೆಯ ವಿಚಾರದಲ್ಲಿ ಉಂಟಾಗಿದೆ. ಲಸಿಕೆ ತಯಾರಕರು ಉತ್ಪಾದಿಸುವ ಲಸಿಕೆಗಳಲ್ಲಿ 50 ಪ್ರತಿಶತಕ್ಕಿಂತ ಅಧಿಕ ಯಾವುದೇ ಒಂದು ರಾಜ್ಯಕ್ಕೆ ನೀಡಬಾರದು ಎಂದು ಭಾರತ ಸರ್ಕಾರ ಆದೇಶಿಸಿದೆ" ಎಂದು ಹೇಳಿದ್ದಾರೆ.

ಘಾಸಿಗೊಳಿಸುವ, ಊಹಿಸಲಾಧ್ಯ ಕಥೆಗಳು: ಕೋವಿಡ್ ಪರಿಸ್ಥಿತಿ ಬಗ್ಗೆ ಹೈಕೋರ್ಟ್ ಕಳವಳಘಾಸಿಗೊಳಿಸುವ, ಊಹಿಸಲಾಧ್ಯ ಕಥೆಗಳು: ಕೋವಿಡ್ ಪರಿಸ್ಥಿತಿ ಬಗ್ಗೆ ಹೈಕೋರ್ಟ್ ಕಳವಳ

"ಜಾಗತಿಕ ಟೆಂಡರ್‌ ಅನ್ನು ಸರ್ಕಾರ ಕರೆಯಲು ಏನು ಸಮಸ್ಯೆಯಿದೆ? ರಾಜ್ಯ ಏಕೆ ಪ್ರಯತ್ನ ಮಾಡಬಾರದು?" ಎಂದು ಈ ವೇಳೆ ನ್ಯಾಯಾಲಯವು ಕೇಳಿದೆ. ಹಾಗೆಯೇ "ಫೈಜರ್ ಮತ್ತು ಮಾಡೆರ್ನಾ ಲಸಿಕೆಯ ಬಗ್ಗೆ ನಾವು ಯಾವುದೇ ಮಾತನಾಡುವುದಿಲ್ಲ. ಅದು ಕೇಂದ್ರ ಸರ್ಕಾರ ಮಾಡಬೇಕಾದ ಕಾರ್ಯ" ಎಂದು ಕೂಡಾ ಇದೇ ಸಂದರ್ಭದಲ್ಲಿ ನ್ಯಾಯಪೀಠ ಹೇಳಿದೆ.

English summary
In this pace it will take 5 years to vaccinate people, Gujarat High Court slams State govt over covid vaccine drive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X