ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಡಿದು ಗಲಾಟೆ ಮಾಡಿ ಸಿಕ್ಕಿಬಿದ್ದರೆ ಊರಿಗೆಲ್ಲ ಮಟನ್ ಊಟ ಹಾಕಿಸೋ ಶಿಕ್ಷೆ

|
Google Oneindia Kannada News

Recommended Video

ಕುಡಿದು ಗಲಾಟೆ ಮಾಡಿದ್ರೆ ಊರಿಗೆಲ್ಲಾ ಮಟನ್ ಊಟ ಹಾಕಿಸಬೇಕು | Oneindia Kannada

ಅಹ್ಮದಾಬಾದ್ (ಗುಜರಾತ್), ಅಕ್ಟೋಬರ್ 18: ಮದ್ಯಪಾನ ಮಾಡಿ ಬಂದು ಗಲಾಟೆ ಮಾಡುವವರಿಗೆ ಗುಜರಾತ್ ನ ಈ ಹಳ್ಳಿಯಲ್ಲಿ ವಿಶಿಷ್ಟ ರೀತಿಯಲ್ಲಿ ದಂಡ ವಿಧಿಸಲಾಗುತ್ತದೆ. ಕುಡಿದು ಗಲಾಟೆ ಮಾಡುವವರು ಇಡೀ ಹಳ್ಳಿಯ ಜನರಿಗೆ ಮಟನ್ ಕರಿ ಹಾಗೂ ಬಟಿ (ಹುರಿದ ಗೋಧಿಯ ಮುದ್ದೆ) ಉಣಬಡಿಸಬೇಕು. ಹೀಗೆ ಮಾಡಿಸುವುದಕ್ಕೆ ಇಪ್ಪತ್ತರಿಂದ ಇಪ್ಪತ್ತೈದು ಸಾವಿರ ರುಪಾಯಿ ಖರ್ಚಾಗುತ್ತದೆ.

ಬನಸ್ಕಾಂತ ಜಿಲ್ಲೆಯ ಅಮಿರ್ ಗಡ್ ತಾಲೂಕಿನ ಬುಡಕಟ್ಟು ಖತಿಸಿತಾರ ಗ್ರಾಮದಲ್ಲಿ ಹೀಗೊಂದು ಕಟ್ಟಳೆ ಇದೆ. ಆರು ವರ್ಷಗಳ ಹಿಂದೆ ಈ ರೀತಿಯ ದಂಡವನ್ನು ಪರಿಚಯಿಸಲಾಯಿತು. ಕುಡಿದು ಬಂದು ಗಲಾಟೆ ಮಾಡುವವರು ಜಾಸ್ತಿ ಆಗಿದ್ದಾರೆ ಎಂದು ಹಳ್ಳಿಯ ಜನರಿಗೆ ಅನಿಸಿದೆ. ಜತೆಗೆ ಜಗಳ, ಕೊಲೆಗೂ ಮದ್ಯಪಾನ ಕಾರಣ ಎನಿಸಿದಾಗ ಮುಖಂಡರು ತೆಗೆದುಕೊಂಡ ತೀರ್ಮಾನ ಇದು.

ಹೆಣ್ಣು ಮಗು ಜನಿಸಿದರೆ 111 ಗಿಡ ನೆಡುವ ರಾಜಸ್ಥಾನದ ಪಿಪ್ಲಾಂತ್ರಿ ಗ್ರಾಮಹೆಣ್ಣು ಮಗು ಜನಿಸಿದರೆ 111 ಗಿಡ ನೆಡುವ ರಾಜಸ್ಥಾನದ ಪಿಪ್ಲಾಂತ್ರಿ ಗ್ರಾಮ

ಯಾರಾದರೂ ಮದ್ಯಪಾನ ಮಾಡಿ ಸಿಕ್ಕಿಬಿದ್ದರೆ ಎರಡು ಸಾವಿರ ದಂಡ. ಕುಡಿದು ಬಂದು, ಗಲಾಟೆ ಮಾಡಿದರೆ ಐದು ಸಾವಿರ ರುಪಾಯಿ ದಂಡ. ಜತೆಗೆ ಹಳ್ಳಿಯಲ್ಲಿರುವ ಏಳುನೂರಾ ಐವತ್ತರಿಂದ ಎಂಟು ನೂರು ಜನಕ್ಕೆ ಮಟನ್ ಕರಿ ಹಾಗೂ ಬಟಿ ಊಟ ಹಾಕಿಸಬೇಕು. ಇದಕ್ಕೆ ಕನಿಷ್ಠ ಇಪ್ಪತ್ತು ಸಾವಿರ ರುಪಾಯಿ ಖರ್ಚಾಗುತ್ತದೆ ಎನ್ನುತ್ತಾರೆ ಹಳ್ಳಿಯ ಸರಪಂಚ್ ಖಿಮ್ಜಿ ದುಂಗೈಸ.

If Caught Drunk? Throw A Mutton Party For Village: Unique Penalty In Gujarat

ಹೀಗೆ ನಿಯಮ ತಂದ ಆರಂಭದಲ್ಲಿ ಸರಾಸರಿ ಮೂವರಿಂದ ನಾಲ್ವರು ಸಿಕ್ಕಿ ಬೀಳುತ್ತಿದ್ದರು. ಕಳೆದ ವರ್ಷ ಒಬ್ಬೇ ಒಬ್ಬ ಸಿಕ್ಕಿಬಿದ್ದಿದ್ದಾನೆ. ಈ ವರ್ಷ ಇಲ್ಲಿಯವರೆಗೆ ಯಾರೂ ಸಿಕ್ಕಿ ಹಾಕಿಕೊಂಡಿಲ್ಲ ಎಂದು ಮಾಹಿತಿ ನೀಡುತ್ತಾರೆ ಹಳ್ಳಿಗರು. ಇನ್ನು ಹಳ್ಳಿಯಲ್ಲಿ ಕುಡಿದು, ಗಲಾಟೆ ಮಾಡಿದ ಕೊನೆಯ ವ್ಯಕ್ತಿಯ ಹೆಸರು ನಂಜಿ ದುಂಗೈಸ. ಆತ ಬೇರೆ ಹಳ್ಳಿಯಿಂದ ಬಂದವನು ಎನ್ನುತ್ತಾರೆ.

ಪಕ್ಕದ ಉಪಲ ಹಳ್ಳಿಯಲ್ಲಿ ಜನರು ಮದ್ಯ ಖರೀದಿಸುವುದನ್ನೇ ನಿಲ್ಲಿಸಿದ್ದಾರೆ. ಈ ಹಿಂದೆ ರಾಜಸ್ಥಾನದಿಂದ ಮದ್ಯ ತಂದು ಅತಿಥಿಗಳಿಗೆ ಔತಣ ನೀಡುತ್ತಿದ್ದರು.

English summary
If anybody caught drunk and ruckus, they have to throw mutton party in this village of Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X