ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಡದಿಯ ನಿತ್ಯಾನಂದ ದಕ್ಷಿಣ ಅಮೆರಿಕಕ್ಕೆ ಪರಾರಿಯಾಗಿದ್ದು ಹೇಗೆ?

|
Google Oneindia Kannada News

ಅಹ್ಮದಾಬಾದ್, ನವೆಂಬರ್ 25: ಬಿಡದಿಯ ನಿತ್ಯಾನಂದ ಸ್ವಾಮಿ, ದೇಶಬಿಟ್ಟು ದಕ್ಷಿಣ ಅಮೆರಿಕಕ್ಕೆ ಪರಾರಿಯಾಗಿದ್ದಾರೆ ಎಂದು ಗುಜರಾತ್ ಪೊಲೀಸರು ಅಧಿಕೃತವಾಗಿ ಹೇಳಿಕೆ ನೀಡಿದ ಮೇಲೆ ಅವರು ಅಮೆರಿಕಕ್ಕೆ ಹೋಗಿದ್ದು ಹೇಗೆ ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು.

ಪಾಸ್ ಪೋರ್ಟ್ ಎಕ್ಸ್ಪೈರ್ ಆದ ಮೇಲೂ ಆತ ಅದೇ ಪಾಸ್ ಪೋರ್ಟ್ ಬಳಸಿ ವಿದೇಶಕ್ಕೆ ಹೋದರೆ? ಅಥವಾ 2018 ಸೆಪ್ಟೆಂಬರ್ ನಲ್ಲಿ ಅಂದರೆ ಪಾಸ್ ಪೋರ್ಟ್ ಎಕ್ಸ್ಪೈರ್ ಆಗುವ ಮೊದಲೇ ಅವರು ಭಾರತದಿಂದ ಪರಾರಿಯಾಗಿದ್ದರೆ ಎಂಬ ಅನುಮಾನ ಈಗ ವ್ಯಕ್ತವಾಗಿದೆ.

ಅಪಹರಣ: ಸ್ವಾಮಿ ನಿತ್ಯಾನಂದ ವಿರುದ್ಧ ಎಫ್‌ಐಆರ್, ಶಿಷ್ಯೆಯರ ಬಂಧನಅಪಹರಣ: ಸ್ವಾಮಿ ನಿತ್ಯಾನಂದ ವಿರುದ್ಧ ಎಫ್‌ಐಆರ್, ಶಿಷ್ಯೆಯರ ಬಂಧನ

ಬಂಧನ ಭೀತಿ ಎದುರಿಸುತ್ತಿರುವ ಸ್ವಾಮಿ ನಿತ್ಯಾನಂದ ಅದರಿಂದ ಪಾರಾಗುವ ಸಲುವಾಗಿ ವಿದೇಶಕ್ಕೆ ಹಾರಿದ್ದು ಗುಜರಾತ್ ಪೊಲೀಸ್ ಅವರ ವಿರುದ್ಧ ಹದ್ದಿನ ಕಣ್ಣಿಟ್ಟಿದ್ದಾರೆ.

ಪಾಸ್ ಪೋರ್ಟ್ ರಿನ್ಯುವಲ್ ಆಗಿಲ್ಲ!

ಪಾಸ್ ಪೋರ್ಟ್ ರಿನ್ಯುವಲ್ ಆಗಿಲ್ಲ!

ವರ್ಷಗಳ ಮೊದಲೇ ಅವರು ಭಾರತದಿಂದ ಎಸ್ಕೇಪ್ ಆಗಿದ್ದಿರಬಹುದು ಎನ್ನಲಾಗಿದೆ. ನಿತ್ಯಾನಂದ ಅವರ ಪಾಸ್ ಪೋರ್ಟ್ ಅನ್ನು ಬೆಂಗಳೂರಿನಿಂದ 2008, ಅಕ್ಟೋಬರ್ 1 ರಂದು ನೀಡಲಾಗಿತ್ತು. ಅದರ ಕಾಲಾವಧಿ 2018 ರ ಸೆಪ್ಟೆಂಬರ್ 30 ಕ್ಕೆ ಮುಕ್ತಾಯವಾಗುತ್ತಿತ್ತು. ಅದಕ್ಕಾಗಿಯೇ ನಿತ್ಯಾನಂದ ತಮ್ಮ ಪಾಸ್ ಪೋರ್ಟ್ ರಿನ್ಯೂವಲ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರಿಗೆ NoC (No Objection Certificate) ಸಿಕ್ಕದ ಕಾರಣ ಪಾಸ್ ಪೋರ್ಟ್ ಅನ್ನು ರಿನ್ಯೂವಲ್ ಮಾಡಲಾಗಿರಲಿಲ್ಲ.

ಅನುಮತಿ ಸಿಕ್ಕಿದ್ದು ಹೇಗೆ?

ಅನುಮತಿ ಸಿಕ್ಕಿದ್ದು ಹೇಗೆ?

ಆದರೆ ಪಾಸ್ ಪೋರ್ಟ್ ಕಾಲಾವಧಿ ಮುಗಿಯುವುದುರೊಳಗೇ ಅವರು ಭಾರತದಿಂದ ಪರಾರಿಯಾಗಿರಬೇಕು ಎನ್ನಲಾಗುತ್ತಿದೆ. ಆದರೆ ಸಾಮಾನ್ಯವಾಗಿ ವಿದೇಶಗಳಿಗೆ ಹೋಗಬೇಕೆಂದರೆ ಪಾಸ್ ಪೋರ್ಟ್ ಅವಧಿ ಮುಗಿಯುವುದಕ್ಕೆ ಕನಿಷ್ಠ 3 ತಿಂಗಳಿಗಿಂತ ಹೆಚ್ಚು ಸಮಯವಿದ್ದರೆ ಮಾತ್ರವೇ ಅನುಮತಿ ನೀಡಲಾಗುತ್ತದೆ. ಆದರೆ ನಿತ್ಯಾನಂದ ಅವರ ಪ್ರಕರಣದಲ್ಲಿ ಅನುಮತಿ ಸಿಕ್ಕಿದ್ದು ಹೇಗೆ ಎಂಬುದು ಬಹುದೊಡ್ಡ ಪ್ರಶ್ನೆಯಾಗಿದೆ.

ಅತ್ಯಾಚಾರ ಪ್ರಕರಣ: ನಿತ್ಯಾನಂದ ಸ್ವಾಮಿ ವಿಚಾರಣೆ ನ.7ಕ್ಕೆ ಮುಂದೂಡಿಕೆಅತ್ಯಾಚಾರ ಪ್ರಕರಣ: ನಿತ್ಯಾನಂದ ಸ್ವಾಮಿ ವಿಚಾರಣೆ ನ.7ಕ್ಕೆ ಮುಂದೂಡಿಕೆ

ನಕಲಿ ಪಾಸ್ ಪೋರ್ಟ್

ನಕಲಿ ಪಾಸ್ ಪೋರ್ಟ್

ನಕಲಿ ಪಾಸ್ ಪೋರ್ಟ್ ಬಳಸಿ ನಿತ್ಯಾನಂದ ಅವರು ಪರಾರಿಯಾದರೆ ಎಂಬ ಅನುಮಾನ ಆರಂಭವಾಗಿದೆ. ಈ ಕುರಿತು ಗುಜರಾತಿನ ಅಹ್ಮದಾಬಾದ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬಂಧನದಿಂದ ಪಾರಾಗುವ ಸಲುವಾಗಿ ನಿತ್ಯಾನಂದ ಬೇರೆ ಬೇರೆ ದಾರಿ ಹುಡುಕುತ್ತಿದ್ದರು. ಆ ಕಾರಣದಿಂದಲೇ 2018 ರ ಕುಂಭಮೇಳದಲ್ಲೂ ಭಾಗಿಯಾಗಿದ್ದರು. ಈ ವಿಷಯ ಎಲ್ಲೆಡೆ ಹಬ್ಬಿದ್ದರಿಂದ ಉತ್ತರ ಪ್ರದೇಶ ಪೊಲೀಸರು ತನ್ನನ್ನು ಹುಡುಕುತ್ತಿದ್ದಾರೆ ಎಂಬುದು ತಿಳಿಯುತ್ತಿದ್ದಂತೆಯೇ ನಿತ್ಯಾನಂದ ಪರಾರಿಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ.

ಗುಜರಾತ್ ಪೊಲೀಸರಿಂದ ಬಂಧನಕ್ಕೆ ಬಲೆ

ಗುಜರಾತ್ ಪೊಲೀಸರಿಂದ ಬಂಧನಕ್ಕೆ ಬಲೆ

ಸ್ವಾಮಿ ನಿತ್ಯಾನಂದ ವಿರುದ್ಧ ಅಪಹರಣ ಮತ್ತು ಅಕ್ರಮ ಬಂಧನದ ದೂರಿನ ಅನ್ವಯ ಗುಜರಾತ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇದೀಗ ನಿತ್ಯಾನಂದ ಬಂಧನ ಬೀತಿ ಎದುರಿಸುತ್ತಿದ್ದು, ಗುಜರಾತ್ ಪೊಲೀಸ್ ಅವರ ಬಂಧನಕ್ಕೆ ಬಲೆಬೀಸಿದ್ದಾರೆ.

ಬಿಡದಿ ನಿತ್ಯಾನಂದಸ್ವಾಮಿ ದೇಶ ಬಿಟ್ಟು ಪರಾರಿ: ಪಾಸ್‌ಪೋರ್ಟ್ ಯಾರದ್ದು?ಬಿಡದಿ ನಿತ್ಯಾನಂದಸ್ವಾಮಿ ದೇಶ ಬಿಟ್ಟು ಪರಾರಿ: ಪಾಸ್‌ಪೋರ್ಟ್ ಯಾರದ್ದು?

English summary
How Bidadi's Nithyananda Escaped To South America With His Expired Passport?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X