ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸ್ತೆ ಬದಿಯೇ ದೀಪ ಬೆಳಗಿದ ಮನೆ ಇಲ್ಲದ ಬಡವರು

|
Google Oneindia Kannada News

ಗಾಂಧಿನಗರ, ಏಪ್ರಿಲ್ 06: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಿದ್ದ ಕರೆಗೆ ಕೋಟ್ಯಾಂತರ ಜನರು ಸ್ಪಂದಿಸಿದ್ದಾರೆ. ನಿನ್ನೆ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪ ಹಚ್ಚಿದ್ದಾರೆ. ಮನೆಯಲ್ಲಿ ಇರುವವರು ಮಾತ್ರವಲ್ಲದೆ, ಮನೆ ಇಲ್ಲದ ನಿರಾಶ್ರಿತರು ಸಹ ಇದನ್ನು ಪಾಲಿಸಿದ್ದಾರೆ.

ಪ್ರಧಾನ ಮಂತ್ರಿ ಮೋದಿ ತಮ್ಮ ಭಾಷಣದಲ್ಲಿ ನಿಮ್ಮ ಮನೆಯಲ್ಲಿ ಎಲ್ಲ ಲೈಟ್ ಗಳನ್ನು ಆಫ್ ಮಾಡಿ, ದೀಪ, ಮುಂಬತ್ತಿ, ಟಾರ್ಚ್, ಮೊಬೈಲ್ ಫ್ಲಾಶ್ ಲೈಟ್ ಹಾಕುವಂತೆ ಹೇಳಿದ್ದರು. ಎಲ್ಲರೂ ಅವರು ಹೇಳಿದ ಹಾಗೆಯೇ ಮಾಡಿದರು.

'ದೀಪ ಹಚ್ಚಿ ಬೀದಿಗೆ ಬನ್ನಿ': ಮಹಾರಾಷ್ಟ್ರ ಮಾಜಿ ಸಿಎಂ ಎಡವಟ್ಟು'ದೀಪ ಹಚ್ಚಿ ಬೀದಿಗೆ ಬನ್ನಿ': ಮಹಾರಾಷ್ಟ್ರ ಮಾಜಿ ಸಿಎಂ ಎಡವಟ್ಟು

ಆದರೆ, ಗುಜರಾತ್‌ನಲ್ಲಿ ಮನೆ ಇಲ್ಲದ ಬಡವರು ಕೂಡ ಇದನ್ನು ಮಾಡಿದ್ದಾರೆ. ಎಲ್ಲರೂ ಮನೆಯಲ್ಲಿ ದೀಪ ಬೆಳಗಿದರೆ, ಅವರು ರಸ್ತೆಯಲ್ಲಿಯೇ ದೀಪ ಹಚ್ಚಿದ್ದಾರೆ. ಈ ಮೂಲಕ ಕೊರೊನಾ ಓಡಿಸಲು ತಾವೂ ಕೂಡ ಜೊತೆಗಿದ್ದೆವೇ ಎನ್ನುವುದನ್ನು ತೋರಿಸಿದ್ದಾರೆ. ಈ ಫೋಟೋಗಳಗೆ ಜನರು ಪ್ರತಿಕ್ರಿಯೆ ನೀಡುತ್ತಿದ್ದಾರೆ.

Homeless People Lit Candles In Gujarat Road Side

ಮೋದಿ ಕರೆಗೆ ನಿನ್ನೆ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗಿದೆ. ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿಯ ಹಿರಿಯ ನಾಯಕ ಎಲ್‌ ಕೆ ಅಡ್ವಾಣಿ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ಸೂಪರ್ ಸ್ಟಾರ್ ರಜನಿಕಾಂತ್, ನಟ ಶಿವರಾಜ್ ಕುಮಾರ್, ಪೊಲೀಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಸೇರಿದಂತೆ ಸಾಕಷ್ಟು ಗಣ್ಯರು ದೀಪ ಬೆಳಗಿದರು.

ದೀಪ ಬೆಳಗಲು ಮೋದಿ ಕರೆಯ ಹಿಂದಿನ ಮರ್ಮ: ಹೊಸ ಪ್ರಶ್ನೆ ಹುಟ್ಟು ಹಾಕಿದ ಕುಮಾರಸ್ವಾಮಿ ಟ್ವೀಟ್!ದೀಪ ಬೆಳಗಲು ಮೋದಿ ಕರೆಯ ಹಿಂದಿನ ಮರ್ಮ: ಹೊಸ ಪ್ರಶ್ನೆ ಹುಟ್ಟು ಹಾಕಿದ ಕುಮಾರಸ್ವಾಮಿ ಟ್ವೀಟ್!

ದೇಶದ ಎಲ್ಲ ರಾಜ್ಯಗಳಲ್ಲಿಯೂ, ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ದೀಪ ಹಚ್ಚಿ, ಮೋದಿ ಕರೆಯನ್ನ ಕಾರ್ಯ ರೂಪಕ್ಕೆ ತಂದಿದ್ದಾರೆ. ಆದರೆ, ಕೆಲವು ಕಡೆ ಪಟಾಕಿ ಸಿಡಿಸಿದ್ದಾರೆ.

English summary
Homeless people lit candles in gujarat road side as per PM Narendra Modi's appeal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X