ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಿಂದ ಬಂದು ಗುಜರಾತ್ ನಲ್ಲಿ ಮದುವೆಯಾಗುವ ಈ ಸಮುದಾಯದ ಕಥೆ ಕೇಳಿ

By ಅನಿಲ್ ಆಚಾರ್
|
Google Oneindia Kannada News

ಅಹ್ಮದಾಬಾದ್ (ಗುಜರಾತ್), ಆಗಸ್ಟ್ 19: "ಮದುವೆಗಳು ಸ್ವರ್ಗದಲ್ಲಿ ನಿಶ್ಚಯ ಆಗುತ್ತದೆ" ಎಂಬ ಮಾತಿದೆ. ಆದರೆ ಪಾಕಿಸ್ತಾನದಲ್ಲಿ ಮದುವೆ ನಿಶ್ಚಯಿಸಿಕೊಂಡು, ಗುಜರಾತ್ ಗೆ ಬಂದು ಮದುವೆ ಆಗುತ್ತಿರುವ ಈ ಸಮುದಾಯದ ಬಗ್ಗೆ ವರದಿಯನ್ನು ನೀವು ಓದಬೇಕು. ಪರಿಚ್ಛೇದ 370 ರದ್ದು ಮಾಡಿ, ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ಮೇಲೆ ಭಾರತ- ಪಾಕಿಸ್ತಾನದ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಇದೆ.

ಇಂಥ ಸನ್ನಿವೇಶದಲ್ಲೂ ಕರಾಚಿಯಿಂದ ಗುಜರಾತ್ ಗೆ ಕಳೆದ ವಾರದ ಆರಂಭದಲ್ಲಿ ಬಂದಿರುವ ಹಿಂದೂ ಜೋಡಿಗಳು, ಶನಿವಾರ ಮದುವೆ ಆಗಿದ್ದಾರೆ. ಈ ಮದುವೆ ನಡೆದಿದ್ದು ರಾಜ್ ಕೋಟ್ ನಲ್ಲಿ. ಆಯೋಜನೆ ಮಾಡಿದ್ದು ರಾಜ್ ಕೋಟ್ ನ ಮಾಹೇಶ್ವರಿ ಸಮಾಜ್. ಈಗ ಮದುವೆ ಆಗಿರುವವರು ಮಾಹೇಶ್ವರಿ ಸಮಾಜಕ್ಕೆ ಸೇರಿದವರೇ.

ಹೈಕೋರ್ಟ್ ಅಣತಿಯಂತೆ ನಡೆಯಲಿದೆ ಯುವಜೋಡಿಯ ವಿವಾದಗ್ರಸ್ತ ಮದುವೆಹೈಕೋರ್ಟ್ ಅಣತಿಯಂತೆ ನಡೆಯಲಿದೆ ಯುವಜೋಡಿಯ ವಿವಾದಗ್ರಸ್ತ ಮದುವೆ

ರಾಜ್ ಕೋಟ್ ಮಾಹೇಶ್ವರಿ ಸಮಾಜ್ ನ ಯುವ ಅಧ್ಯಕ್ಷ ಭಾವೇಶ್ ಮಾಹೇಶ್ವರಿ ಮಾತನಾಡಿ, ಪಾಕಿಸ್ತಾನದ ತೊಂಬತ್ತಕ್ಕೂ ಹೆಚ್ಚು ಜೋಡಿಗಳಿಗೆ ಸಂಸ್ಥೆಯು ಸಹಾಯ ಮಾಡಿದೆ. ಆ ಪೈಕಿ ಕರಾಚಿ ಮೂಲದವರೇ ಹೆಚ್ಚು. ಮದುವೆಯಾದ ಮೇಲೆ ಭಾರತದಲ್ಲೇ ನೆಲೆ ಕಂಡುಕೊಂಡಿದ್ದಾರೆ. ಮೊನ್ನೆ ಶನಿವಾರ ಮದುವೆ ಆಗಿರುವ ಜೋಡಿ ಕೂಡ ಭಾರತದಲ್ಲೇ ಉಳಿದುಕೊಳ್ಳುವ ಆಲೋಚನೆಯಲ್ಲಿದೆ ಎಂದಿದ್ದಾರೆ.

Hindu Couple Came To Gujarat From Pakistan For Marriage

ಕಳೆದ ವರ್ಷ ಪಾಕಿಸ್ತಾನದ ಹದಿನೈದು ಜೋಡಿಗಳಿಗೆ ಮದುವೆ ಆಯೋಜಿಸಿದ್ದೆವು. ಈ ವರ್ಷ ಎರಡು ಜೋಡಿಗಳು ಬಂದಿವೆ. ಹಲವು ಪ್ರಕರಣಗಳಲ್ಲಿ ವಧು- ವರ ಇಬ್ಬರೂ ಪಾಕಿಸ್ತಾನದಿಂದ ಬಂದವರೇ ಎಂದು ಕೂಡ ಅವರು ಹೇಳಿದ್ದಾರೆ.

ನಮ್ಮ ಸಮುದಾಯದವರಿಗೆ ಆ ದೇಶದಲ್ಲಿ ಶೋಷಣೆ ಆಗುತ್ತಿದೆ. ಪಾಕಿಸ್ತಾನದಲ್ಲಿ ಹಿಂದೂಗಳು ವಾಸಿಸುವುದು ಬಲು ಕಷ್ಟ. ಅವರು ಹಣ ಸಂಪಾದಿಸುತ್ತಾರೆ. ಆದರೆ ಬದುಕು ಯಾವಾಗಲೂ ಅಪಾಯದಲ್ಲಿ ಇರುತ್ತದೆ. ಪಾಕಿಸ್ತಾನದಲ್ಲಿ ಅವರ ಮದುವೆ ಬಹಳ ಸರಳವಾಗಿ ಆಗುತ್ತದೆ. ಇಲ್ಲಿ ನಾವು ದೊಡ್ಡ ಮಟ್ಟದಲ್ಲಿ ಆಯೋಜಿಸುತ್ತೇವೆ; ಹೇಗೆ ಅದ್ಧೂರಿಯಾಗಿ ಆಗಬೇಕು ಎಂದು ಬಯಸುತ್ತಾರೋ ಅದೇ ರೀತಿ ಮದುವೆ ಇರುತ್ತದೆ ಎಂದು ಹೇಳಿದ್ದಾರೆ.

370 ವಿಧಿ ಪರಿಣಾಮ: ಜಮ್ಮು ಮತ್ತು ಕಾಶ್ಮೀರದಲ್ಲಿ ಮದುವೆಗಳು ರದ್ದು370 ವಿಧಿ ಪರಿಣಾಮ: ಜಮ್ಮು ಮತ್ತು ಕಾಶ್ಮೀರದಲ್ಲಿ ಮದುವೆಗಳು ರದ್ದು

ಮೂರು ಸಾವಿರದಷ್ಟು ಮಾಹೇಶ್ವರಿ ಕುಟುಂಬಗಳು ಕರಾಚಿಯಲ್ಲಿ ವಾಸವಾಗಿವೆ ಎಂದಿರುವ ಅವರು, ಅಲ್ಲಿಂದ ಇಲ್ಲಿಗೆ ಬರುವವರು ದೀರ್ಘಾವಧಿ ವೀಸಾ ಪಡೆಯುತ್ತಾರೆ. ಇಲ್ಲಿಗೆ ಬಂದ ಮೇಲೆ ನಿರಂತರವಾಗಿ ವೀಸಾ ಅವಧಿ ವಿಸ್ತರಣೆ ಮಾಡಿಸುತ್ತಲೇ ಇರುತ್ತಾರೆ ಎಂದು ತಿಳಿಸಿದ್ದಾರೆ.

ಈಚೆಗೆ ಕರಾಚಿಯಿಂದ ಬಂದು ಮದುವೆ ಆಗಿರುವ ಅನಿಲ್ ಮಾಹೇಶ್ವರಿ ಮಾತನಾಡಿ, ವಿಭಜನೆ ಸಂದರ್ಭದಲ್ಲಿ ಸಮುದಾಯದ ಹಲವು ಮಂದಿ ಪಾಕಿಸ್ತಾನದಲ್ಲೇ ಉಳಿದುಹೋದರು. ಅವರು ಭಾರತಕ್ಕೆ ಬಂದು ನೆಲೆಯಾಗಲು ಬಯಸುತ್ತಾರೆ ಎಂದು ಹೇಳಿದ್ದಾರೆ.

English summary
Maheshwari community couple who came from Pakistan (Karachi) got married in Rajkot. Here is the complete details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X