• search
 • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಏಕತಾ ದಿವಸದಂದು ಪ್ರಧಾನಿ ನರೇಂದ್ರ ಮೋದಿ ಭಾಷಣ: ಮುಖ್ಯಾಂಶಗಳು

|

ಅಹಮದಾಬಾದ್, ಅಕ್ಟೋಬರ್ 31: 'ಉಕ್ಕಿನ ಮನುಷ್ಯ' ಖ್ಯಾತಿಯ ಮಾಜಿ ಪ್ರಧಾನಿ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಜನ್ಮ ದಿನೋತ್ಸವದ 'ರಾಷ್ಟ್ರೀಯ ಏಕತಾ ದಿವಸ'ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಟೇಲ್ ಅವರ ಪ್ರತಿಮೆಗೆ ಗೌರವ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಅವರು ಅಹಮದಾಬಾದಿನ ಸಬರಮತಿ ರಿವರ್ ಫ್ರಂಟ್‌ನಲ್ಲಿ ಏಕತೆಯ ಪ್ರತಿಮೆಗೆ ಸಂಪರ್ಕಿಸುವ ಸೀಪ್ಲೇನ್ ಸೇವೆಗೆ ಚಾಲನೆ ನೀಡಿದರು.

ಭಾರತದ ಏಕೀಕರಣದಲ್ಲಿ ಪಟೇಲ್ ಅವರ ಕೊಡುಗೆಯನ್ನು ಸ್ಮರಿಸಿದ ಮೋದಿ, ಇಂದು ಜಗತ್ತು ಭಯೋತ್ಪಾದನೆಯಂತಹ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿರುವಾಗ ಏಕತೆ ಅತ್ಯಂತ ಮಹತ್ವದ್ದಾಗಿದೆ ಎಂದರು.

ಯಾರನ್ನೂ ಬಿಡುವುದಿಲ್ಲ, ಪ್ರತಿ ಭಾರತೀಯನಿಗೂ ಲಸಿಕೆ ಸಿಗಲಿದೆ: ಪ್ರಧಾನಿ ಮೋದಿ

ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಜಗತ್ತಿನ ಎಲ್ಲ ದೇಶಗಳೂ ಒಗ್ಗೂಡಬೇಕಿದೆ. ಭಯೋತ್ಪಾದನೆಯಿಂದಾಗಿ ಭಾರತವು ಸಾವಿರಾರು ಯೋಧರನ್ನು ಕಳೆದುಕೊಂಡಿದೆ. ನಮಗೆ ಉಗ್ರವಾದದ ನೋವು ಗೊತ್ತಿದೆ. ಶಾಂತಿ ಎನ್ನುವುದು ಏಕತೆ ಮತ್ತು ಸೌಹಾರ್ದತೆಯು ಮಾನವೀಯತೆ ನೈಜ ಗುರುತು. ಭಯೋತ್ಪಾದನೆ ಮತ್ತು ಹಿಂಸಾಚಾರದಿಂದ ಯಾವುದೇ ಕಲ್ಯಾಣ ಸಾಧ್ಯವಿಲ್ಲ ಎಂದು ಹೇಳಿದರು. ಮುಂದೆ ಓದಿ.

ನಿಮ್ಮನ್ನು ದೇಶ ಮರೆಯುವುದಿಲ್ಲ

ನಿಮ್ಮನ್ನು ದೇಶ ಮರೆಯುವುದಿಲ್ಲ

ಪುಲ್ವಾಮಾ ದಾಳಿಯ ವೇಳೆ ನಮ್ಮ ಭದ್ರತಾ ಪಡೆಗಳ ತ್ಯಾಗದ ಬಗ್ಗೆ ಕೊಂಚವೂ ದುಃಖಿತರಾಗದ ಕೆಲವು ಜನರನ್ನು ನಮ್ಮ ದೇಶ ಎಂದಿಗೂ ಮರೆಯುವುದಿಲ್ಲ ಎಂದು ವಿರೋಧಪಕ್ಷಗಳ ವಿರುದ್ಧ ಕಿಡಿಕಾರಿದ ಮೋದಿ, ತಮ್ಮ ವೈಯಕ್ತಿಕ ಲಾಭಗಳಿಗಾಗಿ ಕೀಳು ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ದೇಶದ ಹಿತಾಸಕ್ತಿಯಿಂದ ಅಂತಹ ರಾಜಕಾರಣ ಮಾಡಬೇಡಿ ಎಂದು ಮನವಿ ಮಾಡಿದರು.

ಗುಜರಾತ್‌: ಪ್ರಧಾನಿ ಮೋದಿ ಭದ್ರತೆಗೆ ನಿಯೋಜನೆಗೊಂಡಿದ್ದ 23 ಪೊಲೀಸರಿಗೆ ಕೊರೊನಾ ಸೋಂಕು

ಕೀಳುಮಟ್ಟದ ರಾಜಕಾರಣ

'ಪುಲ್ವಾಮಾ ದಾಳಿಯ ಬಳಿಕ ನೀಡಲಾದ ಅಸಮಂಜಸವಾದ ಹೇಳಿಕೆಗಳನ್ನು ದೇಶವು ಮರೆಯಲು ಸಾಧ್ಯವಿಲ್ಲ. ದೇಶವು ವಿಪರೀತ ನೋವಿನಿಂದ ನರಳುತ್ತಿದ್ದ ಸಂದರ್ಭದಲ್ಲಿ ಕೀಳು ರಾಜಕೀಯವು ಸ್ವಾರ್ಥದೊಂದಿಗೆ ಬೆರೆತಿತ್ತು ಮತ್ತು ಅವರ ದರ್ಪವು ಪರಾಕಾಷ್ಠೆಗೆ ಹೋಗಿತ್ತು' ಎಂದು ವಾಗ್ದಾಳಿ ನಡೆಸಿದರು.

  Yediyurappa Valmiki ನಾಯಕರಿಗೆ ಒಳ್ಳೇದೇ ಮಾಡ್ತಾರೆ | Sriramulu | Oneindia Kannada
  ನೈಜಮುಖ ಅನಾವರಣ

  ನೈಜಮುಖ ಅನಾವರಣ

  ನಮ್ಮ ನೆರೆಯ ದೇಶದ ಸಂಸತ್‌ನಲ್ಲಿ ಸತ್ಯವನ್ನು ಒಪ್ಪಿಕೊಂಡ ಬಳಿಕ ಅಂತಹ ವ್ಯಕ್ತಿಗಳ ನೈಜ ಮುಖ ಅನಾವರಣಗೊಂಡಿದೆ. ತಿಳಿದೋ, ತಿಳಿಯದೆಯೋ ದೇಶ ವಿರೋಧಿ ಶಕ್ತಿಗಳ ಕೈಯಲ್ಲಿ ದಾಳವಾಗುವುದರಿಂದ ನೀವು ದೂರ ಉಳಿಯಬೇಕು ಎಂದು ಸಲಹೆ ನೀಡಿದರು.

  ಭಾರತ ಯಶಸ್ವಿಯಾಗಿ ಹೋರಾಡುತ್ತಿದೆ

  'ಜಗತ್ತಿನ ಅನೇಕ ದೇಶಗಳು ಈ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಪರದಾಡುತ್ತಿರುವಾಗ ಭಾರತವು ಧೈರ್ಯದಿಂದ ವಿರುದ್ಧ ಹೋರಾಡಿ ಅದರಿಂದ ಹೊರಬರುತ್ತಿದೆ. ಈ ಹೋರಾಟದಲ್ಲಿ ಕೋವಿಡ್ 19 ವಾರಿಯರ್‌ಗಳನ್ನು 130 ಕೋಟಿ ಭಾರತೀಯರು ಜತೆಯಾಗಿ ಗೌರವಿಸಿದ್ದಾರೆ ಎಂದರು.

  ಏಕತೆಯ ಹೊಸ ಆಯಾಮ

  'ಇಂದು ಮತ್ತೊಮ್ಮೆ ಭಾರತವು ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಮಾರ್ಗದರ್ಶನದಂತೆ ಪ್ರಗತಿ ಕಾಣುವುದಾಗಿ ತನ್ನ ಪ್ರತಿಜ್ಞೆಯನ್ನು ಪುನರಾವರ್ತಿಸುತ್ತಿದೆ. ಇಂದು ಕಾಶ್ಮೀರವು ತನ್ನ ಅಭಿವೃದ್ಧಿಯ ಹೊಸ ದಾರಿಯನ್ನು ಹಿಡಿದಿದೆ. ಈಶಾನ್ಯದಲ್ಲಿ ಶಾಂತಿ ಮರುಕಳಿಸುತ್ತಿದೆ. ಅಲ್ಲಿ ಅಭಿವೃದ್ಧಿಗೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ಮೂಲಕ ಭಾರತವು ಏಕತೆಯ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ.

  English summary
  PM Narendra Modi slams opposition over Pulwama terror attack statements on Saturday. Here is highlights of his speech on National Unity Day.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X