ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಲ್ಮೆಟ್ ಇಲ್ಲ ಅಂದ್ರೂ ಈ ವ್ಯಕ್ತಿಗೆ ದಂಡ ಹಾಕೋಕಾಗ್ತಿಲ್ಲ ಯಾಕೆ?

|
Google Oneindia Kannada News

ಗಾಂಧಿನಗರ, ಸೆಪ್ಟೆಂಬರ್ 17: ಹೆಲ್ಮೆಟ್ ಹಾಕ್ದೇ ಇದ್ರೂ ಈ ವ್ಯಕ್ತಿಗೆ ಮಾತ್ರ ಟ್ರಾಫಿಕ್ ಪೊಲೀಸರು ದಂಡ ಹಾಕೋಕೆ ಆಗ್ತಿಲ್ಲ.

ಹಾಗೆಂದ ಮಾತ್ರ ಈತ ಪೊಲೀಸ್, ರಾಜಕಾರಣಿ ಅಥವಾ ಇನ್ಯಾವುದೋ ಉನ್ನತ ಸ್ಥಾನದಲ್ಲಿರುವವರಲ್ಲ, ಬದಲಾಗಿ ಇವರ ತಲೆಗೆ ಸರಿಹೊಂದು ಹೆಲ್ಮೆಟ್ ಇನ್ನೂ ಅವರಿಗೆ ಸಿಕ್ಕಿಲ್ಲವಂತೆ ಎನ್ನುವುದೇ ಆಶ್ಚರ್ಯ.

8 ದಿನದಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಸಂಗ್ರಹಿಸಿದ ದಂಡವೆಷ್ಟು?8 ದಿನದಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಸಂಗ್ರಹಿಸಿದ ದಂಡವೆಷ್ಟು?

ಈತ ಧರಿಸಬಹುದಾದ ಹೆಲ್ಮೆಟ್​​ ಯಾವುದೇ ಅಂಗಡಿಯಲ್ಲಿ ಸಿಗುತ್ತಿಲ್ಲ. ಒಂದು ವೇಳೆ ಸಿಕ್ಕ ಹೆಲ್ಮೆಟ್​​ ಧರಿಸಿದರೂ ಪ್ರಯೋಜನವಿಲ್ಲ. ಇಂತಹ ವಿಚಿತ್ರ ಘಟನೆಯೊಂದು ಗುಜರಾತ್‌ನಲ್ಲಿ ನಡೆದಿದೆ.

Helmet Is Not Available Which Can Fit Into This Gujarat Man

ಇವರ ಹೆಸರು ಜಾಕೀರ್ ಮಮೂನ್ ಎಂದು, ಇವರು ಹೆಲ್ಮೆಟ್ ಹಾಕದಿದ್ದರೂ ಪೊಲೀಸರು ದಂಡ ವಿಧಿಸಲು ಹಿಂದೆ ಮುಂದೆ ನೋಡುವಂತಾಗಿದೆ.

ಅದು ಆ ವ್ಯಕ್ತಿಯ ತಪ್ಪಲ್ಲ, ಆದರೆ ಅವರ ತಲೆಗೆ ಸರಿ ಹೊಂದುವ ಹೆಲ್ಮೆಟ್ ಇಲ್ಲ ಎನ್ನುವುದೇ ಆಶ್ಚರ್ಯಕರ ಸಂಗತಿಯಾಗಿದೆ.ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೇ ಟ್ರಾಫಿಕ್​​ ಪೊಲೀಸರು ಹೊಸ ಮೋಟರು ಕಾಯ್ದೆಯಡಿ ಭಾರೀ ದಂಡ ಕಟ್ಟಿಸಿಕೊಳ್ಳುತ್ತಿದ್ದಾರೆ.

ದುಬಾರಿ ದಂಡ: ವಾಹನ ಸವಾರರಿಗೆ ಕೊಂಚ ಸಮಾಧಾನ ನೀಡಿದ ಕೇಂದ್ರ ಸರ್ಕಾರದುಬಾರಿ ದಂಡ: ವಾಹನ ಸವಾರರಿಗೆ ಕೊಂಚ ಸಮಾಧಾನ ನೀಡಿದ ಕೇಂದ್ರ ಸರ್ಕಾರ

ದುಬಾರಿ ದಂಡ ಕಟ್ಟಲಾಗದೇ ಸವಾರರು ಬಿಸಿಲಿನಲ್ಲಿಯೂ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದಾರೆ. ಇದರಿಂದ ಸಾಕಷ್ಟು ಸಮಸ್ಯೆಗಳಾಗುತ್ತಿವೆ ಎಂದು ಪರಿಹಾರ ನೀಡುವ ಸಲುವಾಗಿ ಬೆಂಗಳೂರಿನ ಸಂದೀಪ್ ಎಂಬುವರೊಬ್ಬರು ಪೋರ್ಟಬಲ್ ಏರ್ ಕಂಡೀಷನರ್ ಹೊಂದಿರುವ ಹೆಲ್ಮೆಟ್ ಅಭಿವೃದ್ಧಿಪಡಿಸಿದ್ದಾರೆ.

ಕೇಂದ್ರ ಸರ್ಕಾರವೂ ಹೊಸ ಮೋಟಾರ್ ವಾಹನ ಕಾಯ್ದೆಯನ್ನು ಸೆಪ್ಟೆಂಬರ್ 1ರಿಂದಲೇ ದೇಶಾದ್ಯಂತ ಜಾರಿಗೊಳಿಸಲಾಗಿದೆ. ಈ ಕಾಯ್ದೆಯಡಿ ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನ ಚಲಾಯಿಸಿವರಿಗೆ ರೂ. 1,000 ದಂಡ ವಿಧಿಸಲಾಗುತ್ತದೆ.

English summary
Helmet Is Not Available Which Can Fit Into This Gujarat Man , Helmet Size does matter For this man.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X