ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುವಾರ ಕಮಲದ ಕೈ ಹಿಡಿಯಲಿರುವ ಹಾರ್ದಿಕ್ ಪಟೇಲ್: ಮೂಲಗಳು

|
Google Oneindia Kannada News

ಅಹಮದಾಬಾದ್ ಮೇ 31: ಇತ್ತೀಚೆಗೆ ಕಾಂಗ್ರೆಸ್ ತೊರೆದಿದ್ದ ಹಾರ್ದಿಕ್ ಪಟೇಲ್ ಗುರುವಾರ ಬಿಜೆಪಿ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 2019 ರಲ್ಲಿ ಕಾಂಗ್ರೆಸ್‌ನೊಂದಿಗೆ ರಾಜಕೀಯ ವೃತ್ತಿಜೀವನ ಪ್ರಾರಂಭಿಸಿದ 28 ವರ್ಷದ ಗುಜರಾತ್ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರವನ್ನು ನೀಡಿ ಮೇ 18 ರಂದು ಪಕ್ಷವನ್ನು ತೊರೆದರು.

ಕಾಂಗ್ರೆಸ್‌ನ ಹಿರಿಯ ನಾಯಕತ್ವದ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಹಾರ್ದಿಕ್ ಪಟೇಲ್ ತಮ್ಮ ರಾಜೀನಾಮೆ ಪತ್ರದಲ್ಲಿ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡಿದ್ದಾರೆ. "ಗುಜರಾತ್‌ ಕಾಂಗ್ರೆಸ್‌ನ ನಾಯಕರು ರಾಜ್ಯದ ಸಮಸ್ಯೆಗಳಿಂದ ದೂರವಿದ್ದಾರೆ. ಆದರೆ ದೆಹಲಿಯಿಂದ ಬಂದಿರುವ ನಾಯಕರಿಗೆ ಚಿಕನ್ ಸ್ಯಾಂಡ್‌ವಿಚ್ ಅನ್ನು ನೀಡಲು ಹೆಚ್ಚು ಗಮನಹರಿಸಿದ್ದಾರೆ. ಜೊತೆಗೆ ಅದನ್ನು ಅವರಿಗೆ ಸಮಯಕ್ಕೆ ಸರಿಯಾಗಿ ತಲುಪಿಸಲಾಗಿದೆ" ಎಂದು ಬರೆದಿದ್ದಾರೆ. ಪತ್ರದಲ್ಲಿ ಕಾಂಗ್ರೆಸ್ ಅನ್ನು ಸರಿಯಾದ ದಿಕ್ಕಿನಲ್ಲಿ ನಡೆಸಲು ಹಲವಾರು ಪ್ರಯತ್ನಗಳ ಹೊರತಾಗಿಯೂ, "ಪಕ್ಷವು ನಿರಂತರವಾಗಿ ದೇಶ ಮತ್ತು ಸಮಾಜದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ" ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ಗಿಂತ ಆಪ್, ಬಿಜೆಪಿ ಉತ್ತಮ ಎಂದ ಹಾರ್ದಿಕ್ ಪಟೇಲ್ಕಾಂಗ್ರೆಸ್‌ಗಿಂತ ಆಪ್, ಬಿಜೆಪಿ ಉತ್ತಮ ಎಂದ ಹಾರ್ದಿಕ್ ಪಟೇಲ್

'ಕಾಂಗ್ರೆಸ್ ಹಿರಿಯ ನಾಯಕತ್ವಕ್ಕೆ ಗಂಭೀರತೆ ಇಲ್ಲ'

'ಕಾಂಗ್ರೆಸ್ ಹಿರಿಯ ನಾಯಕತ್ವಕ್ಕೆ ಗಂಭೀರತೆ ಇಲ್ಲ'

ಪಕ್ಷದ ಹಿರಿಯ ನಾಯಕತ್ವಕ್ಕೆ ಗಂಭೀರತೆ ಇಲ್ಲ ಎಂದು ಪಾಟಿದಾರ್ ನಾಯಕ ಆರೋಪಿಸಿದ್ದಾರೆ. "ನಾನು ಹಿರಿಯ ನಾಯಕತ್ವವನ್ನು ಭೇಟಿಯಾದಾಗಲೆಲ್ಲ, ಗುಜರಾತ್ ಜನರ ಸಮಸ್ಯೆಗಳನ್ನು ಕೇಳಲು ನಾಯಕರು ನಿಜವಾಗಿಯೂ ಆಸಕ್ತಿ ಹೊಂದಿಲ್ಲ ಎಂದು ನಾನು ಯಾವಾಗಲೂ ಭಾವಿಸುತ್ತೇನೆ. ಬದಲಿಗೆ ಅವರು ತಮ್ಮ ಮೊಬೈಲ್‌ನಲ್ಲಿ ಯಾವ ಸಂದೇಶಗಳನ್ನು ಸ್ವೀಕರಿಸಿದ್ದಾರೆಂಬುದನ್ನು ನೋಡಲು ಹೆಚ್ಚು ತಲ್ಲೀನರಾಗಿದ್ದಾರೆ..." ಎಂದಿದ್ದಾರೆ.

ಬಿಜೆಪಿಗೆ ಹಾರ್ದಿಕ್ ಪಟೇಲ್ ದುಷ್ಮನ್ ಕಾ ದುಷ್ಮನ್, 'ದೋಸ್ತ್'ಬಿಜೆಪಿಗೆ ಹಾರ್ದಿಕ್ ಪಟೇಲ್ ದುಷ್ಮನ್ ಕಾ ದುಷ್ಮನ್, 'ದೋಸ್ತ್'

'ಕೈ' ನಾಯಕರನ್ನು ದೂರಿದ ಹಾರ್ದಿಕ್

ಹಾರ್ದಿಕ್ ಪಟೇಲ್ ಅವರು ಬಿಜೆಪಿಗೆ ಸೇರುವುದನ್ನು ಅಧಿಕೃತವಾಗಿ ನಿರಾಕರಿಸುತ್ತಿದ್ದಾರೆ, ಆದರೆ ಬಿಜೆಪಿ ಪಕ್ಷ ಮತ್ತು ಅದರ ನಾಯಕತ್ವದ ಬಗ್ಗೆ ಅವರ ಹೊಗಳಿಕೆಯು ವಿಭಿನ್ನ ಕಥೆಯನ್ನೇ ಹೇಳುತ್ತಿದೆ.

ಕಾಂಗ್ರೆಸ್ ತೊರೆದ ನಂತರ, ಪಾಟೀಲ್ ಅವರು 'ನಾನು ಇನ್ನೂ ಬಿಜೆಪಿಯಲ್ಲಿಲ್ಲ' ಎಂದು ಊಹಾಪೋಹಗಳಿಗೆ ತೆರೆ ಎಳೆದರು ಮತ್ತು ಬಿಜೆಪಿ ಅಥವಾ ಆಮ್ ಆದ್ಮಿ ಪಕ್ಷ (ಎಎಪಿ) ಸೇರುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದಿದ್ದಾರೆ. ಆದರೆ ಅವರ ರಾಜೀನಾಮೆ ನೀಡಿದಾಗ ಕಾಂಗ್ರೆಸ್‌ನಲ್ಲಿ ಮೂರು ವರ್ಷಗಳನ್ನು ವ್ಯರ್ಥ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದ ಹಾರ್ದಿಕ್

ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದ ಹಾರ್ದಿಕ್

"ನಾನು ಇನ್ನೂ ಬಿಜೆಪಿಗೆ ಹೋಗಿಲ್ಲ ಮತ್ತು ಹೋಗಲು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ" ಎಂದು ಹಾರ್ದಿಕ್ ಪಟೇಲ್ ಸುದ್ದಿಗಾರರಿಗೆ ತಿಳಿಸಿದರು. ಆದರೆ ಅದೇ ಸಮಯದಲ್ಲಿ ಆರ್ಟಿಕಲ್ 370 ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ, ಅಯೋಧ್ಯೆ ತೀರ್ಪು ಮತ್ತು ರದ್ದತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಬಿಜೆಪಿ ವಿರುದ್ಧ ಕಿಡಿಕಾರಿದರು.

ಗುರುವಾರ ಬಿಜೆಪಿ ಸೇರಲಿದ್ದಾರೆ ಹಾರ್ದಿಕ್?

ಗುರುವಾರ ಬಿಜೆಪಿ ಸೇರಲಿದ್ದಾರೆ ಹಾರ್ದಿಕ್?

"ಬಿಜೆಪಿ ಅಥವಾ ಎಎಪಿ ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವ ಬಗ್ಗೆ ನಾನು ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ, ನಾನು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ಅದು ಜನರ ಹಿತಾಸಕ್ತಿಗಾಗಿ" ಎಂದು ಅವರು ಹೇಳಿದ್ದಾರೆ. ಹಾರ್ದಿಕ್ ಪಟೇಲ್ ಶೀಘ್ರದಲ್ಲೇ ಪಕ್ಷ ಸೇರಲಿದ್ದಾರೆ ಎಂದು ಬಿಜೆಪಿ ಮೂಲಗಳನ್ನು ಉಲ್ಲೇಖಿಸಿ ಎನ್ ಡಿಟಿವಿ ವರದಿ ಮಾಡಿದೆ. ಈ ಬಗ್ಗೆ ಎರಡು ತಿಂಗಳಿನಿಂದ ಬಿಜೆಪಿ ಜತೆ ಅವರು ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

English summary
Hardik Patel, who recently quit the Congress, will join the BJP on Thursday, sources have said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X